ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಳ್ಯ, ಪುತ್ತೂರು, ವಿಟ್ಲ, ಈಶ್ವರಮಂಗಳ ಮತ್ತು ಮಂಗಳೂರು ತಾಲೂಕುಗಳಲ್ಲಿ ವಾಸಿಸುತ್ತಿರುವ ವಾಣಿಯ ಗಾಣಿಗ ಸಮಾಜದ 5 ತಾಲೂಕು ಸಂಘಗಳ ಪ್ರಮುಖರನ್ನು ಸೇರಿಸಿ ಸಂಘಟನಾತ್ಮಕವಾಗಿ ಒಂದು ಬಲಿಷ್ಟ ಜಿಲ್ಲಾ ಸಂಘವನ್ನು ಸ್ಥಾಪಿಸಲು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಪ್ರಧಾನ ಕಚೇರಿಯು ಮಂಗಳೂರಿನಲ್ಲಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ (ಪಾಟಾಳಿ ಗಾಣಿಗ, ವಾಣಿಯ ಗಾಣಿಗ) ಸಂಘಗಳ ಪದಾಧಿಕಾರಿಗಳು ಒಟ್ಟು ಸೇರಿ "ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ (ರಿ) ಮಂಗಳೂರು" ಎಂಬ ನಾಮಾಂಕಿತದಲ್ಲಿ ಸಂಘ ಸಂಸ್ಥೆಗಳ ನೋಂದಾವಣಿ ಕಚೇರಿಯಲ್ಲಿ ನೋಂದಾಯಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ರಾಮ ಮುಗ್ರೋಡಿ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ವೈವಿದ್ಯತ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಈ ದೇಶದ ಸಂಸ್ಕೃತಿಯಲ್ಲಿ ಹಲವಾರು ಜಾತಿ, ಧರ್ಮ, ಪಂಗಡಗಳಿವೆ. ತಮ್ಮ ತಮ್ಮ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ತಮ್ಮದೇ ಸಮುದಾಯದ ಹೆಸರಿನ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಎಲ್ಲಾ ಕಡೆಯೂ ಕಾಣುತ್ತಿದ್ದೇವೆ. ಸಮುದಾಯದಲ್ಲಿರುವ ಕಡು ಬಡವರಿಗೆ ಸಹಾಯ ಮಾಡುವುದು, ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಹಕರಿಸುವುದು, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು. ಸಮಾಜದಲ್ಲಿ ವಿಶೇಷ ಸಾಧನೆಗೈದ ಮಹನೀಯರನ್ನು ಗುರುತಿಸಿ ಗೌರವಿಸುವುದು, ವಿದ್ಯಾನಿಧಿ ಸ್ಥಾಪಿಸುವುದು, ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದು, ಸಹಕಾರಿ ಸಂಘಗಳನ್ನು ಸ್ಥಾಪಿಸಿ ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸುವುದು ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ.
ಸಾವಿರಾರು ಯುವ ಜನಾಂಗ ರಾಜಕೀಯ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಯಾವುದೇ ರಾಜಕೀಯ ಪಕ್ಷವು ದೊಡ್ಡ ಮಟ್ಟಿನ ಜವಾಬ್ದಾರಿಯನ್ನು ನೀಡಿರುವುದಿಲ್ಲ. ನಮ್ಮ ಸಮಾಜದ ಯುವಕರನ್ನು ದೇಶ ಸೇವೆ ಮಾಡಲು ಪ್ರೇರೇಪಿಸಲಾಗುವುದು. ಒಂದು ಮಾಹಿತಿಯಂತೆ ನಮ್ಮ ದೇಶದಲ್ಲಿ ಸಾಧಾರಣ 14 ಕೋಟಿಯಷ್ಟು ಗಾಣಿಗರಿದ್ದಾರೆಂದು ಅಂದಾಜಿಸಲಾಗಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಗಾಣಿಗರು ಗುರುತಿಸಿಕೊಂಡರೂ, ವೃತ್ತಿಯಲ್ಲಿ ಗಾಣದಿಂದ ಎಣ್ಣೆ ತೆಗೆಯುವುದು ಮೂಲ ವೃತ್ತಿಯಾಗಿತ್ತು. ಮಂಗಳೂರಿನಲ್ಲಿ ವಾಸವಿರುವ ಸಪಲಿಗ ಯಾನೆ ಗಾಣಿಗ ಸಮಾಜ ಮತ್ತು ವಾಣಿಯ ಗಾಣಿಗ ಸಮಾಜದಲ್ಲಿ ಆಚಾರ ವಿಚಾರಗಳಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸಗಳಿವೆಯಾದರೂ ನಾವೆಲ್ಲ ಸಹೋದರರಂತೆ ಜೀವಿಸುತ್ತಿದ್ದೇವೆ. ನಮ್ಮ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ನಮ್ಮ ಸಮುದಾಯದವರು ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು ಇದರ ಉದ್ಘಾಟನಾ ಕಾರ್ಯಕ್ರಮವು ತಾ. 29-12-2024ನೇ ರವಿವಾರ ಮಂಗಳೂರಿನ ಕುದ್ಮಲ್ ರಂಗರಾವ್ (ಪುರಭವನ) ಸಭಾಭವನದಲ್ಲಿ ನಡೆಯಲಿದೆ. ಉದ್ಘಾಟಕರಾಗಿ ಶ್ರೀ ಕ್ಯಾಪ್ಟನ್ ಬ್ರಿಜೇಷ್ ಚೌಟ, ಮಾನ್ಯ ಸಂಸದರು ಮಂಗಳೂರು, ಅಧ್ಯಕ್ಷತೆಯನ್ನು ಸಂಘದ ನಿಯೋಜಿತ ಅಧ್ಯಕ್ಷರಾದ ಕೆ.ರಾಮ ಮುಗೋಡಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮನೋಜ್ ಕುಮಾರ್. ಮಹಾ ಪೌರರು ಮಂಗಳೂರು ಮಹಾನಗರಪಾಲಿಕೆ, ಶ್ರೀ.ಡಿ.ವೇದವ್ಯಾಸ ಕಾಮತ್, ಮಾನ್ಯ ಶಾಸಕರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ. ಶ್ರೀ.ಡಾ| ವೈ. ಭರತ್ ಶೆಟ್ಟಿ, ಮಾನ್ಯ ಶಾಸಕರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ. ಶ್ರೀ ಅಶೋಕ್ ಕುಮಾರ್ ರೈ, ಮಾನ್ಯ ಶಾಸಕರು ಮತ್ತೂರು ವಿಧಾನಸಭಾ ಕ್ಷೇತ್ರ, ಶ್ರೀ ರಾಜಶೇಖರ್ ಅಧ್ಯಕ್ಷರು ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರು, ಶ್ರೀ ಸುರೇಶ್ ಬಟ್ಟಂಪಾರೆ, ಖ್ಯಾತ ಉದ್ಯಮಿತಗಳು, ಶ್ರೀ ಕೃಷ್ಣ ಹಾರ್ಡ್‌ವೇರ್ ಮತ್ತು ಸಮೂಹ ಸಂಸ್ಥೆಗಳು ಕಾಸರಗೋಡು, ಶ್ರೀ ಪ್ರಕಾಶ್ ಕೆ. ಪೋಲೀಸ್ ನಿರೀಕ್ಷಕರು ಬೆಂಗಳೂರು, ಶ್ರೀ ಪ್ರೀತಂ ಕೆ. ಎಸ್. ಬೆಂಗಳೂರು, ನಿರ್ದೇಶಕರು ಸಾಫ್ಟ್‌ವೇರ್ ಸ್ವಿಗ್ಗಿ, ಬೆಂಗಳೂರು, ಶ್ರೀಮತಿ ಶಂಕರಿ ಪಟ್ಟಿ, ನಿವೃತ್ತಿ ಮುಖ್ಯೋಪಾಧ್ಯಾಯಿನಿ ಪಟ್ಟೆ, ಶ್ರೀಮತಿ ಸುಕನ್ಯ ದೇಲಂತಬೆಟ್ಟು ನಿವೃತ್ತ ಉಪನ್ಯಾಸಕಿ ದೇಲಂತಬೆಟ್ಟು, ಶ್ರೀ.ಎಸ್.ಶಂಕರ ಪಾಟಾಳಿ ಮುಕ್ರಮ್ ಪಾಡಿ, ಗೌರವಾಧ್ಯಕ್ಷರು ದ.ಕ.ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಖ್ಯಾತ ಕಿರುತೆರೆ ನಟ ಶ್ರೀ ಕೌಶಿಕ್ ರಾಮ್ ಪಾಲ್ಗೊಳ್ಳಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಂಕರ್ ಪಾಟಾಲಿ, ಕೃಷ್ಣ ಡಿ, ದಾಮೋದರ ಪಾಟಾಲಿ ಮತ್ತು ರವಿಚಂದ್ರ ಉಪಸ್ಥಿತರಿದ್ದರು.