image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿಯ ಸೌಹಾರ್ದತೆ ಮಾತಿನಲ್ಲಿಲ್ಲ ಕ್ರಿಯೆಯಲ್ಲಿದೆ- ನಟ ಪ್ರಕಾಶ್ ರಾಜ್

ಕರಾವಳಿಯ ಸೌಹಾರ್ದತೆ ಮಾತಿನಲ್ಲಿಲ್ಲ ಕ್ರಿಯೆಯಲ್ಲಿದೆ- ನಟ ಪ್ರಕಾಶ್ ರಾಜ್

ಮಂಗಳೂರು: ಕರಾವಳಿಯಲ್ಲಿ ಇರುವ ಸೌಹಾರ್ದತೆ ಮಾತಿನಲ್ಲಿಲ್ಲ. ಪ್ರತಿಯೊಂದು ಕ್ರಿಯೆಯಲ್ಲಿದೆ. ಕರಾವಳಿಯಲ್ಲಿ ಬಹಳ ಅದ್ಭುತವಾದ ಸೌಹಾರ್ದತೆ ಹಾಸುಹೊಕ್ಕಿದೆ. ಹಾಗಾಗಿ ಈ ಬಾರಿ ನಿರ್ದಿಗಂತ ಸೌಹಾರ್ದತೆಯ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಆಯೋಜಿಸಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ನಗರದ ಅಲೋಶಿಯಸ್ ಕಾಲೇಜಿನಲ್ಲಿ ನಿರ್ದಿಗಂತ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ವಿಕಾಸದಲ್ಲಿ ಸೌಹಾರ್ದತೆ ಬಹಳ ಮುಖ್ಯ. ವಿಮಾನ ಕಂಡುಹಿಡಿದವನು, ರೋಗಕ್ಕೆ ಔಷಧಿಯನ್ನು ಕಂಡುಹಿಡಿದವನು, ಫೋನ್ ಕಂಡುಹಿಡಿದವನು ಯಾರೆಂದು ನಾವು ಎಲ್ಲಿಯೂ ಕೇಳುವುದಿಲ್ಲ‌. ಪ್ರತಿಯೊಬ್ಬ ಮನುಷ್ಯನ ತನ್ನ ಪ್ರತಿಭೆಯ ಮೂಲಕ ಈ ಜಗತ್ತಿಗೆ ಕೊಡುತ್ತಲೇ ಹೋಗುತ್ತಾನೆ. ಅದನ್ನು ವಿಚ್ಛೇದಿಸಬಾರದು. ಆ ಸೌಹಾರ್ದತೆಯನ್ನು ಸಂಭ್ರಮಿಸಬೇಕೆಂದು ನಿರ್ದಿಗಂತದ ಉತ್ಸವ ಸೌಹಾರ್ದತೆಯಿಂದ ಕೊಂಡಾಡುವ ಹಾಗಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ದೈವ-ದೇವರು ಅತ್ಯಂತ ವಲ್ಗರೈಸೇಷನ್ ಆಗಿರೋದು ಕರಾವಳಿಯಲ್ಲಿ. ಈ ವಲ್ಗರೈಸೇಷನ್ ಭಾರತದಲ್ಲಿ ಕೋಮುವಾದವನ್ನು ಬಿತ್ತುವ ಬೃಹತ್ ಶಕ್ತಿಯಾಗಿ ಬೆಳೆದು ನಿಂತಿದೆ. ಆದ್ದರಿಂದ ತುಳುನಾಡಿನ ದೈವಗಳು ಇಡೀ ಕರಾವಳಿಗೆ ವಿವೇಕವನ್ನು ಕೊಟ್ಟಿದೆ. ಈ ವಿವೇಕವು ನಮ್ಮನ್ನು ನಡೆಸುವ ಶಕ್ತಿಯಾಗಬೇಕು. ವರ್ತಮಾನ ಕಾಲದಲ್ಲಿ ನಮ್ಮ ನಾಡಿಗೆ ಕೊಡುವ ಬೆಳಕು ಆಗಬೇಕು. ಆದರೆ ಇದೀಗ ಆ ಬೆಳಕು ನಂದಿ ಹೋಗಿದೆ ಎಂದರು.

Category
ಕರಾವಳಿ ತರಂಗಿಣಿ