ಮಂಗಳೂರು ; ಶಕ್ತಿನಗರ ಕಾನಡ್ಕದ ಶ್ರೀ ಕೃಷ್ಣ ಮಂದಿರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಶಾಸಕರಾದ ಶ್ರೀ ವೇದವ್ಯಾಸ ಕಾಮತ್‌ರವರು 6:30ಕ್ಕೆ ಬಂದಿದ್ದು. ನಂತರ ನಾನು ಬಂದಿದ್ದೇನೆ. ಆಗ ಶ್ರೀಮತಿ ಆಶಾ ಮತ್ತು ಶ್ರೀ ದಯಾನಂದ ನಾಯ್ಕ, ಶ್ರೀ ಯಶವಂತ ಪ್ರಭು, ಶ್ರೀ ಸುಶಾಂತ್ ಇವರು ನನ್ನನ್ನು ಮಾತನಾಡಿಸಿ ಶಾಸಕ ಶ್ರೀ ವೇದವ್ಯಾಸ್ ಕಾಮತ್ ಪ್ರತಿ ಸಲ ಶಕ್ತಿನಗರಕ್ಕೆ ಬರುವಾಗ ನಮ್ಮನ್ನು ಗೇಲಿ ಮಾಡುತ್ತಿರುತ್ತಾರೆ ಎಂದು ನನ್ನ ಬಳಿ ಹೇಳಿದರು. ಶಾಸಕರು ಕಾರ್ಯಕ್ರಮ ಮುಗಿಸಿ ಹಿಂದೆ ಹೋಗುವಾಗ ಅವರಿಗೆ ನಾವು ಫೇರಾವ್ ಹಾಕುತ್ತೇವೆಂದು ಹೇಳಿದರು. ಅವರಿಗೆ ನಾನು ಶಾಸಕರಿಗೆ ಇನ್ನು ಮುಂದೆ ಆ ರೀತಿ ತಮಾಷೆ ಮಾತಾಡದಂತೆ ಹೇಳುತ್ತೇನೆ ನೀವು ಬ್ರಹ್ಮಕಲಶದ ಕೆಲಸ ಮಾಡಿ ಎಂದು ಹೇಳಿದ್ದೆ ಎಚ್.ಕೆ.ಪುರುಷೋತ್ತಮ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದರ ನಂತರ ಸುಮಾರು 8ಗಂಟೆಗೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜರವರು ಕಾರ್ಯಕ್ರಮಕ್ಕೆ ಆಗಮಿಸಿರುತ್ತಾರೆ. ಆವಾಗ ನಾವೆಲ್ಲರೂ ಸೇರಿ ಅವರಿಗೆ ಗೌರವಪೂರ್ವಕವಾಗಿ ಸ್ವಾಗತಿಸಿರುತ್ತೇವೆ. ಹಾಗೆ ವೇದಿಕೆಗೆ ಆಗಮಿಸಿದ ನಂತರ ಸುಮಾರು 9ಗಂಟೆಗೆ ತಮಗೆ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇರುವುದರಿಂದ ತೆರಳಲು ಅನುಮತಿ ಕೇಳಿದಾಗ ಅವರನ್ನು ಗೌರವಪೂರ್ವಕವಾಗಿ ಕಳುಹಿಸಿಕೊಟ್ಟಿರುತ್ತೇವೆ. ಇಷ್ಟೆಲ್ಲ ಆದ ನಂತರವೂ ಶಾಸಕರು ತೆರಳುವಾಗ ಈ ರೀತಿ ಫೇರಾವ್ ಹಾಕಿ, ಅವರನ್ನು ಏಕವಚನದಲ್ಲಿ ಅವಾಚ್ಯವಾಗಿ ಬೈದು ಪರಿಸರದ ಶಾಂತಿಯನ್ನು ಹಾಳು ಮಾಡಿರುವುದು ನಮಗೆ ತುಂಬಾ ನೋವನ್ನುಂಟು ಮಾಡಿದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್‌ರವರು ಶಕ್ತಿನಗರ ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿ ಇಲ್ಲಿ ಪಿ.ಯು. ಕಾಲೇಜು ಮಂಜೂರು ಮಾಡಿಸಿ ಹೊಸ ಕಟ್ಟಡವನ್ನು ಕಟ್ಟಿಸುವಲ್ಲಿ ಅವರು ಸತತವಾಗಿ ಪ್ರಯತ್ನಿಸಿರುತ್ತಾರೆ. ಹಾಗೆಯೇ ಸಮಸ್ತ ಶಕ್ತಿನಗರದ ಅಭಿವೃದ್ಧಿಯಲ್ಲಿ ಹಿಂದೂ ಕ್ರೈಸ್ತ ಮುಸ್ಲಿಂ ಎಂದು ಬೇಧಭಾವ ಮಾಡದೆ ಶ್ರಮಿಸಿರುತ್ತಾರೆ. ಶಾಸಕರ ಹೆಸರನ್ನು ಹಾಳು ಮಾಡಲು ಪ್ರಮುಖ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವಾಗ ಈ ರೀತಿಯ ಫೇರಾವ್ ಮಾಡಿರುವುದು ಸರಿಯಾದ ಕ್ರಮವಲ್ಲ ಎಂಬುದು ನಮ್ಮ ಅಭಿಪ್ರಾಯ ಎಂದರು.
ಶಾಸಕರ ಮತ್ತು ಜೊತೆಯಲ್ಲಿದ್ದ ಸ್ವಯಂಸೇವಕರ ಮೇಲೆ ಸುಳ್ಳು ಆರೋಪ ಹೊರಿಸಿ ಅವರ ಮೇಲೆ ಕೇಸ್ ದಾಖಲಿಸಿರುವುದು ನಮಗೆ ಬೇಸರ ತಂದಿದೆ, ಅಲ್ಲದೆ ಸರಕಾರಿ ಶಾಲಾಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಕೆಲಸಮಾಡದಂತೆ ತಡೆಯುವುತ್ತಿರುವುದು ಕೂಡಾ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕುಶಾಲ್ ಕುಮಾರ್ ಕೆ.,ಶ್ರೀಮತಿ ಪುಷ್ಪಾ ಬಿ ಶೆಟ್ಟಿ ಶ್ರೀ ಅಶೋಕ್ ನಾಯಕ್,ಶ್ರೀ ಹರೀಶ್ ಕುಮಾರ್ ಕೆ, ಉಪಸ್ಥಿತರಿದ್ದರು.