ಮಂಗಳೂರು ; ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಲ್ಲೂ ಹಲವಾರು ರೀತಿಯ ಸ್ಟುಪ್ತ ಪ್ರತಿಭೆಗಳು ಇರುತ್ತದೆ. ಅದನ್ನು ಪ್ರಚೋದನೆಗೊಳಿಸಿ ಸೂಕ್ತವಾದ ತರಬೇತಿ ನೀಡಿದಲ್ಲಿ ಆ ಪ್ರತಿಭೆಗಳು ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವುದರಲ್ಲಿ ಸಂದೇಹವಿಲ್ಲ. ಮಾತ್ರವಲ್ಲ, ಭಿನ್ನ ಸಾಮರ್ಥ್ಯದವರನ್ನು ಆ ಮೂಲಕ ಮುಖ್ಯವಾಹಿನಿಗೆ ತರಲು ಸಾಧ್ಯವಿದೆ ಎಂಬುವುದು ನಿಜವಾದ ಮಾತು. ಇದೇ ಉದ್ದೇಶವನ್ನಿರಿಸಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಾನ ಮನಸ್ಕರನ್ನೊಡಗೂಡಿಸಿ 2010ರಲ್ಲಿ ಪ್ರಾರಂಭಗೊಂಡ ಸಂಸ್ಥೆಯೇ ಸ್ಪೋರ್ಟ್ಸ್ ಅಂಡ್ ಕಲ್ಬರಲ್ ಅಕಾಡೆಮಿ ಫಾರ್ ಡಿಫರೆಂಟ್ಲಿ ವಿಬಲ್ಡ್(ರಿ.) (ಸಕಾಡ) 2010ರಿಂದ ಇಂದಿನವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಮೈಸೂರು, ಮಂಡ್ಯ, ಸುತ್ತೂರು, ಮಂಗಳೂರು, ಉಡುಪಿ, ದಾವಣಗೆರೆ, ಮಡಿಕೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಸಿಕೊಂಡು ಬಂದಿದೆ. ಇತ್ತೀಚೆಗೆ 2024 ನವೆಂಬರ್ ತಿಂಗಳ 11ನೇ ತಾರೀಕಿನಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ 'ಅರುಣಚೇತನ' ವಿಶೇಷ ಶಾಲೆಯಲ್ಲಿ ಸಭೆ ಸೇರಿ ಇದೇ ನೂತನ ವರ್ಷ 2025 ಜನವರಿ ತಿಂಗಳ 11 ಮತ್ತು 12ನೇ ದಿನಾಂಕದಂದು 2 ದಿನಗಳ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯ ಸ್ಪರ್ಧೆ “ಸಕಾಡೋತ್ಸವ-2025" ಕಾರ್ಯಕ್ರಮವನ್ನುಮಂಡ್ಯ ಜಿಲ್ಲೆಯ 'ಆಶಾಸದನ' ವಿಶೇಷ ಶಾಲೆಯ ಸಹಯೋಗದೊಂದಿಗೆ ಸುಭಾಷ್ ನಗರದಲ್ಲಿರುವ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಸಲಾಗುವುದು ಎಂದು ವಸಂತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಒಟ್ಟು 30 ಶಾಲೆಗಳು ಭಾಗವಹಿಸಲಿದ್ದು, ಒಟ್ಟು 400 ವಿಶೇಷ ಮಕ್ಕಳು ಹಾಗೂ 200ಕ್ಕೂ ಮಿಕ್ಕಿ ಅವರ ಸಹಾಯಕರು ಭಾಗವಹಿಸುವ ನಿರೀಕ್ಷೆ ಇದೆ. ಸಾಂಥೋಮೆ ಪಬ್ಲಿಕ್ ಸ್ಕೂಲ್ ಮಂಡ್ಯ ಇಲ್ಲಿ ಎಲ್ಲರಿಗೂ 2 ದಿನ ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.ಸಾಂತೋಮೆ ಪಬ್ಲಿಕ್ ಸ್ಕೂಲಿನ 50 ಮಂದಿ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ನೆರವಾಗಲಿದ್ದಾರೆ.
"ಸಕಾಡೋತ್ಸವ-2025"ರಲ್ಲಿ ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದು, ಅದರ ಜವಾಬ್ದಾರಿಯನ್ನು ಹೊಟೇಲ್ ಉದ್ಯಮಿ ಶ್ರೀ ಅನಿಲ್ ಅಪೂರ್ವ ವಹಿಸಿಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.
ಭಿನ್ನ ಸಾಮರ್ಥ್ಯದ ಮಕ್ಕಳ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವ ಸಲುವಾಗಿ 2025 ಜನವರಿ 11ನೇ ತಾರೀಕು ಪೂರ್ವಾಹ್ನ ಘಂಟೆ 9ಕ್ಕೆ ಸರಿಯಾಗಿ ಮಂಡ್ಯ ಜಿಲ್ಲಾ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿರುವ ಉದ್ಯಾನದಿಂದ ಡಾ| ಬಿ.ಆರ್. ಅಂಬೇಡ್ಕರ್ ಭವನಕ್ಕೆ ಪಥ ಸಂಚಲನ ನಡೆಯಲಿದ್ದು, ಪಥ ಸಂಚಲನದ ಉದ್ಘಾಟನೆಯನ್ನು ಮಂಡ್ಯ ಜಿಲ್ಲಾ ಹೊಟೇಲ್ ಉದ್ಯಮಿ ಶ್ರೀ ಅನಿಲ್ ಅಪೂರ್ವ ನೆರವೇರಿಸಲಿದ್ದಾರೆ. ಸಕಾಡೋತ್ಸವ-2025ರ ಪ್ರಥಮ ಸ್ಥಾನ ವಿಜೇತರಿಗೆ ನಗದು ಬಹುಮಾನ ರೂ.15.000/-. ದಿ.ತೀಯ ಸಾನದ ವಿಜೇತ ತಂಡಕ್ಕೆ ರೂ. 12,000/- ಹಾಗೂ ತೃತೀಯ ಸ್ಥಾನ ವಿಜೇತರಿಗೆ 10,000/- ನಗದು ನೀಡಲಾಗುವುದು ಹಾಗೂ 10 ಸಮಾಧಾನಕರ ಬಹುಮಾನ. ಪ್ರತಿ ತಂಡಕ್ಕೆ ರೂ. 2,000/ ದಂತೆ ನೀಡಲಾಗುವುದು. ಮಾತ್ರವಲ್ಲದೆ, ವಿಜೇತ ತಂಡಕ್ಕೆ ಫಲಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೆ ಸಾಂತೋಮೆ ಸಮೂಹ ಸಂಸ್ಥೆ ವತಿಯಿಂದ ನೆನಪಿನ ಕಾಣಿಕೆ ನೀಡಲಾಗುವುದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಅಗ್ನಿಸ್ ಕುಂದರ್, ಕಾಂತಿ ಹರೀಶ್, ಮಹಮ್ಮದ್ ಬಶೀರ್ ರವರು ಉಪಸ್ಥಿತರಿದ್ದರು.