ಮಂಗಳೂರು : ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಂ, ಶೃಂಗೇರಿ ಇದರ ಶಾಖಾ ಮಠವಾಗಿರುವ ಕೋಟೆಕಾರು ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಕ್ರೋಧಿನಾಮ ಸಂವತ್ಸರದ ಮಾರ್ಗಶೀರ್ಷ ಮಾಸ ಕೃಷ್ಣಪಕ್ಷ ಏಕಾದಶಿಯಂದು ಅಂದರೆ ದಿನಾಂಕ 26-12-2024ರ ಗುರುವಾರ ಮಧ್ಯಾಹ್ನ 12ಗಂಟೆಗೆ ಶ್ರೀ ಗಣಪತಿ, ಶ್ರೀ ಶಾರದಾ ಹಾಗೂ ಶ್ರೀ ಶಂಕರಾಚಾರ್ಯರ ದೇವಸ್ಥಾನಗಳು, ಗುರುನಿವಾಸ, ಸಭಾಮಂಟಪದ "ಶಿಲಾನ್ಯಾಸ" ಕಾರ್ಯಕ್ರಮ ನಡೆಯಲಿದೆ. ಶ್ರೀಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತಹಸ್ತದಿಂದ ಈ ಕಾರ್ಯಕ್ರಮ ನೆರವೇರಲಿದೆ ಎಂದು ಸತ್ಯಶಂಕರ್ ಬೊಳ್ಳವ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,
ಇದರಂತೆ ಅಂದು ಪೂರ್ವಾಹ್ನ 11 ಗಂಟೆಗೆ ಕೋಟೆಕಾರು ಶ್ರೀ ಶೃಂಗೇರಿ ಶಂಕರ ಮಠಕ್ಕೆ ಪರಮಪೂಜ್ಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ಆಗಮಿಸಲಿದ್ದು, ಈ ಸಂದರ್ಭ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಪರಮಪೂಜ್ಯ ಶ್ರೀ ಜಗದ್ಗುರುಗಳ ಅಮೃತಹಸ್ತದಿಂದ ಶ್ರೀಗಣಪತಿ, ಶ್ರೀಶಾರದಾ ಹಾಗೂ ಶ್ರೀ ಶಂಕರಾಚಾರ್ಯರ ದೇವಸ್ಥಾನಗಳು, ಗುರುನಿವಾಸ, ಸಭಾಮಂಟಪ ಹಾಗೂ ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸ ನೆರವೇರಲಿದೆ.
ಮಧ್ಯಾಹ್ನ ಘಂಟೆ 1ಕ್ಕೆ ಧೂಳೀ ಪೂಜೆ, ಪಾದಪೂಜೆ, ಸಮಷ್ಟಿ 2 ಭಿಕ್ಷೆ, ಸಂಘಸಂಸ್ಥೆಗಳಿಂದ ಫಲಪುಷ್ಪ ಸಮರ್ಪಣೆ, ಶ್ರೀಶ್ರೀ ಜಗದ್ಗುರುಗಳವರಿಂದ ಆಶೀರ್ವಚನ, ಶ್ರೀಶ್ರೀ ಜಗದ್ಗುರುಗಳಿಂದ ಪ್ರಸಾದ ವಿತರಣೆ ನಡೆಯಲಿದೆ. ಮದ್ಯಾಹ್ನ 2ರಿಂದ ಪ್ರಸಾದ ಭೋಜನ ನಡೆಯಲಿದೆ.
ಈ ದೇವಸ್ಥಾನಗಳ ಪುನರ್ನಿಮಾಣ ಕಾರ್ಯ ಇಲ್ಲಿನ ಭಕ್ತರ ಬಹುದಿನಗಳ ಕನಸಾಗಿದ್ದು, ಇದೀಗ ಪರಮಪೂಜ್ಯ ಜಗದ್ಗುರುಗಳ ಅನುಗ್ರಹದಿಂದ ನೆರವೇರುತ್ತಿರುವುದು ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈಗಾಗಲೇ ಇದಕ್ಕೆ ಅಗತ್ಯವಾದ ಯೋಜನೆಗಳು ಸಿದ್ಧಗೊಂಡಿದ್ದು, ಶಿಲಾನ್ಯಾಸದ ಬಳಿಕ ನಿರ್ಮಾಣ ಕಾರ್ಯಕ್ಕೆ ವೇಗ ಲಭಿಸಲಿದೆ.
ಈ ಬಗ್ಗೆ ಸಿಇಒ ಮತ್ತು ಆಡಳಿತಾಧಿಕಾರಿಗಳಾದ ಗುರುಸೇವಾ ನಿರತ ಶ್ರೀ ಪಿ.ವಿ.ಮುರಳಿ ಅವರ ಮಾರ್ಗದರ್ಶನ ಹಾಗೂ ಧರ್ಮಾಧಿಕಾರಿಗಳಾದ ಸತ್ಯಶಂಕರ ಬೊಳ್ಳಾವ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಶಿಲಾನ್ಯಾಸ ಸಮಿತಿಯೊಂದನ್ನು ರಚಿಸಲಾಗಿದ್ದು ಸಮಿತಿಯ ಅಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯಾಧ್ಯಕ್ಷರಾಗಿ ಮಧುಸೂದನ ಆಯರ್, ಪ್ರಧಾನ ಸಂಚಾಲಕರಾಗಿ ವಿದ್ಯಾಶಂಕರ ಬೊಳ್ಳಾವ, ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ ಕೊಪ್ಪಲು, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಕೆಮ್ಮಣ್ಣು ಹಾಗೂ ಸಂಚಾಲಕರಾಗಿ ಎಂ.ಪ್ರಸನ್ನ ಮಮಾರ್, ಪುತ್ತೂರು, ಶಿವಪ್ರಸಾದ್ ಆಚಾರ್ಯ ವಿದ್ಯಾನಗರ ಕೊಂಡಾಣ, ಶರತ್ ಕುಮಾರ್ ಬೆಂಗಳೂರು, ಅನಂತಕೃಷ್ಣ ಯಾದವ್, ಕೀರ್ತನ್ ಕುಮಾರ್ ಲಾಡ್, ಡಾ.ಮೇಘಶ್ಯಾಮ ರಾವ್, ಬಿ. ಸಂತೋಷ್ ರಾವ್, . ಶಿವರಾವ್ ಬೆಂಗಳೂರು, ಕೇಶವ ಆಚಾರ್ಯ ಮಂಗಳೂರು ಮುಂತಾದವರು ಹಾಗೂ ಕಾರ್ಯದರ್ಶಿಯಾಗಿ ಶ್ರೀವದಾಸ್ ರೈ ಮೇನಾಲ, ಕೋಶಾಧಿಕಾರಿಯಾಗಿ ಮೋಹನರಾವ್ ಬೋಂಸ್ಥೆ, ಶಿವಾಜಿ ಕುಮಾರ್ ಅಧಿಕಾರಿ ಮತ್ತು ತರ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು,ವಿದ್ಯಾಶಂಕರ ಬೊಳ್ಳವ,ಮಧುಸೂದನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.