ಮಂಗಳೂರು: “ಸ್ನಾತಕೋತ್ತರ ಪದವಿ ಕೌನ್ಸಿಲಿಂಗ್ ವಿಭಾಗ, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ “PERCEPTIO Crafting Reality with the Mind's Eye” ಎಂಬ ವಿಷಯಾಧಾರಿತ ರಾಷ್ಟ್ರೀಯ ಸಮ್ಮೇಳನ ಸಿಂಟಿಲ್ಲ 2025 ಅನ್ನು ಫೆಬ್ರವರಿ 21 ಮತ್ತು 22ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ“ ಎಂದು ವಿಭಾಗ ಮುಖ್ಯಸ್ಥರಾದ ಡಾ.ರೋಸಾ ನಿಮ್ಮಿ ಮಾಥ್ಯೂ ಹೇಳಿದರು. ಅವರುನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, ತಾಂತ್ರಿಕ ಅಧಿವೇಶನಗಳು ಮಾಧ್ಯಮ ಪ್ರಭಾವ, ಮಾನಸಿಕ ಆರೋಗ್ಯ, ಗುರುತು ಮತ್ತು ಮಾರ್ಕೆಟಿಂಗ್ ಗ್ರಹಿಕೆಗಳ ಬಗ್ಗೆ ಚರ್ಚೆಗಳು, ಸಂಶೋಧನಾ ಪತ್ರ ಪ್ರಸ್ತುತಿ “ತಂತ್ರಜ್ಞಾನ ಮಾನವ ಗ್ರಹಿಕೆಗೆ ಇರುವ ಪ್ರಭಾವ,” “ಮಾಯೆಯ ಗ್ರಹಿಕೆ,”“ಸಾಮಾಜಿಕ ಪಾಂಗತ ಮತ್ತು ಗ್ರಹಿಕೆ” ಮೊದಲಾದ ಉಪ ಶೀರ್ಷಿಕೆಗಳ ಮೇಲೆ ಸಂಶೋಧನಾ ಪ್ರಬಂಧಗಳು.
ಸ್ಪರ್ಧೆಗಳು - ರಚನಾತ್ಮಕತೆ ಮತ್ತು ಬೌದ್ಧಿಕ ಚಟುವಟಿಕೆಗಳನ್ನು ಉತ್ತೇಜಿಸುವ ಅವಕಾಶವಿದೆ.
ಸಂಶೋಧಕರು ಮತ್ತು ವಿದ್ಯಾರ್ಥಿಗಳು ಜನವರಿ 7, 2025ರೊಳಗಾಗಿ 250 ಪದಗಳ ಸಂಕ್ಷಿಪ್ತ ಸಾರಾಂಶವನ್ನು ಕಳುಹಿಸುವುದು. ಫೆಬ್ರವರಿ 7 2025ರೊಳಗಾಗಿ ಅಂಗೀಕರಿಸಲಾದ ಸಂಪೂರ್ಣ ಪೇಪರ್ ಅನ್ನು ನಿಗದಿತ ಶೈಲಿಯಲ್ಲಿ ಸಲ್ಲಿಸಬೇಕು.
ನೋಂದಣಿ ಶುಲ್ಕ ವಿದ್ಯಾರ್ಥಿಗಳಿಗೆ 600 ರೂ, ಸಂಶೋಧನಾರ್ಥಿಗಳಿಗೆ 700 ರೂ, ಉಪನ್ಯಾಸಕರಗಳಿಗೆ 900 ರೂ. ಆಗಿರುತ್ತದೆ.
ಈ ವರ್ಷ ಎಂ ಆರ್ ಪಿ ಎಲ್ ಜೊತೆ ಪಾಲುದಾರಿಕೆಯಲಿ ನಿರ್ವಹಿಸುತ್ತಿದ್ದು, ಮಾನಸಿಕ ಆರೋಗ್ಯ, ಮನಃಶಾಸ್ತ್ರ ಮತ್ತು ಗ್ರಹಿಕೆಯ ಅಧ್ಯಯನದಲ್ಲಿ ಬೌದ್ಧಿಕ ಚರ್ಚೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಡಾ.ಮೀನಾ ಮೊಂತೇರೋ, ಡಾ.ಸೆಬಸ್ಟಿಯನ್ ಕೆ.ವಿ., ಥಾನಿ ಅನ್ವರ್, ಅಲಿಮಾಬಾಜಿ, ಮಿತ್ರಾ, ಸ್ವಾಲಿಹಾ ಉಪಸ್ಥಿತರಿದ್ದರು.