ಮಂಗಳೂರು: ನೀರುಮಾರ್ಗ ಗ್ರಾಮದ ಪೆದಮಲೆಯಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀ ವಾಜಿಲ್ಲಾಯ-ಮಹಿಷಂತಾಯ-ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಫೆ.18 ರಿಂದ 22 ರವರೆಗೆ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿವೆ. ಫೆ. 18ರಂದು ಮಧ್ಯಾಹ್ನ 3 ರಿಂದ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ದೈವಸ್ಥಾನಕ್ಕೆ ಬಂಡಿ ಕೊಡಿಮರ ಮತ್ತು ದೈವಗಳ ಆಭರಣಗಳ ಶೋಭಾಯಾತ್ರೆ ನಡೆಯಲಿದೆ. ಸಂಜೆ 5 ರಿಂದ ಪೆದಮಲೆ ಗುತ್ತು ಭಂಡಾರ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಶಿಲ್ಪಿ ಸನ್ಮಾನ, ಆಲಯ ಪ್ರತಿಗ್ರಹ, ರಾಕ್ಟೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಮತ್ತು ನೂತನ ಮೊಗಮೂರ್ತಿ, ಉಯ್ಯಾಲೆಗಳ ಶುದ್ದಿ ಪ್ರಕ್ರಿಯೆ ಹಾಗೂ ಬಿಂಬಾಧಿವಾಸ ಜರುಗಲಿದೆ. ಸಂಜೆ 5:30ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಫೆ.19 ರಂದು ಬೆಳಗ್ಗೆ 7 ರಿಂದ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ಗಣಪತಿ ಹೋಮ, ತುಳಸಿ ಪ್ರತಿಷ್ಠೆ ಮತ್ತು ದ್ವಾರಪೂಜೆ ಜರುಗಲಿದೆ. ಬೆಳಗ್ಗೆ 8.30ಕ್ಕೆ ಶ್ರೀ ದೈವಗಳ ಚಾವಡಿಯ ಪ್ರವೇಶ ಪ್ರತಿಷ್ಠೆ ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 11ಕ್ಕೆ ಪೆದಮಲೆ ದೈವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತೋರಣ ಮುಹೂರ್ತ ಜರುಗಲಿದೆ. ಸಂಜೆ 4 ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಕ್ಕೆ ಪೆದಮಲೆ ದೈವಸ್ಥಾನದಲ್ಲಿ ಆಲಯ ಪರಿಗ್ರಹ, ರಾಕ್ಟೋಘ್ನ ಹೋಮ, ವಾಸ್ತು ಹೋಮ ಮತ್ತು ವಾಸ್ತು ಬಲಿ ಜರುಗಲಿದೆ. ಸಂಜೆ 6.30 ಸಭಾಕಾರ್ಯಕ್ರಮ. ರಾತ್ರಿ 7.30ಕ್ಕೆ ಪ್ರೊ. ಅಮೃತ್ ಸೋಮೇಶ್ವರ ವಿರಚಿತ, ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ನಿರ್ದೇಶನದ, ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಅರ್ಪಿಸುವ ಎಳುವೆರ್ ದೈಯಾರ್ (ಸಪ್ತ ಮಾತೃಕೆಯರು) ಕಾರ್ಯಕ್ರಮ ನಡೆಯಲಿದೆ.
ಫೆ.20 ರಂದು ಬೆಳಗ್ಗೆ 8 ರಿಂದ ದೈವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮಗಳು ಮತ್ತು ನವಗ್ರಹ ಶಾಂತಿ ಹೋಮ ಜರುಗಲಿದೆ. ಬೆಳಗ್ಗೆ 10 ರಿಂದ ಪೆದಮಲೆಗುತ್ತು ಭಂಡಾರ ಚಾವಡಿಯಿಂದ ಪೆದಮಲೆ ದೈವಸ್ಥಾನಕ್ಕೆ ಶ್ರೀ ದೈವಗಳ ಭಂಡಾರ ಆಗಮನ ಮತ್ತು ಧ್ವಜಮರ ಏರಿಸಲಾಗುವುದು. ಸಂಜೆ 5 ರಿಂದ ಶ್ರೀ ಸಪ್ತಶತಿ ಪಾರಾಯಣ ನಡೆಯಲಿದೆ. ಸಂಜೆ 5:.30ರಿದ ದೈವಸ್ಥಾನದಲ್ಲಿ ಬಿಂಬಾಧಿವಾಸ, ಶ್ರೀ ವಾಜಿಲ್ಲಾಯ, ಧೂಮಾವತಿ, ಬಂಟ ಮತ್ತು ಮಹಿಷಂತಾಯ ದೈವಗಳಿಗೆ ಕಲಶ ಪೂರಣ, ಅಧಿವಾಸ ಹೋಮ ಮತ್ತು ಕಲಶಾಧಿವಾಸ ಜರುಗಲಿದೆ. ಸಂಜೆ 6 ಕ್ಕೆ "ನೃತ್ಯ ಕಲಾ ಭಾರತಿ" ಭಟ್ರಕೋಡಿ ನೀರುಮಾರ್ಗ ವಿದುಷಿ ಶುಭ ಶೇಷಾದ್ರಿ ಶಿಷ್ಠೆಯರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ರಿಂದ ಸಭಾ ಕಾರ್ಯಕ್ರಮ. ರಾತ್ರಿ 9 ರಿಂದ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಭಕ್ತಿ ರಸಮಂಜರಿ ನಡೆಯಲಿದೆ.
ಫೆ. 21 ಬೆಳಗ್ಗೆ 8.28ಕ್ಕೆ ಪೆದಮಲೆಯಲ್ಲಿ ನೂತನವಾಗಿ ನಿರ್ಮಿಸಿರುವ ದೈವಸ್ಥಾನದಲ್ಲಿ ಶ್ರೀ ವಾಜಿಲ್ಲಾಯ ಧೂಮಾವತಿ ಬಂಟ ಮಹಿಷಂತಾಯ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ಪ್ರಸನ್ನಪೂಜೆ ನಡೆಯಲಿದೆ. ಬೆಳಗ್ಗೆ 10.30ರಿಂದ ಶ್ರೀ ಧೂಮಾವತಿ ದೈವದ ದರ್ಶನ ಸೇವೆ, ಧ್ವಜ ಆರೋಹಣ ಮತ್ತು ಪಲ್ಲಪೂಜೆ ಜರುಗಲಿದೆ. ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1 ರಿಂದ 3ರ ತನಕ ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿ ಗಾನಾಮೃತ ನಡೆಯಲಿದೆ. ರಾತ್ರಿ 7 ರಿಂದ ಶ್ರೀ ಮಹಿಷಂತಾಯ ದೈವದ ನೇಮೋತ್ಸವ ಜರುಗಲಿದೆ. ರಾತ್ರಿ 9 ರಿಂದ ಶ್ರೀ ವಾಜಿಲ್ಲಾಯ ದೈವದ ಗಗ್ಗರ ಸೇವೆ, ನೇಮೋತ್ಸವ ಮತ್ತು ಬಂಡಿ ಉತ್ಸವ ನಡೆಯಲಿದೆ.
ಫೆ. 22ರಂದು ರಾತ್ರಿ 8 ರಿಂದ ಶ್ರೀ ಧೂಮಾವತಿ ಬಂಟ ದೈವಗಳ ಗಗ್ಗರಸೇವೆ, ನೇಮೋತ್ಸವ, ಮತ್ತು ಬಂಡಿ ಉತ್ಸವ ಜರುಗಲಿದೆ. ನಂತರ ಧ್ವಜ ಅವರೋಹಣ, ಧ್ವಜಮರ ಇಳಿಸಿ, ಶ್ರೀ ದೈವಗಳ ಭಂಡಾರ ನಿರ್ಗಮನವಾಗಲಿದೆ ಎಂದು ಶ್ರೀ ಕ್ಶೇತ್ರ ಪೆದಮಲೆ, ಶ್ರೀ ವಾಜಿಲ್ಲಾಯ - ಧೂಮಾವತಿ ದೈವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.