ಮಂಗಳೂರು: ನಗರದ ಬಲ್ಮಠದಲ್ಲಿರುವ ಕೊಂಕಣಿ ನಾಟಕ್ ಸಭಾಂಗಣದಲ್ಲಿ ಸಾಮರಸ್ಯ ಮಂಗಳೂರು ಹಾಗೂ ಕರಾವಳಿ ಹಾಲುಮತ ಕುರುಬರ ಸಂಘ (ರಿ.) ದ.ಕ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬದುಕು ಸಮರ್ಪಿಸಿ, ತನ್ನ 32ನೇ ವಯಸ್ಸಿಗೆ ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ನೇಣುಕುಣಿಕೆಗೆ ಕೊರಳೊಡ್ಡಿದ ಮಹಾನ್ ದೇಶಭಕ್ತ ಸಂಗೊಳ್ಳಿ ರಾಯಣ್ಣರವರ 194ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಸಾಮರಸ್ಯ ಮಂಗಳೂರು ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ,ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷರಾದ ಚಂದ್ರಪ್ಪ ಬಿಕೆ , ಉಪಾಧ್ಯಕ್ಷರಾದ ಹನುಮಂತ ವೈ ನರಗುಂದ , ಲಕ್ಷ್ಮಿ ಹಿರೇ ಕುರುಬರ , ಪ್ರ.ಕಾರ್ಯದರ್ಶಿ ಯಮನಪ್ಪ ಮುತ್ತಲಗೇರಿ , ಸಹಕಾರ್ಯದರ್ಶಿ ಶರಣಪ್ಪ ನಾಯಕವಾಡಿ , ಕೋಶಾಧಿಕಾರಿ ಮಂಜುನಾಥ ಮಡ್ಡಿ , ಸಂಘಟನಾ ಕಾರ್ಯದರ್ಶಿ ಶಿವರಾಜ್ ಹೂವಿನ ಹಳ್ಳಿ , ಹಿರಿಯ ಸದಸ್ಯರಾದ ಸಂಗಪ್ಪ ಬಡಕನ್ನವರು , ಶಾಂತಪ್ಪ ಡೊಗ್ನದ , ಕನಕಪ್ಪ ಮುತ್ತಲಗೆರಿ ,ಬಾಲು , ನೇತ್ರಾವತಿ ಪಾಟೀಲ್ ,ರಾಜೇಶ್ವರಿ ನಾಯ್ಕ್ ,ಸಾಮರಸ್ಯ ವೇಧಿಕೆಯ ಕಾರ್ಯದರ್ಶಿಗಳಾದ ಟಿಸಿ ಗಣೇಶ್ , ರಾಜೇಶ ದೇವಾಡಿಗ ,ಸೀತಾರಾಮ್ ಶೆಟ್ಟಿ, ಸಮರ್ಥ್ ಭಟ್ , ನೀತು ಶರಣ್ ಮತ್ತಿತರು ಉಪಸ್ಥಿತರಿದ್ದರು.