image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಟಕ ಕಲಾವಿದ ನೇಣು ಬಿಗಿದು ಆತ್ಮಹತ್ಯೆ

ನಾಟಕ ಕಲಾವಿದ ನೇಣು ಬಿಗಿದು ಆತ್ಮಹತ್ಯೆ

ವಿಟ್ಲ: ಇಲ್ಲಿನ ಅತಿಕಾರಬೈಲು ವ್ಯಕ್ತಿಯೋರ್ವರು ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. 49 ವರ್ಷದ ವಿಠಲ ಪೂಜಾರಿ ಅವರು ಆತ್ಮಹತ್ಯೆಗೆ ಶರಣಾದವರು. ಯುವಕೇಸರಿ ಅತಿಕಾರಬೈಲು ಸಂಘಟನೆಯ ಅಧ್ಯಕ್ಷರಾಗಿ, ನಾಟಕ ಕಲಾವಿದರಾಗಿ ಮತ್ತು ಬಿಲ್ಲವ ಸಂಘದಲ್ಲಿ ತೊಡಗಿಸಿ ಕೊಂಡಿದ್ದರು. ಚಂದಳಿಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಊರಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Category
ಕರಾವಳಿ ತರಂಗಿಣಿ