image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾರ್ಚ್ 26ಕ್ಕೆ ನಡೆಯಲಿದೆ "2ನೇ ವಿದ್ಯಾರ್ಥಿ ತುಳು ಸಮ್ಮೇಳನ" 2025

ಮಾರ್ಚ್ 26ಕ್ಕೆ ನಡೆಯಲಿದೆ "2ನೇ ವಿದ್ಯಾರ್ಥಿ ತುಳು ಸಮ್ಮೇಳನ" 2025

ಮಂಗಳೂರು: ತುಳು ಪರಿಷತ್‌ ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ 2 ನೇ ವಿದ್ಯಾರ್ಥಿ ತುಳು ಸಮ್ಮೇಳನ-2025 ವು ಮಾ.26 ರಂದು ಬೆಳಿಗ್ಗೆ 9.30 ಯಿಂದ ಸಂಜೆ 4ರವರೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ತುಳು ಪರಿಷತ್‌ ಅಧ್ಯಕ್ಷ ಶುಭೋದಯ ಆಳ್ವ ಹೇಳಿದರು. ಅವರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡನೇ ವಿದ್ಯಾರ್ಥಿ ತುಳು ಸಮ್ಮೇಳನದ ಅಧ್ಯಕ್ಷತೆಯನ್ನು ತುಳು ಭಾಷೆ, ತುಳು ಆರಾಧನೆ ಹಾಗೂ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿ, ಆ ಕುರಿತು ಅಮೂಲ್ಯವಾದ ಎರಡು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಲೋಕಕ್ಕೆ ಅರ್ಪಿಸಿರುವ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನ ಕಾನೂನು ವಿದ್ಯಾರ್ಥಿ ವಿಜೇತ್ ಶೆಟ್ಟಿ ವಹಿಸಲಿದ್ದಾರೆ. ಸಮ್ಮೇಳನದ ಉದ್ಘಾಟನೆಯನ್ನು ತುಳು ಭಾಷೆ ಹಾಗೂ ಕಲೆಗಳ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿರುವ ಪೊಂಪೈ ಕಾಲೇಜು ಐಕಳದ ತೃತೀಯ ಬಿ.ಎ. ವಿದ್ಯಾರ್ಥಿನಿ ಸನ್ನಿಧಿ ನಡೆಸಲಿದ್ದು, ನಾಡಿನ ಖ್ಯಾತ ತುಳು ವಿದ್ವಾಂಸೆ ಡಾ. ಇಂದಿರಾ ಹೆಗ್ಗಡೆಯವರು ಶುಭಾಶಂಸನೆಗಳನ್ನು ಮಾಡಲಿದ್ದಾರೆ ಹಾಗೂ ಸಂವಾದದ ಸಮನ್ವಯಕಾರರಾಗಿ ಪಾಲುಗೊಳ್ಳಲಿದ್ದಾರೆ. ಮಧ್ಯಾಹ್ನ 12 ರಿಂದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಣೀಯವಾದ 'ತುತ್ತೈತ' (ವಸ್ತ್ರವಿನ್ಯಾಸ ಮತ್ತು ಅಲಂಕಾರ) ಸ್ಪರ್ಧೆ ನಡೆಯಲಿದೆ. ಸಮ್ಮೇಳನದ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರ ನೃತ್ಯ ಹಾಗೂ ಭಾಷಣಗಳನ್ನು ಪ್ರಸ್ತುತಿಪಡಿಸಲಾಗುವುದು ಹಾಗೂ ಬಹುಮಾನಗಳನ್ನು ವಿತರಿಸಲಾಗುವುದು. ಮದ್ಯಾಹ್ನ 3 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ತುಳು ಪರಿಷತ್ ಪ್ರಶಸ್ತಿ ಪ್ರದಾನ, ಸನ್ಮಾನ, ಅಭಿನಂದನಾ ಕಾರ್ಯಕ್ರಮ ಜರುಗಲಿದೆ. ಬೋಜ ಸುವರ್ಣ ರವರಿಗೆ ತುಳು ಸಿನಿಮಾ, ನಾಟಕಗಳಿಗೆ ತುಳು ಹಾಡುಗಳನ್ನು ಬರೆದ ಸಾಧನೆಗಾಗಿ 2025 ನೇ ಸಾಲಿನ ’ಡಾ.ಪ್ರಭಾಕರ್ ನೀರ್‌ಮಾರ್ಗ ತುಳು ಪರಿಷತ್ ಪ್ರಶಸ್ತಿ-2025’ ಯನ್ನು ನೀಡಲಾಗುವುದು. ಮಂಗಳೂರು ವಿಶ್ವವಿದ್ಯಾನಿಲಯದ 2024ನೇ ಸಾಲಿನ ಬಿ.ಕಾಂ. ಅಂತಿಮ ಸೆಮಿಸ್ಟರ್‌ ನಲ್ಲಿ 650 ಕ್ಕೆ 650 ಅಂಕಗಳನ್ನು ಪಡೆದು ಪ್ರಥಮ ರ್ಯಾಂಕ್ ಪಡೆದ ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿನಿ ಆರಾಧನಾ ಶೆಣೈ ರವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ತುಳು ಪರಿಷತ್‌ ಗೌರವಾಧ್ಯಕ್ಷ ಡಾ. ಪ್ರಭಾಕರ್ ನೀರ್‌ಮಾರ್ಗ, ಉಪಾಧ್ಯಕ್ಷೆ ಚಂದ್ರಕಲಾ ರಾವ್, ಕೋಶಾಧಿಕಾರಿ ಸುಮತಿ ಹೆಗ್ಡೆ, ಕಾರ್ಯದರ್ಶಿ ಅಮಿತಾ ಅಶ್ವಿನ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ