ಮಂಗಳೂರು: ಸಾಯಿಶಕ್ತಿ ಕಲಾ ಬಳಗ ಅರ್ಪಣೆ ಮಾಡುವ ಎರಡನೇ ಕಲಾಕಾಣಿಕೆ 'ಜೋಡು ಜೀಟಿಗೆ' ನಾಟಕದ 25ನೇ ಅದ್ಧೂರಿ ಪ್ರದರ್ಶನ ಸಂಭ್ರಮಾಚರಣೆ ಮಂಗಳೂರಿನ ಪುರಭವನದಲ್ಲಿ ಇದೇ ಬರುವ ತಾರೀಕು ಮಾರ್ಚ್ 23, 2025, ಭಾನುವಾರ ಸಂಜೆ 5:30ಕ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದ ನಾಟಕ ತಂಡ, ತುಳು ರಂಗಭೂಮಿಯ ಇತಿಹಾಸದಲ್ಲಿ ಅದ್ಭುತ ಸಾಧನೆಯೊಂದಕ್ಕೆ ಸಾಯಿಶಕ್ತಿ ಕಲಾ ಬಳಗ ಮುನ್ನುಗಿದೆ ಈ ನಾಟಕವು ಮುಂಬಯಿ ಮತ್ತು ಉಡುಪಿ ಮತ್ತು ಕಾಸರಗೋಡಿನಲ್ಲಿ ಏಕಕಾಲದಲ್ಲಿ ಪ್ರದರ್ಶನಗೊಳ್ಳುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.
ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ಮಾಣ ಮತ್ತು ನಿರ್ದೇಶನದ ಶ್ರೀಯುತ ಕೀರ್ತನ್ ಭಂಡಾರಿ ಕುಲಾಯಿ ರಚನೆಯ, ಗೌರವ್ ಶೆಟ್ಟಿಗಾರ್ ಮಠದಕಣಿ ಇವರ ನಿರ್ವಹಣೆಯಲ್ಲಿ ನಾಟಕ ಮೂಡಿ ಬಂದಿದೆ. ಕಾರ್ಯಕ್ರಮದ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್, ಶ್ರೀ ಶಿರಡಿ ಸಾಯಿಬಾಬ ಮಂದಿರ, ಚಿಲಿಂಬಿಯ ಟ್ರಸಿ ಶ್ರೀ ವಿಶ್ವಾಸ್ ಕುಮಾರ್ ದಾಸ್, ಜ್ಯೋತಿಷ್ಯರಾದ ಶ್ರೀ ಎಚ್. ಟಿ. ರಾಧಕೃಷ್ಣ ಶಾಸ್ತ್ರಿ,ಶ್ರೀ, ಶ್ರೀಮತಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಮುಂಬಯಿ, ಕುದ್ರೋಳಿ ಭಗವತಿ ಕ್ಷೇತ್ರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀ ಉಷಾ ಪ್ರಭಾಕರ್ ಯೆಯ್ಯಾಡಿ, ಹಿಂದುಳಿದ ವಿಭಾಗ ಕಾಂಗ್ರೆಸ್ ಉಳ್ಳಾಲ ಇದರ ಉಪಾಧ್ಯಕ್ಷರಾದ ಪ್ರಕಾಶ್ ಕುಂಪಲ, ಅಸ್ತ್ರ, ಗ್ರೂಪ್ CEO ಲಂಚುಲಾಲ್ ಕೆ.ಎಸ್. ಒಡಿಯೂರು ಶ್ರೀ ವಿವಿದೊದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ರಾಘವೇಂದ್ರ ಕುಡ್ಡ,ಆರ್.ಕೆ ಎಸೊಶಿಯೆಟ್ಸ್ ನ ಗಣೇಶ್ ಅತ್ತಾವರ, ದಿನೇಶ್ ಕುಲಾಲ್, ಅಧ್ಯಕ್ಷರು, ವೆಂಕಟೇಶ ಭಜನಾ ಮಂದಿರ, ಬೋಳೂರು,ಚಿದಾನಂದ ಕೆದಿಲಾಯ, ವಕೀಲರು, ಶ್ರೀ ಲೋಕಯ್ಯ ಶೆಟ್ಟಿಗಾರ್, ಮಾಲಕರು, ಭವಾನಿ ಕೇಟರರ್ಸ್ ಇವರು ಪಾಲ್ಗೊಳ್ಳಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಖ್ಯಾತ ರಂಗ ನಟ, ಲೇಖಕ ಹಾಗೂ ನಿರ್ದೇಶಕ ಶ್ರೀ ಸುಧೀರ್ ರಾಜ್ ಉರ್ವ ಮತ್ತು ಪ್ರಖ್ಯಾತ ಸಂಗೀತ ನಿರ್ದೇಶಕ ಬಿ.ಎಸ್. ಕಾರಂತ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಾವಣ್ಯ ವಿಶ್ವಾಸ್ ದಾಸ್, ತುಳಸಿದಾಸ್ ಉರ್ವ,ಪ್ರಶಾಂತ್ ದೇವಾಡಿಗ,ಜಗದೀಶ್,ವಿಕ್ರಮ್ ಕೊಲ್ಯ ಉಪಸ್ಥಿತರಿದ್ದರು.