image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜನವರಿ 26 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕು. ಹರ್ಷಿತಾ ಕುಲಾಲ್...

ಜನವರಿ 26 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕು. ಹರ್ಷಿತಾ ಕುಲಾಲ್...

ಬಂಟ್ವಾಳ :ಜನವರಿ 26 ರಂದು ಬೆಂಗಳೂರು ಮಾಣಿಕ್ ಷಾ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಗಣ್ಯರ ಸಮ್ಮುಖದಲ್ಲಿ ನಡೆಯುವ ಪಥಸಂಚಲನದಲ್ಲಿ ದ.ಕ. ಜಿಲ್ಲೆಯನ್ನು ಪಾದುವ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿನಿ ಕು| ಹರ್ಷಿತಾ ಕುಲಾಲ್  ಪ್ರತಿನಿಧಿಸಲಿದ್ದಾರೆ. 

ಎಸ್.ಡಿ.ಎಂ. ಆಯುರ್ವೇದ ಕಾಲೇಜು ಹಾಸನದಲ್ಲಿ ನಡೆಯದ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನ ತರಬೇತಿ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ ಪದವಿ ಪೂರ್ವ ವಿಭಾಗದಿಂದ ಅಯ್ಕೆಗೊಂಡಿದ್ದಾರೆ.

ಇವರು ಪಾದುವ ಪದವಿ ಪೂರ್ವ ಕಾಲೇಜು ನಂತೂರು, ಮಂಗಳೂರು ಇಲ್ಲಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು,  ನೀರುಮಾರ್ಗ ಗ್ರಾಮದ ಶ್ರೀ ಪುರುಷೋತ್ತಮ್ ಕುಲಾಲ್ ಮತ್ತು ಶ್ರೀಮತಿ ಸುಲತಾ ದಂಪತಿಗಳ ಪುತ್ರಿ.

Category
ಕರಾವಳಿ ತರಂಗಿಣಿ