image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಗ್ನಿ ದುರಂತ ಸಂಭವಿಸಿ ಐದು ಅಂಗಡಿ ಭಸ್ಮ...!

ಅಗ್ನಿ ದುರಂತ ಸಂಭವಿಸಿ ಐದು ಅಂಗಡಿ ಭಸ್ಮ...!

ಪೆರ್ಲ: ಪೆರ್ಲ ಪೇಟೆಯ ಕಟ್ಟಡವೊಂದಕ್ಕೆ ಶನಿವಾರ ತಡರಾತ್ರಿ ಬೆಂಕಿ ಹತ್ತಿಕೊಂಡಿದ್ದು, ಪರಿಸರದ ಐದು ಅಂಗಡಿಗಳು ಸಂಪೂರ್ಣವಾಗಿ ಹೊತ್ತಿ ಉರಿದಿರುವ ಘಟನೆ ವರದಿಯಾಗಿದೆ.

ಶನಿವಾರ ಮಧ್ಯರಾತ್ರಿ 12 ಗಂಟೆಯ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಶೇಣಿ ನಿವಾಸಿ ನಾರಾಯಣ ಪೂಜಾರಿ ಅವರ ಪೂಜಾ ಫ್ಯಾನ್ಸಿ, ಪೆರ್ಲದ ಮೋನು ಎಂಬುವರ ತರಕಾರಿ ಅಂಗಡಿ, ಜಯದೇವ ಬಾಳಿಗ ಅವರ ಗೌತಮ್ ಕೋಲ್ಡ್ ಹೌಸ್, ಮೊಹಮ್ಮದ್ ಎಂಬುವರ ಸಾದತ್ ಜನರಲ್ ಸ್ಟೋರ್, ಅಮೆಕ್ಕಳ ಪ್ರವೀಣ್ ಪೈ ಅವರ ಪ್ರವೀಣ್ ಆಟೋಮೊಬೈಲ್‌, ಸಂಜೀವ ಎಂಬುವರ ಕಬ್ಬಿನ ಹಾಲಿನ ಅಂಗಡಿ ಬೆಂಕಿಗೆ ಅಹುತಿಯಾಗಿದೆ ಎಂದು ತಿಳಿದುಬಂದಿದೆ.

ಕಾಸರಗೋಡು ಹಾಗೂ ಉಪ್ಪಳದಿಂದ ಬಂದ ಅಗ್ನಿಶಾಮಕ ದಳ, ಬದಿಯಡ್ಕ ಪೊಲೀಸ್ ಅಧಿಕಾರಿಗಳು ಮತ್ತು ಊರವರ ಸಹಕಾರದೊಂದಿಗೆ ಸುಮಾರು 4 ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸಲಾಯಿತು. ಶಾರ್ಟ್ ಸರ್ಕಿಟ್‌ನಿಂದ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

Category
ಕರಾವಳಿ ತರಂಗಿಣಿ