image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಜ್ಪೆ ಲೆಜೆಂಡ್ಸ್ ನ ಬಜ್ಪೆ ಪ್ರೀಮಿಯರ್ ಲೀಗ್ -2

ಬಜ್ಪೆ ಲೆಜೆಂಡ್ಸ್ ನ ಬಜ್ಪೆ ಪ್ರೀಮಿಯರ್ ಲೀಗ್ -2

ಮಂಗಳೂರು : ಬಜ್ಪೆ ಲೆಜೆಂಡ್ಸ್ ಸಾಮಾಜಿಕ ಹಾಗೂ ಕ್ರೀಡಾ ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯಚರಿಸುತ್ತಿದೆ. ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಡ್ರಗ್ಸ್ ಎಂಬ ಮಾದಕ ವ್ಯಸನವು ಯುವ ಪೀಳಿಗೆಯ ಜೀವನವನ್ನು ನಾಶ ಮಾಡುತ್ತಿರುವುದನ್ನು ದಿನ ನಿತ್ಯ ನಾವು ಕೇಳುತ್ತಿರುವ ಸುದ್ದಿಗಳಲ್ಲಿ ಒಂದಾಗಿದೆ. ಈ ಸಾಮಾಜಿಕ ಪಿಡುಗುಗಳ ವಿರುದ್ಧವಾಗಿ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನವು ಕಳೆದ 1ವರ್ಷಗಳಿಂದ ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಕಳೆದ ವರ್ಷ ಮಾದಕ ವ್ಯಸನ ಮುಕ್ತ ಬಜ್ಪೆ ಎಂಬ ಅಭಿಯಾನದಲ್ಲಿ 3 ಧರ್ಮಗಳ ಗುರುಗಳು ಹಾಗೂ ಸಾರ್ವಜನಿಕರೊಂದಿಗೆ ಸೇರಿ ಬಿಜೈ ಚರ್ಚ್ ನಿಂದ ತಾರಿಕಂಬ ದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಜಾಗೃತಿ ಮೂಡಿಸಲಾಗಿತ್ತು. ಈ ವರ್ಷದ ಅಭಿಯಾನದಲ್ಲಿ ಬಜ್ಪೆ ಪೆಸ್ಟ್ ಎಂಬ ಹೆಸರಿನಲ್ಲಿ ಮಹಿಳೆಯರ ಸ್ಪರ್ಧಾ ಕೂಟ ನಡೆಸಿ ಅರಿವು ಮೂಡಿಸಲಾಯಿತು. ಇದರ ಮುಂದಿನ ಭಾಗವಾಗಿ ಬಟ್ಟೆ ತಾರಿಕಂಬ, ಜೋಹರ ಎಮ್ ಮೈದಾನದಲ್ಲಿ ಬಜೆ ಪುಡ್ ಪೆಸ್ಟ್ ಹಾಗೂ 40 ವರ್ಷ ವಯಸ್ಸು ಮೇಲ್ಪಟ್ಟ ಪುರುಷರಿಗೆ ಅಂಡರ್ ಅರ್ಮ್ ಹಾಗೂ 17 ವರ್ಷ ವಯಸ್ಸು ಕೆಳಗಿನ ವಿದ್ಯಾರ್ಥಿಗಳಿಗೆ ಒವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ನಡೆಸುವ ಮೂಲಕ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನ ನಡೆಸಲಿದ್ದೇವೆ ಎಂದು ಬಜ್ಪೆ ಲೆಜೆಂಡ್ಸ್ ನ ಅಧ್ಯಕ್ಷ ಮೊಹಮ್ಮದ್ ಶಾಫಿ ಹೇಳಿದರು.  ಅವರು‌ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, 27-12-2024ರಂದು ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ಪ್ರಯುಕ್ತ ಬಜ್ಪೆ ಬಸ್ ನಿಲ್ದಾಣದಿಂದ ತಾರಿಕಂಬ, ಜೋಹರ ಎಮ್ ಮೈದಾನದವರೆಗೆ ನಡೆಯುವ ಬಹೃತ್ ಕಾಲ್ನಡಿಗೆ ಜಾಥಾವನ್ನು ಬಜೆಯ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರುಗಳು ಸೇರಿ ಉದ್ಘಾಟಿಸಲಿದಾರೆ. ತದನಂತರ ತಾರಿಕಂಬ ಜೋಹರ ಎಮ್ ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತ ತಂಡದ ಮಾಜಿ ಕಪ್ತಾನ ಲೆಜೆಂಡ್ ಮೊಹಮ್ಮದ್ ಅಝರುದ್ದೀನ್ ಹಾಗೂ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಹನ್ ಕಾರ್ಪೊರೇಷನ್ ಎಂ.ಡಿ ರೋಹನ್ ಮೋಂತೆರೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯಧ್ಯಕ್ಷ ಎಚ್ ಸಿ ಮಂಜುನಾಥ್, ಸಂಸದ ಬ್ರಿಜೇಶ್ ಚೌಟ ಹಾಗೂ ಹಲವಾರು ಉದ್ಯಮಿ, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. 3 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಬಜ್ಪೆಯ ಕೀರ್ತಿಯನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು. 

 ಪತ್ರಿಕಾಗೋಷ್ಟಿಯಲ್ಲಿ ಅಖ್ತರ್ ರಂಮ್ಲನುದ್ದಿನ್, ಜುಬೆರ್ ಬಿ ಯು, ಮೊಹಮ್ಮದ್ ಹಕೀಮ್, ಎಂ. ಅಲ್ತಾಫ್ ಮೊದಲಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ