image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನ ಹೃದಯ ಭಾಗದಲ್ಲಿ ಧರೆಗುರುಳಿದ ಬೃಹತ್‌ ಮರ: ವಾಹನಗಳು ಜಖಂ

ಮಂಗಳೂರಿನ ಹೃದಯ ಭಾಗದಲ್ಲಿ ಧರೆಗುರುಳಿದ ಬೃಹತ್‌ ಮರ: ವಾಹನಗಳು ಜಖಂ

ಮಂಗಳೂರು: ನಗರ ಮಧ್ಯದ ಬಲ್ಮಠದಲ್ಲಿರುವ ಸಹೋದಯ ಸಭಾಂಗದ ಆವರಣದಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ವಾಹನಗಳು ಜಖಂಗೊಂಡ ಘಟನೆ ನಡೆದಿದೆ.

ನಗರದಲ್ಲಿ ಒಂದೆರಡು ದಿನಗಳಿಂದ ಭಾರಿ ರಭಸವಾಗಿ ಕರೆಗಾಳಿ ಬೀಸುತ್ತಿದ್ದು ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಉಪ್ಪಳಿಗೆ ಮರ ಬುಡಸಮೇತ ಉರುಳಿದೆ.

ಮರದ ಒಂದು ಭಾಗ ಶಾಂತಿ ಚರ್ಚ್ ಕಡೆಗೆ ಸಾಗುವ ರಸ್ತೆಯ ಮೇಲೆಯೂ ಬಿದ್ದಿದ್ದು, 

ಆವರಣದ ಒಳಗೆ ನಿಲ್ಲಿಸಿದ್ದ ಕಾರು, ಆಟೊ ಸೇರಿದಂತೆ 7 ವಾಹನಗಳಿಗೆ ಹಾನಿಯಾಗಿದೆ.

ಕಾರೊಂದರಲ್ಲಿದ್ದ ಕುಟುಂಬ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ತಂತಿಯ ಮೇಲೆ ರೆಂಬೆಗಳು ಬಿದ್ದ ಕಾರಣ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅಗ್ನಿಶಾಮಕ ದಳ ಪಾಂಡೇಶ್ವರ ಘಟಕದ ಆರು ಸಿಬ್ಬಂದಿ, ಮರವನ್ನು ತೆರವು ಮಾಡಿದ್ದಾರೆ.

Category
ಕರಾವಳಿ ತರಂಗಿಣಿ