ಮಂಗಳೂರು: ಭೀಷ್ಮ ಶ್ರೀ ಕೃಷ್ಣನಿಗೆ ಹೇಳುತ್ತಾನೆ "ನೀನು ಯಾರನ್ನು ಬೆನ್ನಟ್ಟಿದರು ಅವರು ಸೋಲುತ್ತಾರೆ. ಹಾಗೇ ಬೇರೆಯವರು ನಿನ್ನನ್ನು ಬೆನ್ನಟ್ಟಿದರೂ ಅವರೇ ಸೋಲುತ್ತಾರೆ ನೀನು ಯಾರಿಗೂ ಅರ್ಥವಾಗುವುದಿಲ್ಲ" ಎನ್ನುತ್ತಾನೆ ಹಾಗೆ ಎಂ ಎನ್ ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರದಲ್ಲಿ ನಮಗೆ ಯಾರಿಗೂ ಅರ್ಥ ಆಗಿಲ್ಲ. ಹಾಗಂತ ಅವರನ್ನು ಕಾಲೆಳೆಯದೇ ಬಿಟ್ಟಿಲ್ಲ. ಆದರೆ ನಿಮ್ಮ ಕಾಲು ಗಟ್ಟಿ ಇದೆ ಅಂತ ಗೊತ್ತಾದ್ಮೇಲೆ ಅಲ್ಲೇ ಬಿಟ್ಟಿದ್ದೇವೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ನಗೆ ಚಟಾಕಿ ಹಾರಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ ಡಾ. ಎಂ ಎನ್ ರಾಜೇಂದ್ರ ಕುಮಾರ್ ರವರ 76ನೇ ಹುಟ್ಟುಹಬ್ಬ ಅಭಿನಂದನಾ ಸಮಾರಂಭ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ, ಸಹಕಾರಿ ಕ್ಷೇತ್ರದಲ್ಲಿ ಕಾರ್ನಾಡು ಸದಾಶಿವರಾಯರು ಬಹುದೊಡ್ಡ ಹೆಸರು. ಇತಿಹಾಸದ ಪುಟವನ್ನು ನೋಡಿದರೆ ಕಾರ್ನಾಡು ಸದಾಶಿವರಾಯರು ಅಗರ್ಭ ಶ್ರೀಮಂತರು. ಸ್ವಾತಂತ್ರ್ಯ ಹೋರಾಟದ ಹುಚ್ಚನ್ನು ಹಿಡಿಸಿ ಕೊಂಡ ಕಾರ್ನಾಡರು ತನ್ನ ಎಲ್ಲಾ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ.
ಅಂತಹ ಕಾರ್ನಾಡು ಸದಾಶಿವರಾರು ಕಟ್ಟಿದ ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಉತ್ತುಂಗದಲ್ಲಿ ಇರುವ ಹೆಸರು ಎಂ ಎನ್ ರಾಜೇಂದ್ರ ಕುಮಾರ್. ದಕ್ಷಿಣ ಕನ್ನಡದಲ್ಲಿ ಸಹಕಾರಿ ಕ್ಷೇತ್ರವನ್ನು ಕಟ್ಟಿದವರು ಮೊಳವಳ್ಳಿ ಶಿವರಾಯರು. ಶಿವರಾಯರಿಗೆ ಸರಿಗಟ್ಟುವ ಮತ್ತೊಬ್ಬ ಸಹಕಾರಿ ದುರೀಣ ಎಂದರೆ ರಾಜೇಂದ್ರ ಕುಮಾರ್ ಎಂದರು.
60 ಕೋಟಿ ಠೇವಣಿ ಇದ್ದ ಇಂದು 8000 ಕೋಟಿ ಠೇವಣಿಗೆ ಏರಿದೆ ಎಂದರೆ ಅದು ಸುಲಭದ ಮಾತಲ್ಲ 15000 ಕೋಟಿ ರೂಪಾಯಿ ವಾರ್ಷಿಕ ವ್ಯವಹಾರ ಮಾಡ್ತೀರಾ ಅಂದ್ರೆ ನಿರೀಕ್ಷೆ ಮಾಡಕ್ಕೂ ಸಾಧ್ಯ ಇಲ್ಲ ಎಂದರು.
ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಡಾ. ಎಂ ಎನ್ ರಾಜೇಂದ್ರ ಕುಮಾರ್, ಮೈಕ್ರೋ ಫೈನಾನ್ಸ್ ನಿಂದ ತೊಂದರೆ ಆಗುತ್ತಿದೆ ಎಂಬ ವಿಚಾರ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಆದರೆ ಮೈಕ್ರೋ ಫೈನಾನ್ಸ್ ನ ಮೂಲ ಆಶಯ ತೊಳಿದುಕೊಂಡರೆ ಯಾರಿಗು ತೊಂದರೆ ಆಗಲು ಸಾಧ್ಯವಿಲ್ಲ.
10ಜನರ ಗುಂಪು ಮಾಡಿಕೊಂಡು ಭದ್ರತೆಯೊಂದಿಗೆ ಸಾಲ ಕೊಡುವುದು ಮೈಕ್ರೋ ಫೈನಾನ್ಸ್ ನ ಕ್ರಮವಾಗಿದೆ.ಚೆನ್ನೈ ತೆಲಂಗಾಣ ದಿಂದ ಬಂದು ಒಬ್ಬೊಬ್ಬರಿಗೆ ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಸಾಲ ಕೊಡುವವರ ಬಗ್ಗೆ ಸರಕಾರ ಕಣ್ಣು ಬಿಟ್ಟು ನೋಡಬೇಕು ಎಂದರು.
ಈ ಸಂದರ್ಭದಲ್ಲಿ ಕೊಟೆಕಾರು ದರೋಡೆ ಬೇದಿಸಿದ ಪೋಲಿಸ್ ಆಫೀಸರ್ ಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟಿಲ್, ಯಶಪಾಲ್ ಸುವರ್ಣ, ಅನುಪಮ್ ಅಗರ್ವಾಲ್, ಕಣಚೂರು ಮೋನು, ಸುಚರಿತ ಶೆಟ್ಟಿ, ಸದಾಶಿವ ಉಳ್ಳಾಲ್, ರಮೇಶ್, ಮೇಘರಾಜ್ ಜೈನ್ ಮುಂತಾದವರು ಉಪಸ್ಥಿತರಿದ್ದರು.