ಮಂಗಳೂರು : ಹಿರಿಯ ದೈವ ನರ್ತನ ಸೇವಾಕರ್ತ ಮಾಯಿಲಾ ಕುತ್ತಾರ್ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ 'ಚಾವಡಿ ತಮ್ಮನ' ಕಾರ್ಯಕ್ರಮ ಫೆ.27ರ ಗುರುವಾರ ಸಂಜೆ 6.30 ಕ್ಕೆ ಪಿಲಾರ್ ಯುವಕ ಮಂಡಲದ ಚಾವಡಿಯಲ್ಲಿ ನಡೆಯಲಿದೆ.
ಮಾಯಿಲಾ ಕುತ್ತಾರ್ ಅವರು ಕಳೆದ 50 ವರ್ಷಗಳಿಂದ ಕೊರಗ ತನಿಯ ದೈವದ ಹಾಗೂ ಕಳೆದ 29 ವರ್ಷಗಳಿಂದ ಕುತ್ತಾರ್ ಪಂಜಂದಾಯ ದೈವದ ಸಿರಿ ಸಿಂಗಾರ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ.
ಚಾವಡಿ ತಮ್ಮನ ಕಾರ್ಯಕ್ರಮವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಿಲ್ಲವ ಸೇವಾ ಸಮಾಜ ಕೊಲ್ಯ ಇದರ ಅಧ್ಯಕ್ಷ ಹರೀಶ್ ಮುಂಡೋಳಿ ಅವರು ಅಭಿನಂದನಾ ಭಾಷಣ ಮಾಡಲಿರುವರು. ಸೋಮೇಶ್ವರ ಪುರಸಭಾ ಸದಸ್ಯರಾದ ದೀಪಕ್ ಪಿಲಾರ್ , ಸಪ್ನಾ ಶೆಟ್ಟಿ, ಪಿಲಾರ್ ಪಂಜಂದಾಯ ಸೇವಾ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ದೇಲಂತಬೆಟ್ಟು, ಶ್ರೀ ಮಹಾವಿಷ್ಣು ದೇವಾಸ್ಥಾನ ಸಮಿತಿಯ ಕಾರ್ಯದರ್ಶಿ ನಾಗೇಶ್ ಗಟ್ಟಿ ಮೇಲ್ಮನೆ, ಪಿಲಾರ್ ಯುವಕ ಮಂಡಲದ ಅಧ್ಯಕ್ಷ ಯಶವಂತ ಶೆಟ್ಟಿ ಪಿಲಾರ್ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.