image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇವರು ಗರ್ಭ ಗುಡಿಯಲ್ಲಿ ಕುಳಿತು ಭಕ್ತರಿಗೆ ಅನುಗ್ರಹ ನೀಡಬೇಕಾದರೆ ಭಕ್ತಿ, ಶ್ರದ್ಧೆಯ ಪ್ರಾರ್ಥನೆ ಅವಶ್ಯ - ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ

ದೇವರು ಗರ್ಭ ಗುಡಿಯಲ್ಲಿ ಕುಳಿತು ಭಕ್ತರಿಗೆ ಅನುಗ್ರಹ ನೀಡಬೇಕಾದರೆ ಭಕ್ತಿ, ಶ್ರದ್ಧೆಯ ಪ್ರಾರ್ಥನೆ ಅವಶ್ಯ - ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ

ಮಂಗಳೂರು: ದೇವರು ಗರ್ಭ ಗುಡಿಯಲ್ಲಿ ಕುಳಿತು ಭಕ್ತರಿಗೆ ಅನುಗ್ರಹ ನೀಡಬೇಕಾದರೆ ಊರಿನ ಜನರ ಪ್ರೀತಿ, ಭಕ್ತಿ, ಶ್ರದ್ಧೆಯ ಪ್ರಾರ್ಥನೆ ಅವಶ್ಯ ಎಂದು ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ನುಡಿದರು.ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಸಂದರ್ಭ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಕಾವೂರು ದೇವಳ ಭಕ್ತ ಜನರ ಸಹಕಾರದಲ್ಲಿ ಅಭಿವೃದ್ಧಿಗೊಂಡು ಕಾಶಿ ವಿಶ್ವನಾಥನ ದೇವಾಲಯದಂತೆ ಕಂಗೊಳಿಸುತ್ತಿದೆ. ಅಷ್ಟಬಂಧ ಬ್ರಹ್ಮಕಲಶದ ಸಂದರ್ಭದಲ್ಲಿ ಬರುವ ಭಕ್ತರು ನಂತರವೂ ದೇವಾಲಯಕ್ಕೆ ಬಂದು ದೇವರ ಪೂಜೆಯಲ್ಲಿ ಪಾಲ್ಗೊಳ್ಳುವುದು ಅವಶ್ಯ. ಮಗುವಿನಂತೆ ದೇವರಿಗೆ ಭಕ್ತಿ, ಶ್ರದ್ಧೆಯಿಂದ ಪೂಜಿಸಿದಾಗ ದೇವರು ಕೂಡಾ ಸಂತೋಷವಾಗಿರುತ್ತಾರೆ ಎಂದವರು ಹೇಳಿದರು.

ಶ್ರೀ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಕೆ.ಹರಿನಾರಾಯಣದಾಸ ಆಸ್ರಣ್ಣ ಉಪನ್ಯಾಸ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ದೆ ಮಮತಾ ಗಟ್ಟಿ, ಮೂಲ್ಕಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಮೊಕ್ತೇಸರ ಪುರಂದರ, ಅದ್ಯಪಾಡಿ ಶ್ರೀ ಆದಿನಾಥೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ.ಸುಜಿತ್ ಆಳ್ವ, ಶಿಬರೂರು ಶೀ ಕೊಡಮಣಿತ್ತಾಯ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಶಿಬರೂರು, ಕುಡುಪು ಶ್ರೀ ಅನಂತಪದ್ಮನಾಭ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ  ಕೆ., ಕಾವೂರು ವೃತ್ತ ನಿರೀಕ್ಷಕ ರಾಘವೇಂದ್ರ, ಉದ್ಯಮಿ ಹರೀಶ್ ಮಲ್ಲಿ, ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ, ಕೊಂರ್ಗಿಬೈಲು ಆಡಳಿತ ಮೊಕ್ತೇಸರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ನರೇಶ್ ರೈ ದೆಪ್ಪುಣಿಗುತ್ತು, ಮನಪಾ ಮಾಜಿ ಮೇಯರ್ ಜಯಾನಂದ ಅಂಚನ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆಶಿಕ್ ಬಳ್ಳಾಲ್ ಕೂಳೂರುಬೀಡು ಮೊದಲಾದವರಿದ್ದರು. ಈ ಸಂದರ್ಭ ಸಾಹಿತಿ ರೂಪಕಲಾ ಆಳ್ವ ಅವರನ್ನು ಗೌರವಿಸಲಾಯಿತು.

ಬ್ರಹ್ಮಕಲಶೋತ್ಸವಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಸದಸ್ಯ ಪುರುಷೋತ್ತಮ ಎನ್. ಪೂಜಾರಿ ವಂದಿಸಿದರು.  ರಾತ್ರಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರುಗಿತು. ಪಟ್ಲ ಅಭಿಮಾನಿ ಬಳಗ ಕಾವೂರು ಇದರ ವತಿಯಿಂದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಗೌರವಿಸಿ, ಟ್ರಸ್ಟ್‌ಗೆ 1 ಲಕ್ಷ ರೂ. ಕೊಡುಗೆಯಾಗಿ ನೀಡಲಾಯಿತು.

Category
ಕರಾವಳಿ ತರಂಗಿಣಿ