image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮಾನಸಿಕ ನೆಮ್ಮದಿ ನೀಡುವ ಕಾರ್ಯಕ್ರಮ ಅಗತ್ಯ-ಕ್ಯಾ.ಬ್ರಿಜೇಶ್ ಚೌಟ

ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮಾನಸಿಕ ನೆಮ್ಮದಿ ನೀಡುವ ಕಾರ್ಯಕ್ರಮ ಅಗತ್ಯ-ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು: ಸಾಮಾಜಿಕ  ಸ್ವಾಸ್ಥ್ಯ ಕ್ಕಾಗಿ  ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು  ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.ಅವರು ಮಂಗಳೂರಿನ ಕಲಾ ಸಾಧನಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್  ನಲ್ಲಿ  ಹಮ್ಮಿಕೊಂಡ ಸ್ವರ ಸಾನಿಧ್ಯ ರಾಷ್ಟ್ರೀಯ ಮಟ್ಟದ ಯುವ ಸಂಗೀತೋತ್ಸವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಜನಸಾಮಾನ್ಯರ ಬದುಕಿಗೆ ಸಮಾಜದಲ್ಲಿ ಶಾಂತಿಯ ವಾತಾವರಣದ ಅಗತ್ಯವಿದೆ. ಸ್ವರ ಸಾನಿಧ್ಯದಂತಹ ರಾಷ್ಟ್ರೀಯ ಯುವ ಸಂಗೀತೊತ್ಸವ ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದರ ಜೊತೆಗೆ ದೇಶದ ಖ್ಯಾತ ಸಂಗೀತ ಕಲಾವಿದರ  ಕಾರ್ಯಕ್ರಮ ವನ್ನು ಆಲಿಸುವ ಅವಕಾಶ ಮಂಗಳೂರಿನ ಜನತೆಗೆ ದೊರೆತಂತಾಗಿದೆ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಸಭಾಪತಿ ಶಾಂತರಾಮ ಶೆಟ್ಟಿ,ಮಾಜಿ ಮೇಯರ್ ದಿವಾಕರ,ರಾಜ್ಯ ಅಲೆಮಾರಿ ಅರೆ ಅಲೆ ಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಐಎಂಎ ದ.ಕ ಘಟಕದ ಕಾರ್ಯದರ್ಶಿ ಡಾ.ಅವಿನ್ ಆಳ್ವಾ,ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ್ ನಾಯ್ಕ್ ,ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗಾಧಿಕಾರಿ ರಾಜೇಶ್ ಶೆಟ್ಟಿಹಾಗೂ ಪ್ರಭಾ ಚಂದ್ರಶೇಖರ್, ವಿಭಾ ಶ್ರೀನಿವಾಸ ನಾಯಕ್ ಮೊದಲಾದವರು ಉಪಸ್ಥಿತ ರಿದ್ದರು. ಶ್ರೀನಿವಾಸ ನಾಯಕ್ ಸ್ವಾಗತಿ ಸಿದರು, ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು, ಪುಷ್ಪರಾಜ್ ಬಿ.ಎನ್. ವಂದಿಸಿದರು.

ಸಮಾರಂಭದಲ್ಲಿ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ..ಜಗದೀಶ್ ಬಾಳಾ,ಮನಪಾ ಮೇಯರ್ ಮನೋಜ್ ಕುಮಾರ್, ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ರವಿಶಂಕರ್ ,ಮನಪಾಉಪ ಆಯುಕ್ತ ಚಂದ್ರ ಶೇಖರ್,ಯೋಗ ನಿರ್ದೇಶಕಿ ದೇವಿಕಾ ಪುರುಷೋತ್ತಮ ಶುಭ ಹಾರೈಸಿದರು.ರಾಷ್ಟ್ರೀಯ ಯುವ ಸಂಗೀತೋತ್ಸವದಲ್ಲಿ ಆರಂಭದಲ್ಲಿ ವಿಭಾ ಎಸ್ ನಾಯಕ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಿತು, ತಬಲಾ ದಲ್ಲಿ ವಿಗ್ನೇಶ್ ಪ್ರಭು ಹಾಗೂ ಹಾರ್ಮೋನಿಯಂ ನಲ್ಲಿ ಹೇಮಂತ್ ಭಾಗವತ್ ಸಾಥ್  ನೀಡಿದರು ಬಳಿಕ ಮೂಡುಬಿದಿರೆಯ ಸ್ವಯಂ ಪ್ರಕಾಶ್ ಪ್ರಭು (ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯ) ಅವರಿಂದ ಕೊಳಲು ವಾದನ, ಆತ್ರೇಯಾ ಗಂಗಾಧರ್ ಅವರಿಂದ ಗಾಯನ, ಕಲಾಸಾಧನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು ಸಂಗೀತ ಗೋಷ್ಟಿ ಕಾರ್ಯಕ್ರಮವನ್ನು ಆಕಾಂಕ್ಷ ಎಸ್ ನಾಯಕ್ ನಿರೂಪಿಸಿದರು.

Category
ಕರಾವಳಿ ತರಂಗಿಣಿ