image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೊಂಕಣಿ ಪ್ರಶಸ್ತಿಗೆ ಪ್ಯಾಟ್ರಿಕ್ ಮೊರಾಸ್, ಜೋಯಲ್ ಪಿರೇರಾ, ಸೊಬಿನಾ ಮೊತೇಶ್ ಆಯ್ಕೆ

ಕೊಂಕಣಿ ಪ್ರಶಸ್ತಿಗೆ ಪ್ಯಾಟ್ರಿಕ್ ಮೊರಾಸ್, ಜೋಯಲ್ ಪಿರೇರಾ, ಸೊಬಿನಾ ಮೊತೇಶ್ ಆಯ್ಕೆ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿಗೆ ನಗರದ ಎಂ.ಪ್ಯಾಟ್ರಿಕ್ ಮೊರಾಸ್, ಕಲಾ ಪ್ರಶಸ್ತಿಗೆ ಜೊಯಲ್‌ ಪಿರೇರಾ ಹಾಗೂ ಜಾನಪದ ಪ್ರಶಸ್ತಿಗೆ ಹಳಿಯಾಳದ ಸೊಬೀನಾ ಮೊತೇಶ್ ಕಾಂಬ್ರೆಕರ್ ಅವರನ್ನು ಆಯ್ಕೆ ಮಾಡಿದೆ

 ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಪ್ಯಾನಿ ಅಲ್ವಾರಿಸ್ ತಿಳಿಸಿದರು. ಅವರು ನಗರದ ಖಾಸಗಿ ಹೊಟೆಲಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,  2024ನೇ ಸಾಲಿನ ಕೊಂಕಣಿ ಪುಸ್ತಕ ಪುರಸ್ಕಾರದ ಕವಿತೆ ವಿಭಾಗದಲ್ಲಿ ದೇರೇಬೈಲ್‌ನ ಫೆಲ್ಸಿ ಲೋಬೊ ಅವರ 'ಪಾಲ್ವಾ ಪೊಂತ್' ಕವನ ಸಂಕಲನ ಹಾಗೂ ಲೇಖನ ವಿಭಾಗದಲ್ಲಿ ಕಾರ್ಕಳದ ವಲೇರಿಯನ್ ಸಿಕ್ವೆರಾ ಅವರ 'ಶೆತಾಂ ಭಾಟಾಂ ತೊಟಾಂನಿ' ಕೃತಿ ಆಯ್ಕೆಯಾಗಿದೆ. ಗೌರವ ಪ್ರಶಸ್ತಿಗೆ ಪಾತ್ರರಾದವರಿಗೆ ₹ 50 ಸಾವಿರ ಹಾಗೂ ಪುಸ್ತಕ ಪುರಸ್ಕಾರಕ್ಕೆ ₹ 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುತ್ತದೆ' ಎಂದು ತಿಳಿಸಿದರು.

'ಇದೇ 23ರಂದು ಸಂಜೆ 5ರಿಂದ ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ಕೊಂಕಣ್ ಭವನದಲ್ಲಿ ಮೈಸೂರಿನಲ್ಲಿ ಕೊಂಕಣಿ ಕ್ರಿಶ್ಚಿಯನ್ ಅನೋಸಿಯೇಶನ್ ಸಹಯೋಗದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ವಿಧಾನಪರಿಷತ್‌ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಡಿ.ತಿಮ್ಮಯ್ಯ, ಸಾಹಿತಿ ವಲೇರಿಯನ್‌ ಡಿಸೋಜ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸುವರು. ಸಿದ್ದಿ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್, ಕೊಂಕಣಿ ಸಂಗೀತ ರಸಮಂಜರಿಯನ್ನೂ ಏರ್ಪಡಿಸಲಾಗಿದೆ' ಎಂದರು.

Category
ಕರಾವಳಿ ತರಂಗಿಣಿ