image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಾ. ಎಂ. ಎನ್. ಆರ್ ಹಾಗೂ ಶಶಿಕುಮಾರ್ ರೈ ಬಾಲ್ಯೊಟ್ಟು ಗೆ ಅಭಿನಂದನಾ ಕಾರ್ಯಕ್ರಮ...

ಡಾ. ಎಂ. ಎನ್. ಆರ್ ಹಾಗೂ ಶಶಿಕುಮಾರ್ ರೈ ಬಾಲ್ಯೊಟ್ಟು ಗೆ ಅಭಿನಂದನಾ ಕಾರ್ಯಕ್ರಮ...

ಪುತ್ತೂರು: ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಬೇಗ ಯಶಸ್ವಿ ಲಭಿಸುತ್ತದೆ. ಕೃಷಿಕರ ಆರ್ಥಿಕ ಸ್ಥಿತಿ ಸದೃಢಗೊಳಿಸುವಲ್ಲಿ ಸಹಕಾರಿ ಸಂಘಗಳು ಬಹಳಷ್ಟು ಸಹಕಾರಿಯಾಗಿದೆ.

ಸಹಕಾರಿಯಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದಾಗ ಸಹಕಾರಿ ಉತ್ತಮವಾಗಿ ಬೆಳೆಯುತ್ತದೆ. ಸಹಕಾರ ಕ್ಷೇತ್ರದ ವಿವಿಧ ಮಜಲುಗಳಲ್ಲಿ ಸೇವೆಯನ್ನು ನೀಡಿದ ರಾಜೇಂದ್ರ ಕುಮಾ‌ರ್ ಕೇಂದ್ರ ಸಹಕಾರಿ ಬ್ಯಾಂಕನ್ನು ಉತ್ತುಂಗಕ್ಕೇರಿಸುವಲ್ಲಿ ದೊಡ್ಡ ಪಾತ್ರವಹಿದ್ದಾರೆ. ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಹಕಾರಿ ಕ್ಷೇತ್ರ ಬಲಿಷ್ಠ ಗೊಳ್ಳಲು ಸಾಧ್ಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಅವಹಿಸಿದ ಶಾಸಕ ಅಶೋಕ್‌ ಕುಮಾ‌ರ್ ರೈ ಮಾತನಾಡಿ, ತಾವು ಬೆಳೆಯುವ ಜತೆಗೆ ಸಮಾಜವನ್ನು ಬೆಳೆಸುವ ಕಾರ್ಯ ಮಾಡಿದವರು ರಾಜೇಂದ್ರ ಕುಮಾ‌ರ್. ಆರ್ಥಿಕವಾಗಿ ರೈತರು ಮುಂದೆ ಬರಬೇಕಾಗಿದ್ದು, ಸರಕಾರದ ಸಹಕಾರಗಳು ಅಗತ್ಯವಿದೆ. ಸಹಕಾರಿಯ ನಡಿಗೆಗೆ ಸರ್ಕಾರಗಳು ಸ್ಪಂದಿಸುವ ಕೆಲಸ ಮಾಡುತ್ತಿದೆ. ಬ್ಯಾಂಕ್ ಗಳು ಬೆಳೆಯಬೇಕಾಗಿದ್ದರೆ, ಊರಿನ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಉದ್ಯೋಗ ಸೃಷ್ಠಿಯಾಗುವ ಕಾರ್ಯವಾಗಬೇಕಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುವುದರಿಂದ ಊರಿನ ಜನರಿಗೆ ವ್ಯವಹಾರ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎಸ್.ಸಿ.ಆ‌ರ್. ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ. ಎಂ. ಎನ್. ರಾಜೇಂದ್ರ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಗೊಟ್ಟು ಅವರನ್ನು ಅಭಿನಂದಿಸಲಾಯಿತು. ಸಹಕಾರಿ ಯೂನಿಯನ್ ನಿರ್ದೇಶಕರಾದ ವಿಷ್ಣು ಭಟ್ ಮೂಲೆತೋಟ, ಮಂಜುನಾಥ್ ಎನ್. ಎಸ್.. ಸತೀಶ್ ಕಾಶಿಪಟ್ಟ, ಪ್ರವೀಣ್ ಗಿಲ್ಬರ್ಟ್ ಡಿಸೋಜ ಅವರನ್ನು ಗೌರವಿಸಲಾಯಿತು. ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಶಾಮ್ ಭಟ್ ಅಭಿನಂದಿಸಿದರು. ಅಭಿನಂದನಾ ಭಾಷಣವನ್ನು ಮಂಗಳೂರು ಮಾಜಿ ಸಂಸದ ನಡೆಸಿದರು.

ಶಾಸಕಿ ಭಾಗೀರಥಿ ಮುರುಳ್ಯ. ಮಾಜಿ ಶಾಸಕ ಸಂಜೀವ ಮಠಂದೂರು, ಮಾಸ್ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ. ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಅಭಿನಂದನಾ ಸಮತಿ ಗೌರವ ಸಲಹೆಗಾರ ನನ್ನ ಅಚ್ಚುತ ಮೂಡತ್ತಾಯ, ಸಂಚಾಲಕರಾದ ಎಸ್. ಎನ್. ಮನ್ಮಥ, ಕುಶಾಲಪ್ಪ ಗೌಡ ಪೂವಾಜೆ. ಕೆ. ಗೋಪಾಲಕೃಷ್ಣ ಭಟ್. ಪ್ರಕಾಶ್ಚಂದ್ರ ರೈ, ಸಂತೋಷ್ ಕುತ್ತಮೊಟ್ಟೆ. ಗಣೇಶ್ ಉದನಡ್ಕ, ರಾಘವೇಂದ್ರ ನಾಯಕ್, ಹರೀಶ್ ರೈ ಪಿ ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ