ಮಂಗಳೂರು : ತಮ್ಮದೇ ಪಿಸ್ತೂಲ್‌ನಿಂದ ಮಿಸ್ ಫೈರ್ ಆಗಿ ಕಾಂಗ್ರೆಸ್ ಮುಖಂಡರೊಬ್ಬರು ಗಾಯಗೊಂಡ ಘಟನೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ವರದಿಯಾಗಿದೆ.
ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿಯವರು ಪಿಸ್ತೂಲ್‌ನಿಂದ ಮಿಸ್ ಫೈರ್ ಆಗಿ ಗಾಯಗೊಂಡಿದ್ದಾರೆ. ಚಿತ್ತರಂಜನ್ ಶೆಟ್ಟಿಯವರು ತಮ್ಮದೇ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್‌ನಿಂದ ಮಿಸ್ ಫೈರಿಂಗ್ ಆಗಿ ತೊಡೆಯ ಭಾಗಕ್ಕೆ ಗುಂಡು ಹೊಡೆದುಕೊಂಡಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಈವರೆಗೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.