image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ SDPI ಯಿಂದ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ: ಮೂನಿಷ್ ಆಲಿ

ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ SDPI ಯಿಂದ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ: ಮೂನಿಷ್ ಆಲಿ

ಬಂಟ್ವಾಳ: ಅವೈಜ್ಞಾನಿಕತೆಯಿಂದ ಮತ್ತು ಅಸಮರ್ಪಕತೆಯಿಂದ ಕೂಡಿರುವ ಬಿ.ಸಿರೋಡ್ - ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಜನಜಾಥಾ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಆಲಿ ಬಂಟ್ವಾಳ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಯು ಪಾದಯಾತ್ರೆಯ ಮೂಲಕವಾಗಿದ್ದು, ಜನವರಿ 31 ಶುಕ್ರವಾರದಂದು ಬಿಸಿ ರೋಡಿನ ಕೈಕಂಬ ಜಂಕ್ಷನ್ ನಿಂದ ಟೋಲ್ ಗೇಟ್ ವರೆಗಿನ ಜಾಥಾವು ಮಧ್ಯಾಹ್ನ 3ಕ್ಕೆ ಸರಿಯಾಗಿ ಪ್ರಾರಂಭಿಸಲಾಗುವುದು ಎಂದಿದ್ದಾರೆ.

ಹಲವಾರು ಸಮಸ್ಯೆಗಳ ಆಗರವಾಗಿರುವ ಈ ಟೋಲ್ ಗೇಟ್ ವಿರುದ್ಧ ಎಲ್ಲಾ ಹೋರಾಟಗಾರರು ಪಕ್ಷಬೇಧ ಮರೆತು ಜನಜಾಥಾ ಪ್ರತಿಭಟನೆಗೆ ಸಹಕರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ