image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗುರುಪುರ ಕಂಬಳ ಉದ್ಘಾಟನೆ ಮಾಡಲಿದ್ದಾರೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ - ಇನಾಯತ್ ಅಲಿ

ಗುರುಪುರ ಕಂಬಳ ಉದ್ಘಾಟನೆ ಮಾಡಲಿದ್ದಾರೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ - ಇನಾಯತ್ ಅಲಿ

ಮಂಗಳೂರು: ಏಪ್ರಿಲ್ 12ರಂದು ಶನಿವಾರ ನಡೆಯಲಿರುವ ಮೂಳೂರು - ಅಡ್ಡೂರು ಜೋಡುಕರೆ ಕಂಬಳಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ಪಾಲ್ಗೊಳ್ಳಲಿದ್ದಾರ ಎಂದು ಕಂಬಳ ಸಮಿತಿಯ ಅಧ್ಯಕ್ಷರಾದ ಇನಾಯತ್ ಅಲಿ ಹೇಳಿದರು. ಅವರು ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ದ್ವಿತೀಯ ವರ್ಷದ ಹೊನಲು ಬೆಳಕಿನ ಗುರುಪುರ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಮಾತಾಡಿ, ಜಿಲ್ಲೆಯಲ್ಲಿ ನಡೆಯುವ ವರ್ಷದ ಕೊನೆಯ ಕಂಬಳವಾಗಿದ್ದು, ಜನರಿಗೆ ನೆನಪಲ್ಲಿ ಉಳಿಯುವಂತೆ ಆಯೋಜನೆ ಮಾಡಲಾಗುತ್ತದೆ. ಎಲ್ಲ ಕಂಬಳ ಪ್ರೇಮಿಗಳು ಬಂದು ಕಂಬಳೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು. 

ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ ಮಾತಾಡಿ, "ಗುರುಪುರ ಕಂಬಳ ಸರ್ವಧರ್ಮ ಜಾತಿ ಪಕ್ಷ ಬೇಧವಿಲ್ಲದೆ ಎಲ್ಲರೂ ಸೇರಿ ಆಚರಿಸುವ ಹಬ್ಬ. ಈ ಬಾರಿ ಹಿಂದಿನ ಬಾರಿಗಿಂತ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದಕ್ಕಾಗಿ ಎಲ್ಲ ರೀತಿಯ ಪೂರ್ವಸಿದ್ಧತೆಯನ್ನು ಕೈಗೊಳ್ಳಲಾಗಿದೆ" ಎಂದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ಮಾತಾಡಿ, "ಇನಾಯತ್ ಅಲಿ ಅವರಂತಹ ಸಮಾಜಪರ ಕಾಳಜಿಯುಳ್ಳ ಯುವಕರು ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.

ಗುಣಪಾಲ ಕಡಂಬ ಮಾತಾಡಿ, ಇನಾಯತ್ ಅಲಿಯಂತವರು ಮುಂದೆ ಬಂದು ಕಂಬಳವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಓಟದ ಕೋಣದ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆಗೊಳ್ಳಲಿದೆ. ಹಿಂದೆ ಮೂಲ್ಕಿ ಪೈಯೊಟ್ಟು ನಾಗರಾಜ ಅನ್ನುವ ಕೋಣದ ಹೆಸರಲ್ಲಿ ಕಂಬಳದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಸಾರಿ ಕಂಬಳದ ಕೋಣ ಪದವು ಕಾನಡ್ಕ ದೂಜನ ನೆನಪಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು. ಕಂಬಳದಲ್ಲಿ ಚಾಂಪಿಯನ್ ಆಗಿದ್ದ ದೂಜನ ಹಟ್ಟಿಗೆ ವಿರೋಧಿಗಳು ವಾಮಾಚಾರ ಮಾಡಿರುವುದನ್ನು ಅವರು ನೆನೆಸಿಕೊಂಡು, ಆದರಿಂದ ದೂಜನಿಗೆ ಅನಾರೋಗ್ಯ ಉಂಟಾಯಿತು. ಕಂಬಳ ಕ್ಷೇತ್ರದಿಂದ ಹಿಂದೆ ಉಳಿದು ಓಡಲಾರದ ಸ್ಥಿತಿಯಲ್ಲಿರುವಂತಾಯಿತು ಎಂದರು.

ಜಿಲ್ಲಾ ಕಂಬಳ ಸಮಿತಿಯ ಲೋಕೇಶ್ ಶೆಟ್ಟಿ ಮುಚೂರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ