ಮಂಗಳೂರು : ದಕ್ಷಿಣಕಾಶಿಯೆಂದು ಪ್ರಸಿದ್ದಿಯನ್ನು ಹೊಂದಿರುವಂತಹ ತ್ರಿಕನ್ನಾಡ್ ಶ್ರೀ ತ್ರಯಂಬಕೇಶ್ವರ ಕ್ಷೇತ್ರ ಸೀಮೆಯಲ್ಲಿರುವ ಲೋಕ ಪ್ರಸಿದ್ದಿಯನ್ನು ಹೊಂದಿರುವಂತಹ ಬೇಕಲ ಕೋಟೆಯ ಪರಿಸರದಲ್ಲಿರುವ ಯಾಗ ಭೂಮಿಯಾದ ಶಕ್ತಿನಗರದಲ್ಲಿ ಊರಿಗೆ ದೇವರ ಮನೆ ಎಂದು ಪ್ರಸಿದ್ದಿಯನ್ನು ಹೊಂದಿರುವಂತಹ ಶ್ರೀ ರವಳನಾಥ ಅಮ್ಮನವರು ಮಹಿಷಮರ್ದಿನಿ ಕ್ಷೇತ್ರವು ಸುಮಾರು 500 ವರ್ಷ ಪುರಾತನವಾಗಿದ್ದು, ಕಾಸರಗೂಡು ಜಿಲ್ಲೆಯಲ್ಲಿ ಈಗ ಪ್ರಸಿದ್ಧ ಕ್ಷೇತ್ರವಾಗಿ ಭಕ್ತರಿಗೆ ಬೇಡಿದ್ದನ್ನು ಕೊಡುವಂತ ಜಗನ್ಮಾತೆ ಎಂದು ಪ್ರಸಿದ್ದಿಯಾಗಿರುತ್ತದೆ. ಹಾಗೂ ಬಹಳ ಕಾರಣಿಕ ಕ್ಷೇತ್ರವಾಗಿರುತ್ತದೆ. ಇಲ್ಲಿ ಎಪ್ರಿಲ್ 29 ರಿಂದ ಮೇ 7 ರ ವರೆಗೆ ಬ್ರಹ್ಮಕಲಶೋತ್ಸವ ಹಾಗೂ ಸಹಸ್ರ ಚಂಡಿಕಾಯಾಗ ನಡೆಯಲಿದೆ ಎಂದು ತಾನೋಜಿ ರಾವ್ ಪವರ್ ರವರು ತಿಳಿಸಿದ್ದಾರೆ. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಸ್ಥಳದಲ್ಲಿ ಅಷ್ಟಮಂಗಳ ಪ್ರಶ್ನೆಯನ್ನಿಟ್ಟಾಗ ಕಂಡು ಬಂದ ರಹಸ್ಯವಾದ ಸ್ಥಳ ಮಹಿಮೆ ಏನೆಂದರೆ ಈ ಸ್ಥಳದಲ್ಲಿ ಇತಿಹಾಸ ಪ್ರಸಿದ್ಧವಾದ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಇತ್ತೆಂದು ಹಾಗೂ ಈ ಹಿಂದೆ ರಾಜ ಮಹಾರಾಜರ ಯಾವುದೋ ಯುದ್ಧದ ಕಾರಣ ನಶಿಸಿ ಹೋಗಿರುವುದಾಗಿ ತಿಳಿದುಬಂದಿರುತ್ತದೆ. ಈ ಪವಿತ್ರ ಸ್ಥಳದ ಮಣ್ಣಿನಲ್ಲಿ ಲೀನವಾದ ಸುಗುಣೇಂದ್ರ ತೀರ್ಥ ಶ್ರೀಪಾದರು ನೂತನ ಶ್ರೀ ಗೋಪಾಲಕೃಷ್ಣ ಕ್ಷೇತ್ರಕ್ಕೆ ಶಿಲಾನ್ಯಾಸವನ್ನು ನೆರವೇರಿಸಿ ಹೊಸದಾಗಿ ಶಿಲಾಮಯ ದೇವಸ್ಥಾನವನ್ನು ನಿರ್ಮಿಸಿ ತಾ. 08-05-2015 ರಂದು ಶ್ರೀ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠಾಪಿಸಲಾಗಿದೆ ಎಂದರು.
ಇದರಂತೆ ಇಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ ಸಹಸ್ರ ಚಂಡಿಕಾಯಾಗವನ್ನು ಜೊತೆಯಲ್ಲಿ ಮಾಡಲು ತೀರ್ಮಾನಿಸಿದ್ದು, ಅದರಂತೆ ತಾ. 07-06-2024 ರಂದು ಬಹ್ಮ ಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಸಹಸ್ರ ಚಂಡಿಕಾಯಾಗದ ಪೌರೋಹಿತ್ವವನ್ನು ನಡೆಸುವ ಡಾ| ವಿದ್ವಾನ್ ಸತ್ಯಕೃಷ್ಣ ಭಟ್ ಇವರ ಉಪಸ್ಥಿತಿಯಲ್ಲಿ 29-04-2025 ರಿಂದ 01-05-2025ರ ವರೆಗೆ ಬ್ರಹ್ಮಕಲಶೋತ್ಸವ ಹಾಗೂ 02-05-2025 ರಿಂದ 07-05-2025ರ ವರೆಗೆ ಸಹಸ್ರ ಚಂಡಿಕಾಯಾಗವನ್ನು ನಡೆಸುವರೇ ನಿಶ್ಚಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೀ ಗೋಪಾಲಕೃಷ್ಣ ದೇವರ ಪೂರ್ಣ ಅನುಗ್ರಹಕ್ಕಾಗಿ ಕೋಟಿ ತುಳಸಿ ಆರ್ಚನೆ ಹಾಗೂ ಶ್ರೀ ದೇವಿಯ ಅನುಗ್ರಹಕ್ಕಾಗಿ ಕೋಟಿ ಲಿಖಿತ ಮಂತ್ರ ಜಪಯಜ್ಞವನ್ನು ಪ್ರಾರಂಭಿಸಲಾಗಿದ್ದು, ಇದು ಬಹಳ ಶ್ರದ್ಧಾ ಭಕ್ತಿಯಿಂದ ನಡೆದುಕೊಂಡು ಬರುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ ಪವಾರ್, ಹರಿಶ್ಚಂದ್ರ ಪವಾರ್,ಆಶಾ ಬಾಲಚಂದ್ರ, ಭಾಸ್ಕರ್ ಪವಾರ್, ಗಣೇಶ್ ಪವಾರ್ ಉಪಸ್ಥಿತರಿದ್ದರು.