ಮಂಗಳೂರು: ನಂದಿನಿ ನದಿಯ ತಟದಲ್ಲಿ ರೋಹನ್ ಎಸ್ಟೇಟ್ ಮುಕ್ಕ ಬಡಾವಣೆ ನಿರ್ಮಾಣವಾಗಿದ್ದು, ಪರಿಸರದ ಶ್ರೀಮಂತಿಕೆಯ ಜತೆಗೆ ಅತ್ಯಂತ ಸುರಕ್ಷಿತ ಹಾಗೂ ಆಕರ್ಷಕವಾಗಿ ಬಡಾವಣೆಯು ಮೂಡಿ ಬಂದಿದೆ. ಪ್ರಕೃತಿಯ ಜತೆಗೆ ಆರಾಮದಾಯಕ ಬದುಕಿಗಾಗಿ ಈ ಬಡಾವಣೆಯನ್ನು ವಿನ್ಯಾಸಗೊಳಿಸಲಾಗಿದೆ. ಇದೊಂದು ಪರಿಪೂರ್ಣವಾದ ರೆಸಾರ್ಟ್ ಮಾದರಿಯ ಬಡಾವಣೆಯಾಗಿ ರೂಪುಗೊಂಡಿದೆ ಎಂದು ರೋಹನ್ ಎಸ್ಟೇಟ್ ಮಾಲಿಕ ರೋಹನ್ ಮೊಂತೇರೋ ಹೇಳಿದರು. ಅವರು ನಗರದ ಖಾಸಗಿ ಹೊಟೆಲಿನಲ್ಲಿ ಮಾಹಿತಿ ನೀಡಿ, ರೋಹನ್ ಎಸ್ಟೇಟ್ ಮುಕ್ಕ. ಇದು ರೆಸಾರ್ಟ್ ಅಲ್ಲ. ರೆಸಾರ್ಟ್ ಶೈಲಿಯ ವಸತಿ ಬಡಾವಣೆ. ಶ್ರೀಮಂತಿಕೆ, ಐಶಾರಾಮಿ ಮಾದರಿ ಎಂಬಂತೆ ಪ್ರಕೃತಿಯ ಮಡಿಲಿನಲ್ಲಿ ತಲೆ ಎತ್ತಿ ನಿಂತಿರುವ ವಸತಿ ಬಡಾವಣೆಯಾಗಿದೆ. ಇಲ್ಲಿ ವಾಸಿಸುವವರಿಗೆ ಆಭಿಜಾತ ರೆಸಾರ್ಟ್ ಶೈಲಿಯ ಜೀವನದ ಅನುಭವ ಸಿಗಲಿದೆ.ನದಿ, ಸಮುದ್ರ ಹಾಗೂ ರಾಷ್ಟ್ರೀಯ ಹೆದ್ದಾರಿಯ ನಡುವೆ ವಸತಿ ಬಡಾವಣೆ ನಿರ್ಮಾಣವಾಗುತ್ತಿದೆ. ನೈಸರ್ಗಿಕವಾಗಿರುವ ಶ್ರೀಮಂತಿಕೆಯನ್ನೇ ಬಂಡವಾಳವಾಗಿಸಿಕೊಂಡು ನಿರ್ಮಾಣ ಮಾಡಲಾಗಿದ್ದು, ಸಕಲ ಐಶಾರಾಮಿ ಸೌಲಭ್ಯದೊಂದಿಗೆ ರೆಸಾರ್ಟ್ ಮಾದರಿಯಲ್ಲಿ ಬಡಾವಣೆ ನಿರ್ಮಾಣವಾಗುತ್ತಿದೆ. ನದಿ ಕಿನಾರೆಯಲ್ಲಿ ಸೂಕ್ತ ರೀತಿಯ ತಡೆ ಗೋಡೆಯನ್ನು ಪ್ರವಾಸೋದ್ಯಮದ ನೆಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ. ಈ ರೀತಿಯ ಶ್ರೀಮಂತಿಕೆಯ ಲೇಔಟ್ ಇಂದಿನವರೆಗೆ ಕರಾವಳಿ ಭಾಗದಲ್ಲಿ ನಿರ್ಮಾಣವಾಗಲಿಲ್ಲ ಎಂಬಂತೆ ತಲೆ ಎತ್ತಿದೆ. ಈ ರೀತಿಯ ನದಿ ಕಿನಾರೆಯು ಸಿಗುವುದೇ ಅಪರೂಪ. ಈ ರೀತಿಯ ಅಪರೂಪದ ಸ್ಥಳ, ಪ್ರಮುಖ ಸ್ಥಳದಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡುವುದರಿಂದಾಗಿಯೇ ರೋಹನ್ ಕಾರ್ಪೋರೇಷನ್ ಪ್ರತಿಯೊಂದು ವಸತಿ ಸಮುಚ್ಚಯ ಹಾಗೂ ಬಡಾವಣೆಗೆ ಅತ್ಯಂತ ಹೆಚ್ಚಿನ ಬೇಡಿಕೆ ಇರುತ್ತದೆ. ಇತರ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಹೋಲಿಸಿದರೆ ಶ್ರೇಷ್ಠತೆಯಿಂದ ಭಿನ್ನವಾಗಿ ಕಾಣಸಿಗುತ್ತದೆ ಎಂದರು.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿರುವ ಮಂಗಳೂರಿನ ರೋಹನ್ ಕಾರ್ಪೋರೇಷನ್, ನಗರದ ಪ್ರತಿಷ್ಠಿತ ಪ್ರದೇಶದಲ್ಲಿ, ಅತಿ ಹೆಚ್ಚು ವಸತಿ ಸಮುಚ್ಚಯ ಹಾಗೂ ವಸತಿ ಬಡಾವಣೆಯನ್ನು ಆಕರ್ಷಕವಾಗಿ ನಿರ್ಮಾಣ ಮಾಡಿದ ಸಂಸ್ಥೆ ಎಂದು ಖ್ಯಾತಿಗೆ ಪಾತ್ರವಾಗಿದೆ. ಮಂಗಳೂರು ನಗರದ ಯಾವುದೇ ಪ್ರಮುಖ ಬೀದಿಗಳಲ್ಲಿ ರೋಹನ್ ಕಾರ್ಪೋರೇಷನ್ ಹೆಸರು ರಾರಾಜಿಸುತ್ತಿರಬೇಕು ಎಂಬ ಕನಸಿನಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲೇ ಸ್ಥಳಕ್ಕೆ ಪ್ರಮುಖ ಒತ್ತು ನೀಡಿದ್ದೇವೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ವಿಚಾರವನ್ನು ತಂದು ಆ ಮೂಲಕ ಕ್ರಾಂತಿ ಮಾಡಿದ ಸಂಸ್ಥೆ ಎಂದರೆ ಕರಾವಳಿಯ ರೋಹನ್ ಕಾರ್ಪೋರೇಷನ್. ಕೋವಿಡ್ 19ರಿಂದ ಇಡೀ ಮಾರುಕಟ್ಟೆ ಗಣನೀಯವಾಗಿ ಕುಸಿದ ಸಂದರ್ಭದಲ್ಲಿ ಕಪಿತಾನಿಯೋ ಬಳಿ ರೋಹನ್ ಸ್ಕ್ವೇರ್ ಎಂಬ ಬೃಹತ್ ಯೋಜನೆ ಕೈಗೆತ್ತಿಕೊಂಡು ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡಿ ತಿಂಗಳಿನೊಳಗೆ ಶೇ. 90ರಷ್ಟು ಮನೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಮಾರಾಟ ಮಾಡಿ ಕ್ರಾಂತಿಯನ್ನೇ ಮಾಡಿದ್ದೇವೆ. ಇದು ಹೂಡಿಕೆಯ ಉದ್ದೇಶದಿಂದ ಖರೀದಿ ಮಾಡಿದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಿದೆ. ಬಳಿಕ ಪಕ್ಷಿಕೆರೆಯಲ್ಲಿ ಬೃಹತ್ ವಸತಿ ಬಡಾವಣೆ ನಿರ್ಮಾಣ ಮಾಡಿ, ಎಲ್ಲವನ್ನೂ ದಾಖಲೆ ಅವಧಿಯಲ್ಲಿ ಮಾರಾಟ ಮಾಡಿದ ಹೆಗ್ಗಳಿಕೆ ರೋಹನ್ ಕಾರ್ಪೋರೇಷನ್ ಗೆ ಸಲ್ಲುತ್ತದೆ. ಈ ನಡುವೆ ಬಿಜೈ ಬಳಿ ರೋಹನ್ ಸಿಟಿ ಎಂಬ ಬೃಹತ್ ಯೋಜನೆ ಕೈಗೆತ್ತಿಕೊಂಡು ವಾರ್ಷಿಕವಾಗಿ ಶೇ. 7.5ರಷ್ಟು ಖಾತರಿ ರಿಟರ್ನ್ ಅನ್ನು ಗ್ರಾಹಕರಿಗೆ ನೀಡುತ್ತಿರುವ ಹೆಗ್ಗಳಿಕೆಯಾಗಿದೆ. ಮಂಗಳೂರು ನಗರದ ಪ್ರಮುಖ ಪ್ರದೇಶದಲ್ಲಿ ಆಕರ್ಷಕ ವಸತಿ ಸಮುಚ್ಚಯ ನಿರ್ಮಾಣ ಮಾಡಿ, ನಗರಕ್ಕೆ ಹೊಸ ರೂಪವನ್ನು ಸಂಸ್ಥೆಯು ನೀಡುತ್ತಿದೆ ಎಂದರು.
ರೋಹನ್ ಎಸ್ಟೇಟ್ ಮುಕ್ಕ ದ ವಿಶೇಷತೆಗಳು ನದಿ ತೀರದಲ್ಲಿನ ವಸತಿ ಬಡಾವಣೆ, ಗೇಟೆಡ್ ಕಮ್ಯೂನಿಟಿ, ಅಂತಾರಾಷ್ಟ್ರೀಯ ಗುಣಮಟ್ಟದ ಕ್ಲಬ್ ಹೌಸ್, ಮರೀನಾ-ಮನರಂಜನಾ ಬೋಟಿಂಗ್ ಚಟುವಟಿಕೆಗಳ ತಾಣ (ಬೋಟಿಂಗ್ ಮತ್ತು ಕಯಾಕಿಂಗ್)ಇನ್ಫಿನಿಟಿ ಈಜುಕೊಳ, ಮಕ್ಕಳಿಗೆ ಪ್ರತ್ಯೇಕ ಈಜುಕೊಳ, ಬಡಾವಣೆಯೊಳಗೆ ಫ್ಯಾಮಿಲಿ ರೆಸ್ಟೋರೆಂಟ್, ಸೈಕ್ಲಿಂಗ್ ಟ್ರ್ಯಾಕ್, ವಾಕಿಂಗ್ ಟ್ರ್ಯಾಕ್, ಔಟ್ಡೋರ್ ಜಿಮ್, ಯೋಗ ಲಾನ್, ಮೆಡಿಟೇಷನ್ ಸೆಂಟರ್
ಸ್ಪಾ, ಲೈಫ್ ಸೈಜ್ ಚೆಸ್, ಮಕ್ಕಳಿಗೆ ಆಟದ ಮೈದಾನ, ಸ್ಕೇಟಿಂಗ್ ರಿಂಕ್, ಬ್ಯಾಡ್ಮಿಂಟನ್ ಕೋರ್ಟ್, ಬಿಲಿಯಡ್ರ್ಸ್, ಸಭಾಂಗಣ, ಲಾಡ್ಜಿಂಗ್, ಆ್ಯಂಪಿಥಿಯೇಟರ್, ಸುರಕ್ಷತೆ ದೃಷ್ಟಿಯಿಂದ ಬಡಾವಣೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಬೃಹತ್ ಕಾಂಪೌಂಡ್ ಮತ್ತು ಸುರಕ್ಷತಾ ಗೇಟ್, 40 ಅಡಿ ಕಾಂಕ್ರೀಟ್ ಮುಖ್ಯ ರಸ್ತೆ, 30 ಅಡಿ ಕಾಂಕ್ರೀಟ್ ಒಳ ರಸ್ತೆ, ಆಕರ್ಷಕ ಸೋಲಾರ್ ಬೀದಿ ದೀಪ ಅಳವಡಿಕೆ, ಪ್ರಧಾನ ದ್ವಾರದಲ್ಲಿ ದಿನದ 24 ಗಂಟೆಯೂ ಸೆಕ್ಯೂರಿಟಿ ವ್ಯವಸ್ಥೆ, ಆಕರ್ಷಕ ಲ್ಯಾಂಡ್ ಸ್ಕೇಪಿಂಗ್, ವಾಸ್ತು ಪ್ರಕಾರ ಪ್ರತಿ ನಿವೇಶನಕ್ಕೂ ಸಂಪರ್ಕ, ಮಳೆ ನೀರು ಕೊಯ್ಲು, ನೀರು ಶುದ್ಧೀಕರಣ ಘಟಕ, ಭೂಗತ ಒಳಚರಂಡಿ ಪೈಪ್ಲೈನ್, ಹೂಡಿಕೆ ಮತ್ತು ಮನೆ ನಿರ್ಮಾಣ ಎರಡಕ್ಕೂ ಯೋಗ್ಯ, ಬ್ಯಾಂಕ್ ಸಾಲ ಸೌಲಭ್ಯ, ಸೂಪರ್ ಮಾರ್ಕೆಟ್ ಹಸಿರೀಕರಣಕ್ಕೆ ವಿಶೇಷ ಒತ್ತು.
ರೋಹನ್ ಎಸ್ಟೇಟ್ ಮುಕ್ಕ ಕೇವಲ ಅತ್ಯುನ್ನತ ಬಡಾವಣೆ ಮಾತ್ರ ಅಲ್ಲ, ಅತ್ಯುತ್ತಮ ಹೂಡಿಕೆಯ ಅವಕಾಶ ಕೂಡಾ ಆಗಿದೆ ಎಂದರು.