image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗೋವಿನ ಮೇಲೆ ನಡೆಯುತ್ತಿರುವ ವಿಕೃತ ಕೃತ್ಯ ಖಂಡಿಸಿ ಗೋ ಸಂರಕ್ಷಣಾ ಸಂವರ್ಧನ ಸಮಿತಿ ವತಿಯಿಂದ ನಡೆಯುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ - ವಿಶ್ವ ಹಿಂದೂ ಪರಿಷದ್

ಗೋವಿನ ಮೇಲೆ ನಡೆಯುತ್ತಿರುವ ವಿಕೃತ ಕೃತ್ಯ ಖಂಡಿಸಿ ಗೋ ಸಂರಕ್ಷಣಾ ಸಂವರ್ಧನ ಸಮಿತಿ ವತಿಯಿಂದ ನಡೆಯುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ - ವಿಶ್ವ ಹಿಂದೂ ಪರಿಷದ್

ಮಂಗಳೂರು: ಬೆಂಗಳೂರಿನ ಚಾಮರಾಜನಗರದಲ್ಲಿ ನಾವು ನಿತ್ಯ ಆರಾಧಿಸುವ ಪವಿತ್ರ ಗೋಮಾತೆಯ ಕೆಚ್ಚಲನ್ನು ಕತ್ತರಿಸಿ ವಿಕೃತ ಕೃತ್ಯ ನಡೆಸಿದ್ದು ಅಲ್ಲದೆ, ನಂಜನಗೂಡಿನಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಧಾನವಾಗಿ ನೀಡಿದ್ದ ಹಸುವಿನ ಮೇಲೆ ದುಷ್ಟರು ಮಾರಕಾಸ್ತ್ರದಿಂದ ದಾಳಿ ಮಾಡಿ ಹಸುವಿನ ಬಾಲವನ್ನು ಕತ್ತರಿಸಿ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಅಲ್ಲದೆ ಇಂದು 

ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ  ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಗರ್ಭ ಧರಿಸಿದ್ದ ಹಸುವನ್ನು ದುಷ್ಕರ್ಮಿಗಳು ರುಂಡ ಕತ್ತರಿಸಿ ಕೊಲೆ ಮಾಡಿದ್ದಾರೆ ಅಲ್ಲದೆ ಅದರ ಗರ್ಭದಲ್ಲಿರುವ ಕರುವನ್ನು ಕೊಂದು ರಾಕ್ಷಸೀಯ ಕೃತ್ಯ ಮೆರೆದಿದ್ದಾರೆ. ಈ ಎಲ್ಲಾ ಕೃತ್ಯವನ್ನು ಖಂಡಿಸಿ ನಾಳೆ 21 ಜನವರಿ 2025 ಮಂಗಳವಾರ  ಗೋ ಸಂರಕ್ಷಣಾ ಸಂವರ್ಧನ ಸಮಿತಿ ಮಂಗಳೂರು ವತಿಯಿಂದ ಬೆಳಿಗ್ಗೆ 10 :00 ಗಂಟೆಗೆ ತಾಲೂಕು ಕಚೇರಿ ಎದುರುಗಡೆ ಪ್ರತಿಭಟನೆ ನಡೆಯಲಿದ್ದು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುತ್ತದೆ.

ಗೋವು ಮಾತ್ರವಲ್ಲದೆ ಸಕಲ ಪ್ರಾಣಿಗಳಿಗೂ ದಯೆ ನೀಡಿ ಆಶ್ರಯ ಕೊಡುವ ಸನಾತನ ಧರ್ಮವನ್ನು ವಿರೋಧಿಸುವ ದುಷ್ಟ ಶಕ್ತಿಗಳು ಗೋಮಾತೆಯನ್ನು ಹಿಂಸಿಸುವ ಕುಕೃತ್ಯ ಎಸಗಿದೆ. ಈ ಕೃತ್ಯವನ್ನು ಸಮಸ್ತ ಮಾನವ ಕುಲ ಖಂಡಿಸಿ ವಿರೋಧಿಸಬೇಕು. ನಾಳೆ ನಡೆಯುವ ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರು ಎಚ್ ಕೆ ಪುರುಷೋತ್ತಮ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದರು.

Category
ಕರಾವಳಿ ತರಂಗಿಣಿ