image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಭಾಧ್ಯಕ್ಷ ಯುಟಿ ಖಾದರ್ ನೇತೃತ್ವದ "ನರಿಂಗಾನ ಕಂಬಳ"ಕ್ಕೆ ಸಂಭ್ರಮದ ಚಾಲನೆ

ಸಭಾಧ್ಯಕ್ಷ ಯುಟಿ ಖಾದರ್ ನೇತೃತ್ವದ "ನರಿಂಗಾನ ಕಂಬಳ"ಕ್ಕೆ ಸಂಭ್ರಮದ ಚಾಲನೆ

ಕೊಣಾಜೆ: ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯುವ ತೃತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ 'ನರಿಂಗಾನ ಕಂಬಳ'ಕ್ಕೆ ಇಂದು ಸಂಭ್ರಮದ ಚಾಲನೆ ದೊರೆಯಿತು.ಶ್ರೀಧಾಮ ಮಾಣಿಲದ ಶ್ರೀ ಮೋಹನ್ ದಾಸ್ ಸ್ವಾಮೀಜಿ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿ, ಇಡೀ ಜಗತ್ತಿನಲ್ಲಿ ಇಂದು ಹಿಂಸೆ ತಾಂಡವವಾಡುತ್ತಿದೆ. ಇಡೀ ಜಗತ್ತಿಗೆ ಶಾಂತಿ, ಸಾಮರಸ್ಯ ಮತ್ತು ಏಕತೆಯ ಅಗತ್ಯವಿದೆ ಎಂದರು.

ಕಂಬಳ ಜಾನಪದ ಕ್ರೀಡೆಯಷ್ಟೇ ಅಲ್ಲ, ಸಾಮರಸ್ಯದ ಕ್ರೀಡೆಯೂ ಹೌದು. ಕಂಬಳವು ನಮ್ಮ ತುಳುನಾಡಿನಲ್ಲಿ ಧಾರ್ಮಿಕ ಮೌಲ್ಯದೊಂದಿಗೆ ಸಾಮರಸ್ಯ ಸೃಷ್ಟಿಗೆ ಪ್ರೇರಣೆಯಾಗಲಿ. ಎಲ್ಲರೂ ಒಗ್ಗೂಡಿ ನಡೆಯುವಂತಹ ನರಿಂಗಾನ ಕಂಬಳ ಯಶಸ್ವಿಯಾಗಲಿ ಎಂದು ಹಾರೈಸಿದರು.

ರಾಜ್ಯ ವಿಧಾನಸಭಾ ಅಧ್ಯಕ್ಷ, ಕಂಬಳ ಸಮಿತಿಯ ಅಧ್ಯಕ್ಷ ಯು.ಟಿ.ಖಾದ‌ರ್ ಮಾತನಾಡಿ, ಕಂಬಳಕ್ಕೆ ನಮ್ಮ ನಾಡಿನಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ನರಿಂಗಾನ ಕಂಬಳ ಕಳೆದ ಮೂರು ವರ್ಷಗಳಿಂದ ವೆಂಕಪ್ಪ ಕಾಜವ ಗೌರವಾಧ್ಯಕ್ಷತೆಯೊಂದಿಗೆ ಸರ್ವರು ಒಗ್ಗೂಡಿಕೊಂಡು ಮಾಡುವ ಇಡೀ ಊರಿನ ಕಂಬಳೋತ್ಸವ ಇದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ, ಧರ್ಮಗುರುಗಳಾದ ಫಾ.ಫೆಡ್ರಿಕ್ ಕೊರೆಯಾ, ಬೋಡಿಂಜೆ ಗುತ್ತು ಗುರಿಕಾರ ಪ್ರಮೋದ್ ರೈ, ಸಜಿಪ ಸುಬ್ರಹ್ಮಣ್ಯ ದೇವಸ್ತಾನದ ಮೊಕೇಸರ ಮುಳಿಂಜ ವೆಂಕಟೇಶ್ ಭಟ್, ಗಡಿ ಪ್ರಧಾನ ಗುಣಕರ ಆಳ್ವ ಯಾನೆ ರಾಮ ರೈ, ಸೋಮನಾಥೇಶ್ವರ ದೇವಳದ ಸುದರ್ಶನ ಶೆಟ್ಟಿ, ಗಡಿ ಪ್ರಧಾನ ಅಣ್ಣ ಅರವಾಳ್, ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ಪದ್ಮನಾಭ ರೈ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ನುಣಿಯಾಲು ರವೀಂದ್ರ ಶೆಟ್ಟಿ, ವಿದ್ಯಾರತ್ನ ವಿದ್ಯಾಸಂಸ್ಥೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಮುಖಂಡರಾದ ಸದಾಶಿವ ಉಳ್ಳಾಲ್, ಪಣೋಲಿಬೈಲು ಕ್ಷೇತ್ರದ ವಾಸುದೇವ ಮೂಲ್ಯ, ಮಾಜಿ ಮೇಯರ್ ಭಾಸ್ಕರ್, ಉದ್ಯಮಿ ಎಸ್.ಕೆ.ಹಾಜರ್, ತಾಜುದ್ದೀನ್‌ ಪಜೀರು, ದೇವದಾಸ ಭಂಡಾರಿ, ಮಾಜಿ ಅಧ್ಯಕ್ಷರಾದ ಶೈಲಜಾ, ಶೋಧನ್ ಶೆಟ್ಟಿ, ಮೈನಾ ಕಾಜವ, ಪ್ರಸಾದ್ ರೈ ಕಲಿಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

Category
ಕರಾವಳಿ ತರಂಗಿಣಿ