image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರೋಹನ್ ಕಾರ್ಪೊರೇಷನ್ ನ ವಸತಿ ಸಂಕೀರ್ಣ ರೋಹನ್ ನೆಸ್ಟ್‌ಗೆ ಶಿಲಾನ್ಯಾಸ...

ರೋಹನ್ ಕಾರ್ಪೊರೇಷನ್ ನ ವಸತಿ ಸಂಕೀರ್ಣ ರೋಹನ್ ನೆಸ್ಟ್‌ಗೆ ಶಿಲಾನ್ಯಾಸ...

ಮಂಗಳೂರು: ರಾಜ್ಯದ ಪ್ರತಿಷ್ಠಿತ  ರೋಹನ್ ಕಾರ್ಪೊರೇಷನ್‌ನ ಹೊಸ ವಸತಿ ಸಂಕೀರ್ಣ 'ರೋಹನ್ ನೆಸ್ಟ್‌'ನ ಶಿಲಾನ್ಯಾಸ ಕಾರ್ಯಕ್ರಮವು ನಗರದ ಅತ್ತಾವರ-ಬಾಬುಗುಡ್ಡದಲ್ಲಿ ನಡೆಯಿತು.ಮಿಲಾಗ್ರಿಸ್‌ ಚರ್ಚ್‌ನ ಧರ್ಮಗುರು ರೆ.ಫಾ. ಬೊನೆವೆಂಚರ್ ನಝತ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್, ಶಾಸಕರಾದ ಐವನ್ ಡಿಸೋಜ, ವೇದವ್ಯಾಸ ಕಾಮತ್ ಶುಭ ಹಾರೈಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್ ಮಾತನಾಡಿ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ರೋಹನ್ ಮೊಂತೆರೋ ತನ್ನದೇ ಆದ ಛಾಪು ಮೂಡಿಸಿದ್ದಾರೆ. ರೋಹನ್ ಮೊಂತೆರೋ ಈವರೆಗೆ ಕೈಗೆತ್ತಿಕೊಂಡ ಎಲ್ಲಾ ಯೋಜನೆಗಳೂ ಗ್ರಾಹಕರ ತೃಪ್ತಿಗೆ ಪಾತ್ರವಾಗಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಕೊಡುವುದರಲ್ಲಿ ಅವರು ಎತ್ತಿದ ಕೈ. ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬೈಯಲ್ಲೂ ವಿನೂತನ ಪ್ರಾಜೆಕ್ಟ್ ನಿರ್ಮಾಣದ ಗುರಿ ಹಾಕಬೇಕಾಗಿದೆ. ರೋಹನ್ ಮೊಂತೆರೋ ಶಿಸ್ತುಬದ್ಧ ವ್ಯಕ್ತಿ. ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗಲೂ ಗ್ರಾಹಕರ ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಒಂದಿನಿತೂ ಕುಂದುಕೊರತೆ ಇಲ್ಲದ ಯೋಜನೆಗಳನ್ನು ಪೂರ್ತಿಗೊಳಿಸುವುದು ಅವರ ಹೆಗ್ಗಳಿಕೆಯಾಗಿದೆ ಎಂದರು. 

ಧರ್ಮಗುರು ರೆ.ಫಾ.ಬೊನೆವೆಂಚರ್ ನಝತ್ ಮಾತನಾಡಿ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ದಾಖಲೆಗಳನ್ನು ಮಾಡುತ್ತಿರುವ ರೋಹನ್ ಮೊಂತೆರೋ ಕೇವಲ ಲಾಭಗಳಿಕೆಯ ಉದ್ದೇಶವನ್ನು ಹೊಂದಿಲ್ಲ. ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದಾರೆ. ಜನರ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವ ಅವರು ಎಲ್ಲದರಲ್ಲೂ ಯಶಸ್ವಿಯಾಗುತ್ತಿರುವುದು ಶ್ಲಾಘನೀಯ ಎಂದರು. 

ವೇದಿಕೆಯಲ್ಲಿ ಮಾಜಿ ಕಾರ್ಪೊರೇಟರ್‌ಗಳಾದ ದಿವಾಕರ ಪಾಂಡೇಶ್ವರ, ಶೈಲೇಶ್ ಶೆಟ್ಟಿ, ಉದ್ಯಮಿ ಶಶಿಧರ ಪೈ ಮಾರೂರು, ಉದ್ಯಮಿ ಡಿಯಾನ್ ಮೊಂತೆರೋ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಷನ್‌ನ ಅಧ್ಯಕ್ಷ ರೋಹನ್ ಮೊಂತೆರೋ ಸ್ವಾಗತಿಸಿ, ವಂದಿಸಿದರು. ಸಾಹಿಲ್ ಜಹೀರ್ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಮ ವರ್ಗದ ಕುಟುಂಬದ ಸ್ವಂತ ಮನೆಯನ್ನು ಹೊಂದುವ ಕನಸನ್ನು ಸಾಕಾರಗೊಳಿಸುವ ಸಲುವಾಗಿ ನಿರ್ಮಾಣಗೊಳ್ಳಲಿರುವ ರೋಹನ್ ನೆಸ್ಟ್ ಎರಡು ಬಿ.ಎಚ್.ಕೆ.ಯ 58 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿವೆ. ಮೂರು ಮಹಡಿಗಳಲ್ಲಿ ಹರಡಿಕೊಳ್ಳಲಿದ್ದು, ಪ್ರತಿ ಘಟಕವು ಉತ್ತಮ ಸ್ಥಳಾವಕಾಶವನ್ನು ಹೊಂದಿದೆ.

695ರಿಂದ 715 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್‌ಮೆಂಟ್‌ಗಳು ಆಧುನಿಕ ನಗರ ಕುಟುಂಬಗಳ ಗಳನ್ನು ಪೂರೈಸಲಿದೆ. ಸ್ವಯಂಚಾಲಿತ ಲಿಫ್ಟ್‌ಗಳು, ಶ್ ಬ್ಯಾಕಪ್, ವಿಟ್ರಿಫೈಡ್ ಟೈಲ್ ಫ್ಲೋರಿಂಗ್, ಸುರಕ್ಷತೆಗಾಗಿ ಸರ್ವಿಲೆನ್ಸ್ ಕ್ಯಾಮೆರಾಗಳು ಸಹಿತ ಹಲವು ಸೌಲಭ್ಯಗಳನ್ನು ಹೊಂದಿದೆ.

Category
ಕರಾವಳಿ ತರಂಗಿಣಿ