image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ ಕರ್ನಾಟಕದಲ್ಲಿ ಮೊದಲ ವೈರ್ ಲೆಸ್ ಪೇಸ್ ಮೇಕ‌ರ್ ಅಳವಡಿಕೆ...!

ಕರಾವಳಿ ಕರ್ನಾಟಕದಲ್ಲಿ ಮೊದಲ ವೈರ್ ಲೆಸ್ ಪೇಸ್ ಮೇಕ‌ರ್ ಅಳವಡಿಕೆ...!

ಮಂಗಳೂರು: ಇಂಡಿಯಾನಾ ಆಸತ್ರೆ ಮತ್ತು ಹಾರ್ಟ್ ಇನ್ಸಿಟ್ಯೂಟಿನ ವೈದ್ಯರು ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ಬಳಸಿ, ತಂತಿ ರಹಿತ (ಯಾವುದೇ ವಯರ್ ಇಲ್ಲದೆ ) ಪೇಸ್ ಮೇಕರ್ ನ್ನು ವೃದ್ದ ಮಹಿಳೆಗೆ ಅಳವಡಿಸಿದ್ದು ಇದು ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಈ ಅಸಾಧಾರಣ ಪ್ರಗತಿಯು ಆಧುನಿಕ, ಸುಧಾರಿತ ಆರೋಗ್ಯ ಸೇವೆಗಳಿಗೆ ಸಂಬಂಧಿಸಿ ವಲಯದ ಖ್ಯಾತಿಯನ್ನು ಹೆಚ್ಚಿಸಲಿದೆ. ರೋಗಿ, ವಯಸ್ಸಾದ ಮಹಿಳೆಯಾಗಿದ್ದು ಹೃದಯ ವೈಫಲದಿಂದ ಬಳಲುತಿದ್ದರು. "ಟಾಕಿಬಾಡಿ ಸಿಂಡೋಮ್" ಗೆ ತುತ್ತಾಗಿದ್ದರು. ಇದರ ಲಕ್ಷಣ ಎಂದರೆ ಹೃದಯವು ಬಹಳ ವೇಗವಾಗಿ ಬಡಿದುಕೊಳ್ಳುವುದು ಮತ್ತು ಬಹಳ ನಿಧಾನವಾಗಿ ಬಡಿದುಕೊಳ್ಳುವುದು, ಈ ಸ್ಥಿತಿಯು ಹೃದಯ ಬಡಿತದ ಅಸಹಜ ವೇಗ ಮತ್ತು ಅಪಾಯಕಾರಿ ನಿಧಾನಗತಿಯ ಲಯಗಳನ್ನು ಹೊಂದಿರುತ್ತದೆ ಮತ್ತು ನಡುವೆ ಬದಲಾಗುತಿರುತ್ತದೆ. ಈ ಸಮಸ್ಯೆಯಿಂದಾಗಿ ರೋಗಿಯು ಕಳೆದ ಒಂದು ವರ್ಷದಲ್ಲಿ ಪದೇ ಪದೇ ಆಸತ್ರೆಗೆ ದಾಖಲಾಗುವಂತಾಗಿತ್ತು. ವಾಪಕ ಸಮಾಲೋಚನೆಯ ನಂತರ, ಅನಿಯಮಿತ ಹೃದಯ ಬಡಿತವನ್ನು ನಿಯಂತಿಸಲು ರೋಗಿಗೆ ರೇಡಿಯೋಫೀಕೆನ್ಸಿ ಅಬ್ಲೇಷನ್ ಅಂದರೆ ಸಣ್ಣ ಕೊಳವೆಯ ಮೂಲಕ ಸಣ್ಣ ಪ್ರಮಾಣದಲ್ಲಿ ಬಿಸಿ ಉಂಟು ಮಾಡಿ ಅಸಹಜ ಹೃದಯ ಬಡಿತಕ್ಕೆ ಕಾರಣವಾಗುವ ಅಂಗಾಂಶಗಳನ್ನು ಸುಟ್ಟು ಹಾಕುವ ಚಿಕಿತ್ಸೆ ಮತ್ತು. ಹೃದಯ ಬಡಿತವನ್ನು ನಿಯಂತ್ರಿಸುವ ಪೇಸ್ ಮೇಕರ್ ಅಳವಡಿಕೆ ಎರಡಕ್ಕೂ ಒಳಗಾಗಲು ಸಲಹೆ ನೀಡಲಾಯಿತು.

ಆದರೆ ರೋಗಿಯಲಿದ್ದ ಸೋಂಕು ಮತ್ತು ಸೋಂಕಿಗೆ ಸಂಬಂಧಿಸಿ ದೇಹದ  ರೋಗ ನಿರೋಧಕ ವ್ಯವಸ್ಥೆ ಅತಿಯಾಗಿ ಪ್ರತಿಕ್ರಿಯಿಸುವುದರಿಂದ  ಜೀವಕ್ಕೆ ಹಾನಿಕರವಾದ ಸ್ಥಿತಿ ಯಂತಹ ಅಪಾಯದಿಂದಾಗಿ ಸಾಂಪ್ರಾದಾಯಿಕ ಫೇಸ್ ಮೇಕ‌ರ್ ಸೂಕ್ತ ಆಯ್ಕೆಯಾಗಿರಲಿಲ್ಲ. ಸಾಮಾನವಾಗಿ, ಪೇಸ್ ಮೇಕರ್ ಗಳನ್ನು ಹೃದಯಕ್ಕೆ ಸಂಪರ್ಕ ಹೊಂದಿದ ಸೂಕ್ಷ್ಮ ತಂತಿಗಳೊಂದಿಗೆ ಅಳವಡಿಸಲಾಗುತ್ತದೆ ಮತ್ತು ಎದೆಯ ಗೋಡೆಯ ಮೇಲೆ ಇರಿಸಲಾಗುತ್ತದೆ. ಈ ಪ್ರಕರಣದಲ್ಲಿ ವಯಸ್ಸಾದ ಈ ಮಹಿಳೆ ಹೊಂದಿದಂತಹ ಸೋಂಕುಗಳಿಂದ ಪೀಡಿತರಾಗಿರುವ ರೋಗಿಗಳಿಗೆ, ಈ ವವಸ್ಥೆ ಪೇಸ್ ಮೇಕರ್ ವೈಫಲ್ಯ ಮತ್ತು ಪುನರಾವರ್ತಿತ ಸೋಂಕುಗಳಿಂದಾಗಿ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು. ಈ ಪರಿಸ್ಥಿತಿಗಳ ಮೌಲಮಾಪನದ ಬಳಿಕ ಇಂಡಿಯಾನಾ ಆಸತ್ರೆಯ ಮುಖ್ಯ ಇಂಟರ್ವೆನನಲ್ ಕಾರ್ಡಿಯಾಲಜಿಸ್ಟ್ ಡಾ.ಯೂಸುಫ್ ಕುಂಬ್ಳೆ, ನೇತೃತದಲಿ. ಡಾ.ಮನೀಶ್ ರೈ (ಎಲೆಕ್ರೋಫಿಸಿಯಾಲಜಿಸ್ಟ್ ಡಾ.ಗ್ಯಾರಿ ವಲೇರಿಯನ್ ಪಾಯಸ್ (ಕನಲೆಂಟ್ ಇಂಟರ್ವನನಲ್ ಕಾರ್ಡಿಯಾಲಜಿಸ್ಟ್ ಡಾ.ಸುಖೇನ್ ಶೆಟ್ಟಿ (ಹೃದಯ ಅರಿವಳಿಕೆ ತಜ್ಞ) ಮತ್ತು ಡಾ.ಪದೀಪ್ ಕೆ.ಜೆ ಅವರನೊಳಗೊಂಡ ತಂಡ ತಂತಿ ಇಲ್ಲದ ಪೇಸ್ ಮೇಕರ್ ಅಳವಡಿಕೆಯ ನವೀನ ಅನ್ವೇಷಣೆಯ ಪರಿಹಾರವನ್ನು ಆರಿಸಿಕೊಂಡಿತು. ಹೃದಯಕ್ಕೆ ಸಂಪರ್ಕ ಹೊಂದಿದ ತಂತಿಗಳು ಅಥವಾ ಲೀಡ್ (ಸೂಕ್ಷ್ಮವಯರ್‌)ಗಳನ್ನು ಒಳಗೊಂಡಿರುವ ಸಾಂಪ್ರಾದಾಯಿಕ ಪೇಸ್ ಮೇಕರ್ ಗಳಿಗಿಂತ ಭಿನ್ನವಾಗಿ, ಈ ಪೇಸ್ ಮೇಕರ್ ಯಾವುದೇ ತಂತಿ ಸಂಪರ್ಕಗಳಿಲ್ಲದ ನೇರವಾಗಿ ಹೃದಯಕ್ಕೆ ಅಳವಡಿಸಲಾಗುವ ಸಣ್ಣ ಸ್ವಯಂ-ನಿಯಂತಣವನ್ನು ಅಳವಡಿಸಿಕೊಂಡಿರುವ ಸ್ವಯಂ ಪರಿಪೂರ್ಣ ಸಾಧನವಾಗಿದೆ. ಇದರ ಅಳವಡಿಕೆ ಪ್ರಕ್ರಿಯೆಯಲ್ಲಿ ಗಾಯದ ಪ್ರಮಾಣ ಅತ್ಯಂತ ಕನಿಷ್ಟ. ಸೊಂಟದ ಮೂಲಕ ಇದನ್ನು ದೇಹದೊಳಗೆ ಕಳುಹಿಸಲಾಗುತ್ತದೆ. ತಂತಿಗಳು ಅಥವಾ ಎದೆಯ ಗೋಡೆಯ ಸಂಪರ್ಕಗಳ ಅಗತ್ಯ ಇಲ್ಲ ಸೋಂಕು ಮತ್ತು ಆರೋಗ್ಯ ತೊಡಕುಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ತಂತಿ ರಹಿತ ಪೇಸ್ ಮೇಕರ್ ಯಶಸ್ವಿಯಾಗಿ ಅಳವಡಿಸಿದ ನಂತರ, ತಂಡವು ರೋಗಿಯ ಹೃದಯ ಬಡಿತದ ವ್ಯತ್ಯಯವನ್ನು ಪರಿಹರಿಸಲು ರೇಡಿಯೋಫಿಕೆನ್ಸಿ, ಅಬ್ಲೇಶನ್ ಸಹ ನಡೆಸಿತು.

"ಈ ಸಾಧನೆಯು ನಮ್ಮ ಹೃದ್ರೋಗ ಚಿಕಿತ್ಸಾತಂಡದ ಅಸಾಧಾರಣ ಸಾಮರ್ಥ್ಯಗಳನ್ನು ಒತ್ತಿಹೇಳುತ್ತದ ಮತ್ತು ಮಂಗಳೂರು ಹಾಗು ಅದರಾಚೆಗೆ ಅತಾಧುನಿಕ ವೈದಕೀಯ ತಂತ್ರಜ್ಞಾನಗಳನ್ನು ತರುವ ನಮ್ಮ ಆಸತ್ರೆಯ ಅಚಲ ಬದತೆಯನ್ನು ಒತಿಹೇಳುತ್ತದೆ" ಎಂದು ಇಂಡಿಯಾನ ಆಸ್ಪತ್ರೆಯ ಆಡಳಿತ ನಿರ್ದೇಶಕ ಮತ್ತು ವೈದ್ಯ ಡಾ. ಯೂಸುಫ್ ಕುಂಬ್ಳೆ  ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ