image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೂಲ್ಕಿಯ ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿನಿಗೆ ಕಿರುಕುಳ ಆರೋಪ...!

ಮೂಲ್ಕಿಯ ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿನಿಗೆ ಕಿರುಕುಳ ಆರೋಪ...!

ಮಂಗಳೂರು: ”ನನ್ನ ಮಗಳು ಬಿ.ಎಸ್.ಅಲ್ಫೋನ್ಸಾ  2022ರಲ್ಲಿ ಸೇಂಟ್ ಆನ್ಸ್ ಕಾಲೇಜ್ ಆಫ್ ನರ್ಸಿಂಗ್ ಮುಲ್ಕಿ ಪ್ರವೇಶ ಹೊಂದಿದ್ದಳು. ಮೊದಲ ಶೈಕ್ಷಣಿಕ ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಪ್ರವೇಶವನ್ನು ಹೊಂದಿದ್ದಳು. ಇದಕ್ಕೆ ಸಂಬಂಧಪಟ್ಟ ಕಾಲೇಜಿನ ಶುಲ್ಕವನ್ನು ಕೂಡ ಭರಿಸಿದ್ದೆ. ಆದರೆ 2024ರ ಅಕ್ಟೋಬರ್ 5ನೇ ತಾರೀಕಿನಂದು ಮೊಬೈಲ್ ಬಳಕೆ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ಕಾಲೇಜಿನಿಂದ ಅಮಾನತು ಮಾಡಿ ರಾತ್ರೋ ರಾತ್ರಿ ಮನೆಗೆ ಕಳುಹಿಸಿದ್ದಾರೆ. ಲೋಕಲ್ ಗಾರ್ಡಿಯನ್ ಗೂ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ನಾವು ಅಲ್ಲಿಗೆ  ತೆರಳಿ ಕಾರಣ ಕೇಳಿದರು ಕೂಡ ಕಾಲೇಜಿನ ಪ್ರಾಂಶುಪಾಲರಾಗಲಿ, ಕಾಲೇಜಿನ ನಿರ್ದೇಶಕ ಎರಿಕ್ ಲೋಬೋ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ“ಎಂದು ಬಾಲಕಿಯ ತಂದೆ ಸಭಾಸ್ಟಿಯನ್ ಆರೋಪಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ  ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ”ಬೇರೆ ಕಾಲೇಜಿಗೆ ಸೇರಲು ಅನೇಕ ಬಾರಿ ಹೋಗಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂಕ ಪ್ರತಿಗಳನ್ನು ಕೇಳಿದರು ಕೂಡ ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ 12/12/2024ರಂದು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜವವಾಗಿಲ್ಲ. ಬೇರೆ ಕಾಲೇಜಿಗೆ ಸೇರಲು ಬಿಡದೆ ಮಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಮುಲ್ಕಿ ನರ್ಸಿಂಗ್ ಕಾಲೇಜಿನ ಎರಿಕ್ ಲೋಬೋ ಮತ್ತು ಅವರ ಪತ್ನಿ ಸರಿತಾ. ಈ ರೀತಿ ಅನೇಕ ವಿದ್ಯಾರ್ಥಿಗಳಿಗೆ ಇದೇ ರೀತಿಯ ಮೋಸ ಮತ್ತು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ವಕೀಲರ ಮೂಲಕ ನೋಟಿಸ್‌ ನೀಡಿದರು ಅದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ನಾವು ರೋಸಿಹೋಗಿದ್ದೇವೆ. ಮಾನಸಿಕವಾಗಿ ನೊಂದು ಹೋಗಿದ್ದೇವೆ. ನನ್ನ ಮಗಳಿಗೆ ದೈಹಿಕವಾಗಿ ಮತ್ತು ಮಾನಸಿಕ ವಾಗಿ ಹಿಂಸೆ ಮಾಡಿದ್ದಾರೆ. ಮಗಳ ಜೀವಕ್ಕೆ ಅಪಾಯ ಆದರೆ ಅದಕ್ಕೆ ಆನ್ಸ್ ಕಾಲೇಜ್ ಆಫ್ ನರ್ಸಿಂಗ್ ನಿರ್ದೇಶಕ ಎರಿಕ್ ಲೋಬೋ ಮತ್ತು ಸರಿತಾ ಕಾರಣವಾಗಿರುತ್ತಾರೆ“ ಎಂದು ಆರೋಪಿಸಿದ್ದಾರೆ.

 

Category
ಕರಾವಳಿ ತರಂಗಿಣಿ