image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಳೆ ಕರೆಂಟ್ ಇಲ್ಲ

ನಾಳೆ ಕರೆಂಟ್ ಇಲ್ಲ

ನಾಗುರಿ ,ಪಂಪ್‌ವೆಲ್: ವಿದ್ಯುತ್‌ ನಿಲುಗಡೆ

ಮಂಗಳೂರು: ಕುಲಶೇಖರ 110/33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ನಾಗುರಿ(ಎಕ್ಕೂರು) ಫೀಡರ್‌‌ ಮತ್ತು 11ಕೆವಿ ಪಂಪ್‌ವೆಲ್ ಫೀಡರ್‌ ಗಳ ವ್ಯಾಪ್ತಿಯಲ್ಲಿ ಜ.24 ರಂದು ವಿದ್ಯುತ್‌ ನಿಲುಗಡೆಗೊಳ್ಳಲಿದೆ. ಅಂದು  ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ  ಈ ಫೀಡರ್‌ ಗಳಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಮರೋಳಿ, ಪಂಪ್‌ವೆಲ್‌, ಅಳಪೆ, ಮೇಘನಗರ, ನಾಗುರಿ, ನೇತ್ರಾವತಿ ಬಡಾವಣೆ,ಕಪಿತಾನಿಯೊ, ರೆಡ್‌ಬಿಲ್ಡಿಂಗ್‌, ರೈಲ್ವೇಸ್ಟೇಷನ್‌, ಕ್ವಾಡ್‌ ಸೆಂಟರ್‌, ಇಂಡಿಯಾನ ಹಾಸ್ಪಿಟಲ್‌, ನಿಟ್ಟೆ ಎಜುಕೇಷನ್‌,ಮಹಾವೀರ ಸರ್ಕಲ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾ೦ ಪ್ರಕಟನೆ ತಿಳಿಸಿದೆ.

ಬಲ್ಮಠ: ವಿದ್ಯುತ್‌ ನಿಲುಗಡೆ

ಕದ್ರಿ 33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಬಲ್ಮಠ ಫೀಡರ್‌ನಲ್ಲಿ  ಜ.24 ರಂದು ವಿದ್ಯುತ್‌ ನಿಲುಗಡೆಗೊಳ್ಳಲಿದೆ. 

ಅ೦ದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಫೀಡರ್‌ ಗಳಲ್ಲಿ  ವ್ಯವಸ್ಥೆ ಸುಧಾರಣೆ ಹಾಗೂ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಬೆಥನಿ‌, ಸೈಂಟ್‌ ಥೆರೆಸಾ, ಎಸ್.ಸಿ.ಎಸ್‌ ಹಾಸ್ಪಿಟಲ್‌, ಕಲೆಕ್ಟರ್ಸ್‌ ಗೇಟ್‌, ಬಲ್ಮಠ, ಕೊಲಾಸೊ ಆಸ್ಪತ್ರೆ, ಕ್ವೀನ್ಸ್‌ ಕಾರ್ನರ್‌, ಕುಮಾರ್‌ಇಂಟರ್‌ ನ್ಯಾಷನಲ್‌,ಡೊಮಿನಿಕ್‌ ಫಿಜಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ  ಎ೦ದು ಮೆಸ್ಕಾ೦ ಪ್ರಕಟನೆ ತಿಳಿಸಿದೆ.

Category
ಕರಾವಳಿ ತರಂಗಿಣಿ