ವಿಟ್ಲ: ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ ಇಂದು ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಿಶೇಷ ಕಾರ್ಯಾಗಾರ ಸರಕಾರಿ ಪ್ರೌಢ ಶಾಲೆ ಮಾಣಿಲ ದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ Epiance Software Pvt Ltd. ಇದರ ಡೈರೆಕ್ಟರ್ ಶ್ರೀ ಸತೀಶ್ ನಾಯಕ್ ಮಾತನಾಡಿ, ತಿಳುವಳಿಕೆ ಎಂಬುವುದು ಬೆಳಗುತ್ತಿರುವ ದೀಪದಂತೆ ಅದನ್ನು ನಾವು ಇನ್ನೊಬ್ಬರಿಗೆ ಹಂಚಿ ಕೊಳ್ಳುವುದರಿಂದ ಅದು ಎಲ್ಲೆಡೆಯೂ ಪಸರಿಸುತ್ತದೆ ಹಾಗೆಯೇ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಮತ್ತು ನಂತರ ಯಾವ ವಿಭಾಗವನ್ನು ಆಯ್ಕೆ ಮಾಡಬಹುದು ಹಾಗೂ ವಿದ್ಯಾರ್ಥಿಯು ಒಂದು ಮನೆಯ ಮಗುವಾಗಿ, ಶಾಲೆಯ ವಿದ್ಯಾರ್ಥಿಯಾಗಿ, ಊರಿನ ಪ್ರಜೆಯಾಗಿ ಮನೆಗೆ-ಶಾಲೆಗೆ-ಊರಿಗೆ ನಮ್ಮ ಕೊಡುಗೆ ಏನು ಎಂಬುವುದನ್ನು ಸವಿಸ್ತಾರವಾಗಿ ತಿಳಿಸಿ ಕೊಟ್ಟರು.
ಕಾರ್ಯಾಗಾರದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ ಮಾತನಾಡಿ ಮಾತೃಭೂಮಿ ಯುವ ವೇದಿಕೆ ಸಂಘದ ಕಾರ್ಯ ವೈಖರಿಯ ಬಗ್ಗೆ ಪ್ರಶಂಸೆಯನ್ನು ಮಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಸೇನಾ ವಾಹನ ಆಯತಪ್ಪಿ ಕಂದಕಕ್ಕೆ ಉರುಳಿಬಿದ್ದು ಐವರು ಯೋಧರಾದ ಸುಬೇದಾರ್ ದಯಾನಂದ ತಿರಕಣ್ಣವರ್, ಲ್ಯಾನ್ಸ್ ಹವಾಲ್ದಾರ್ ಅನೂಪ್, ನಾಯಕ್ ಘಡ್ಗೆ ಶುಭ ಸಮಾಧಾನ್, ಸಿಪಾಯಿ ನಿಕುರೆ ದಿಗಂಬರ್ ಮತ್ತು ಸೆ.ಮಹೇಶ್ ಮರಿಗೊಂಡ್ ಇವರು ವೀರ ಮರಣವನ್ನು ಹೊಂದಿ, ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಯೋಧರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಹಾಗೂ ಯೋಧರ ಆತ್ಮಗಳಿಗೆ ಚಿರಶಾಂತಿಯನ್ನು ಕೋರುತ್ತಾ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ಕುಮಾರ್ ಕಕ್ವೆ ವಹಿಸಿದರು, ಸದಸ್ಯರಾದ ಮಿಥುನ್ ಕುಮಾರ್ ಇವರು ಸ್ವಾಗತಿಸಿ, ಸದಸ್ಯರಾದ ಶ್ರೀಮತಿ ಮಂಜುಳಜ್ಯೋತಿ ವಂದಿಸಿದರು. ಕು|ಮನ್ವಿ, ಕು|ವರ್ಷಾ ಮತ್ತು ಕು| ಆಶಿಕಾ ಪ್ರಾರ್ಥಿಸಿ, ಕು|ದೀಕ್ಷಾ ಕಾಪಿಕಾಡ್ ಇವರು ಕಾರ್ಯಕ್ರಮ ನಿರೂಪಿಸಿದರು.