ಮಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ತಪಸ್ಯ ಫೌಂಡೇಶನ್ ಮಾಡುತ್ತಾ ಬಂದಿದ್ದು, ಈಗ ಕಡಲತಡಿ ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲಿ ಬೀಚ್ ಉತ್ಸವವನ್ನು ಆಯೋಜಿಸಿದೆ. ಈ ಉತ್ಸವದ ಉದ್ಘಾಟನೆ ಶುಕ್ರವಾರ ಸಂಜೆ ನಡೆಯಿತು.
ತಪಸ್ಯ ಫೌಂಡೇಶನ್ ನೇತೃತ್ವದಲ್ಲಿ ಹಾಗೂ ಹಲವು ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆತಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನೆರವೇರಿಸಿದರು. ನಂತರ ಮಾತನಾಡಿದ ಅವರು "ಮನುಷ್ಯನ ಬದುಕಿಗೆ ಗುರಿಯಿರಬೇಕು, ರೋಗ ಪಿಡಿತರಾಗಿ ಕೊನೆಯ ಕಾಲಘಟ್ಟದಲ್ಲಿ ಇರುವವರಿಗೆ ಮಾಡುವ ಕಾರ್ಯ ದೊಡ್ಡದು, ತ್ಯಾಗ ಮತ್ತು ಸೇವೆ ಭಾರತದ ಮೌಲ್ಯ, ರೋಗ ಬಂದ ಮೇಲೆ ಔಷದಿ ಹುಡುಕುವುದ ಕ್ಕಿಂತಲೂ ಬರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಕಡಲಿನಂತೆ ನಾವು ಕ್ರೀಯಶೀಲರಾಗಿರಬೇಕು. ಸಮುದ್ರ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳುತ್ತದೆ. ಕೆಟ್ಟದ್ದನ್ನು ಬಿಸಾಕುತ್ತದೆ. ಹಾಗೆ ನಮ್ಮ ಬದುಕಾಗಬೇಕು ಎಂದು ಹೇಳಿದರು.
ಮಣ್ಣನ್ನು ಶುದ್ದಿಕರಿಸುವ ಅವಶ್ಯಕತೆವಿದೆ, ಸಾವಯವದಿಂದ ಆರೋಗ್ಯ ಪೂರ್ಣವಾಗುತ್ತದೆ. ಮಣ್ಣು ಶುದ್ಧವಾದರೆ ಮನುಷ್ಯನ ಜೀವವು ಸುದ್ದಿಯಾಗಿರುತ್ತದೆ. ತಪಸ್ಯ ಫೌಂಡೇಶನ್ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಈ ಕಾರ್ಯ ಕ್ರಮದಲ್ಲಿ ಎಂ.ಎಲ್ ಸಿ ಐವನ್ ಡಿಸೋಜಾ, ಪ್ರೋ ಪಿ.ಎಲ್ ಧರ್ಮ, ಕುಸ್ತಿ ಫೆಡರೇಷನ್ ಅಧ್ಯಕ್ಷ ಗುಣರಂಜನ್ ಶೆಟ್ಟಿ, ಗುರುನಾಥೆ ಗೌಡ, ಡಾ.ಚಂದ್ರೆ ಗೌಡ, ಪದ್ಮಶ್ರೀ ಉದಯ ದೇಶಪಾಂಡೆ, ಡಾ.ಕರುಣಾ ಸಾಗರ್, ಇದ್ರಾಣಿ ಕರುಣಾಸಾಗರ್, ಹರ್ಷ ಗೌಡ ಪಿ.ಎನ್ ಶೆಟ್ಟಿ, ಫೌಂಡೇಶನ್ ಅಧ್ಯಕ್ಷೆ ಸಬಿತಾ ಶೆಟ್ಟಿ ಉಪಸ್ಥಿತರಿದ್ದರು.
ಫೆ.1ರಂದು ಬೆಳಗ್ಗೆ 10ರಿಂದ ಕೃಷಿ ಮೇಳ, ನವನಾರಿ ಉದ್ಯಮಿ, ಆಹಾರ ಉತ್ಸವ, ವಿಜ್ಞಾನ ಮಾದರಿ ಪ್ರದರ್ಶನ, ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಕ್ಯಾನ್ಸರ್ ಉಚಿತ ತಪಾಸಣೆ, ಸಂಜೆ 5ಕ್ಕೆ ಬೈಕ್ ಸ್ಟಂಟ್, 7.15ಕ್ಕೆ ಕಳರಿಪಟ್ಟು ಪ್ರದರ್ಶನ, ರಾತ್ರಿ 8ಕ್ಕೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮವಿದೆ.
ಫೆ.2ರಂದು ಬೆಳಿಗ್ಗೆ 4.30ಕ್ಕೆ ಮ್ಯಾರಥಾನ್ ಆರಂಭಗೊಳ್ಳಲಿದ್ದು, ಬೆಳಿಗ್ಗೆ 6.30ಕ್ಕೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮಂಗಳೂರು ಟ್ರಯಾಥಾನ್, ಈಜು, ಸೈಕ್ಲಿಂಗ್, ರನ್ನಿಂಗ್, ವಾಕಿಂಗ್ ಸ್ಪರ್ಧೆ, ಸಂಜೆ 5ಕ್ಕೆ ಸ್ಟಾರ್ಟ್ ಅಪ್ ಫೆಸ್ಟ್, 7ಕ್ಕೆ ಸಾಂಪ್ರ ದಾಯಿಕ ಫ್ಯಾಶನ್ ಶೋ, ರಾತ್ರಿ 8ಕ್ಕೆ ನಿಹಾಲ್ ತಾವೊ ಸಂಗೀತ ಕಾರ್ಯಕ್ರಮ, ರಾತ್ರಿ 10ಕ್ಕೆ ಸುಡುಮದ್ದು ಪ್ರದರ್ಶನ ಆಯೋಜಿಸಲಾಗಿದೆ.