ಮಂಗಳೂರು: ಕರಾವಳಿ ಕರ್ನಾಟಕ ಭಾಗದ ಸಾಂಪ್ರದಾಯಿಕ ಜನಪದ ಕ್ರೀಡೆಯಾಗಿರುವ ಕಂಬಳವನ್ನು ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬ ಸದುದ್ದೇಶದಿಂದ ಜಯ-ವಿಜಯ ಜೋಡುಕರೆ ಸಮಿತಿ ಜಪ್ಪಿನಮೊಗರು ಮಂಗಳೂರು ಇವರ ನೇತೃತ್ವದಲ್ಲಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೀಷ ಜಿ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 15ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ದಿನಾಂಕ 08.02.2025ನೇ ಶನಿವಾರದಂದು ನಡೆಯಲಿದೆ ಎಂದು ಗೌರವಾಧ್ಯಕ್ಷರಾದ ಮಂಗಳೂರು ವಿಧಾನಸಬಾ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಅವರು ನಗರದ ಖಾಸಗಿ ಹೊಟೆಲಿನಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಜಪ್ಪಿನಮೊಗರು ಗ್ರಾಮದೈವ ಕಂರ್ಭಿಸ್ಥಾನ ಶ್ರೀ ದೈವಸ್ಥಾನದ ಆಡಳಿತ ಮೊಕೇಸರರಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿರುವ, ಕೃಷಿಯೇ ಪ್ರಧಾನವಾಗಿದ್ದ ಊರಿನ ಧಾರ್ಮಿಕ ಮತ್ತು ಸಾಮಾಜಿಕ ನೇತಾರ ಕೀರ್ತಿಶೀಷ ಜಿ. ಜಯಗಂಗಾಧರ ಶೆಟ್ಟಿಯವರು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಇವರ ಸ್ಮರಣಾರ್ಥ ಇವರ ಮಗನಾದ ಶ್ರೀ. ಜೆ ಅನಿಲ್ ಶೆಟ್ಟಿಯವರ ನಾಯಕತ್ವದಲ್ಲಿ ಮಂಗಳೂರು ಮಹಾನಗರ ವ್ಯಾಪ್ತಿಗೊಳಪಡುವ ಜಪ್ಪಿನಮೊಗರು ನಗರ ಪ್ರದೇಶದಲ್ಲಿ ಊರು ಪರವೂರಿನ ಕಂಬಳಾಭಿಮಾನಿಗಳ ಸಹಕಾರದಿಂದ ಕಳೆದ 14 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಜನಪದ ಕ್ರೀಡೆಯು ಪ್ರಸ್ತುತ ಜಪ್ಪಿನಮೊಗರು ಗ್ರಾಮಸ್ಥರು ಹಾಗೂ ಇತರ ಕಂಬಳ ಪ್ರೇಮಿಗಳ ಒಗ್ಗೂಡುವಿಕೆಯಿಂದ ಜನಪರ ಉತ್ಸವವಾಗಿ ರೂಪುಗೊಂಡಿದೆ ಎಂದರು.
15ನೇ ವರ್ಷದ ಜಪ್ಪಿನಮೊಗರು ಜಯ-ವಿಜಯ ಜೋಡುಕರೆ ಕಂಬಳವು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಇವರ ಗೌರವಾಧ್ಯಕ್ಷತೆಯಲ್ಲಿ, ಶ್ರೀ ಅನಿಲ್ ಜೆ. ಶೆಟ್ಟಿ ಮನ್ಯುತೋಟಗುತ್ತು ಇವರ ಅಧ್ಯಕ್ಷತೆಯಲ್ಲಿ, ಶ್ರೀ ಸುಧಾಕರ ಶೆಟ್ಟಿ ವ್ಯವಸ್ಥಾಪಕ ನಿರ್ದೇಶಕರು, ಸುತೇಜ್ ಎಂಟರ್‌ಪ್ರೈಸಸ್ ಮುಂಬಯಿ ಇವರ ಮಾರ್ಗದರ್ಶನದಲ್ಲಿ ಹಾಗೂ ಕಾರ್ಯಾಧ್ಯಕ್ಷರುಗಳಾದ ಶ್ರೀಮತಿ ವೀಣಾಮಂಗಳ ಅಧ್ಯಕ್ಷರು ಪಟ್ಟಣ ಯೋಜನಾ & ಸುಧಾರಣಾ ಸ್ಥಾಯಿ ಸಮಿತಿ ಮ.ನಪಾ, ಮಂಗಳೂರು, ಶ್ರೀ ಟಿ. ಪ್ರವೀಣ್ ಚಂದ್ರ ಆಳ್ವ ಕಾರ್ಪೊರೇಟರ್, ಶ್ರೀ ಶಕೀನ್ ಶೆಟ್ಟಿ, ಶ್ರೀ ಸಂದೀಪ್ ಶೆಟ್ಟಿ ಎಕ್ಕೂರು, ಶ್ರೀ ಸಂತೋಷ್ ಆಳ್ವ ತೋಚಿಲಗುತ್ತು ಹಾಗೂ ಶ್ರೀ ನಿಶಾನ್ ಪೂಜಾರಿ ಇವರುಗಳ ಸಹಕಾರದೊಂದಿಗೆ ಜರಗಲಿದೆ.
ದಿನಾಂಕ 08.02.2025ರಂದು ಬೆಳಿಗ್ಗೆ 8.30ಕ್ಕೆ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳು ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿರುವ ಶ್ರೀ ಎಸ್. ಗಣೇಶ್ ರಾವ್ ಇವರ ಘನ ಅಧ್ಯಕ್ಷತೆಯಲ್ಲಿ, ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿವರ್ಯರಿಂದ ಕಂಬಳವು ಉದ್ಘಾಟನೆಗೊಳ್ಳಲಿದೆ.
ಕುಳೂರು ಕನ್ಯಾನ ಶ್ರೀಯುತ ಸದಾಶಿವ ಶೆಟ್ಟಿ ಹಾಗೂ ಇತರ ಅನೇಕ ಗಣ್ಯ ಅತಿಥಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಾಯಂಕಾಲ ಗಂಟೆ 7.00ಕ್ಕೆ ಸಭಾ ಕಾರ್ಯಕ್ರಮವು ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭಾ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರಾದ ಸನ್ಮಾನ್ಯ ಶ್ರೀ ಮನೋಜ್ ಕುಮಾರ್, ಸಂಸಾದರಾದ ಸನ್ಮಾನ್ಯ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟಿ. ನಾಡಾಜೆಗುತ್ತು ಶ್ರೀಮತಿ ಉಮಾವತಿ ಶೆಟ್ಟಿ ಹಾಗೂ ಗೌರವಾನ್ವಿತ ಜನಪ್ರತಿನಿಧಿಗಳು, ಉದ್ಯಮಿಗಳು, ಸಿನಿಮಾ ತಾರೆಯರು ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಕಳೆದ ಬಾರಿಯ ಕಂಬಳದಲ್ಲಿ ಸುಮಾರು 150 ಜೊತೆ ಕೋಣಗಳು ವಿವಿಧ ವಿಭಾಗಗಳಲ್ಲಿ ಭಾಗಹಿಸಿದ್ದು, ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಕನಹಲಗೆ, ಹಗ್ಗ ವಿಭಾಗ, ನೇಗಿಲು ವಿಭಾಗ ಹಾಗೂ ಅಡ್ಡ ಹಲಗೆ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದ್ದು ವಿಜೇತ ಕೋಣಗಳಿಗೆ ಈ ಬಾರಿಯೂ ಚಿನ್ನದ ಪದಕದೊಂದಿಗೆ ಶಾಶ್ವತ ಫಲಕವನ್ನು ನೀಡಿ ಗೌರವಿಸಲಾಗುತ್ತದೆ.
ಈ ಸಂದರ್ಭದಲ್ಲಿ ಶ್ರೀ. ಅನಿಲ್ ಶೆಟ್ಟಿ ಮನ್ನುತೋಟಿಗುತ್ತು, ಶ್ರೀಮತಿ ವೀಣಾಮಂಗಳ, ಶ್ರೀ ಪ್ರವೀಣ್ ಚಂದ್ರ ಆಳ್ವ ತಿರುವೈಲ್ ಗುತ್ತು, ಶ್ರೀ ಶಕೀನ್ ಶೆಟ್ಟಿ ಶ್ರೀ ಸಂದೀಪ್ ಶೆಟ್ಟಿ ಎಕ್ಕೂರು, ಶ್ರೀ ಸಂತೋಷ್ ಆಳ್ವ, ಶ್ರೀ ಉಮೇಶ್ ಅತಿಕಾರಿ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ರಾಜಾನಂದ ರೈ, ಶ್ರೀ ನಿಶಾನ್ ಪೂಜಾರಿ, ಶ್ರೀ ಚಿತ್ತರಂಜನ್ ಬೋಳಾರ್, ಶ್ರೀ ರಾಕೇಶ್ ರೈ, ಶ್ರೀ ಗಣೇಶ್ ಶೆಟ್ಟಿ ಅಕ್ಷಯ, ಶ್ರೀ ಗಣೇಶ್ ಶೆಟ್ಟಿ, ಶ್ರೀ ಭುಜಂಗ ಶೆಟ್ಟಿ ಜಪ್ಪುಗುಡ್ಡೆ ಗುತ್ತು, ಶ್ರೀ ಜೆ. ನಾಗೇಂದ್ರಕುಮಾರ್, ಶ್ರೀ ಸಾಯುದ್ದೀನ್, ಶ್ರೀ ಸುರೇಶ್ ಶೆಟ್ಟಿ ಕೊಳಂಬ್ಳೆ, ಶ್ರೀ ಶೈಲೇಶ್ ಭಂಡಾರಿ ಮತ್ತು ಮೊದಲಾದವರು ಉಪಸ್ಥಿತರಿದ್ದರು.