image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿಸೆಂಬರ್ 22 ಕ್ಕೆ KROSS ಮಂಗಳೂರು ಸೈಕ್ಲಾಥಾನ್

ಡಿಸೆಂಬರ್ 22 ಕ್ಕೆ KROSS ಮಂಗಳೂರು ಸೈಕ್ಲಾಥಾನ್

ಮಂಗಳೂರು: ವಿ ಆರ್ ಸೈಕ್ಲಿಂಗ್  ಮಂಗಳೂರಿನ ಒಂದು ವೃತ್ತಿಪರ ಕ್ರೀಡಾ ಕ್ಲಬ್ ಆಗಿದ್ದು, ಸುತ್ತಮುತ್ತಲಿನ ಪರಿಸರದ ಜನರಲ್ಲಿ ಆರೋಗ್ಯಕರ ಜೀವನದ ಶೈಲಿಯನ್ನು ಅಳವಡಿಸಿಕೊಳ್ಳುವಲ್ಲಿ ಪ್ರೋತ್ಸಾಹಿಸುತ್ತದೆ. ವರ್ಕೌಟ್, ಎಂಡ್ಯುರೆನ್ಸ್ ಮತ್ತು ರೇಸಿಂಗ್ ನಂತಹ ಪ್ರಮುಖ ಮೌಲ್ಯಗಳನ್ನು ಹೊಂದಿರುವ ಈ ಕ್ಲಬ್ 'ಎಲ್ಲರಿಗೂ ಆರೋಗ್ಯ ಮತ್ತು ಎಲ್ಲರೂ ಫಿಟ್' ಎಂಬ ಗುರಿಯನ್ನು ಹೊಂದಿದ್ದು, ಉತ್ಸಾಹೀ ಜನರಲ್ಲಿ ನಿರಂತರವಾಗಿ ಒಳ್ಳೆಯ ಆರೋಗ್ಯ ಮತ್ತು ಅದರಿಂದ ಉತ್ತಮ ಜೀವನ ಎಂಬ ಆರೋಗ್ಯದ ಕನಸನ್ನು ನನಸು ಮಾಡಲು ಸಹಕರಿಸುತ್ತದೆ.

WERC ತಂಡವು, ಮಂಗಳೂರು ಸ್ಮಾರ್ಟ್ ಸಿಟಿ ಪರವಾಗಿ Cycle4Change ಚಾಲೆಂಜ್, & ಸೈಕ್ಸಿಂಗ್-Onl ಯೋಜನೆ ಸೇರಿದಂತೆ ಫಿಟ್ ಇಂಡಿಯಾ ಅಭಿಯಾನಗಳು, ಪೊಲೀಸ್ ಪಡೆಯ ಮಾದಕ ದ್ರವ್ಯ ವಿರೋಧಿ ಅಭಿಯಾನ, ಸಂಚಾರ ಸುರಕ್ಷತಾ ಜಾಗೃತಿ, ಬೀಚ್ ಕ್ಲೀನ್-ಅಪ್. ವನ್ಯಜೀವಿಗಳನ್ನು ಉಳಿಸಿ. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ಅಭಿಯಾನ, ಅರಣ್ಯಗಳನ್ನು ಉಳಿಸಿ ಇತ್ಯಾದಿ ಅನೇಕ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. 

ಈಗ "KROSS ಮಂಗಳೂರು ಸೈಕಾಥಾನ್" ಎಂಬ ಸೈಕ್ಸಿಂಗ್ ಜಾಥಾವನ್ನು ಆಯೋಜಿಸಲು ಸಂತೋಷಪಡುತ್ತೇವೆ ಎಂದು ವಿ ಆರ್ ಸೈಕ್ಲಿಂಗ್ ನ ಅಧ್ಯಕ್ಷರಾದ ಸರ್ವೇಶ್ ಸಾಮಗ ತಿಳಿಸಿದರು.‌ ಶಾಲಾ ಮಕ್ಕಳು ಮತ್ತು ಅವರ ಪೋಷಕರಲ್ಲಿ ಸೈಕ್ಲಿಂಗ್ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು, ಈ ಸೈಕೋಥಾನ್ 2024 ರ ಭಾನುವಾರ, ಡಿಸೆಂಬರ್ 22, 2024 ರಂದು, ಒಂದು ವಿಶಿಷ್ಟ ರೀತಿಯಲ್ಲಿ ಆಯೋಜಿಸಲ್ಪಡಲಾಗುತ್ತಿದೆ.

ನೋಂದಣಿ ಶುಲ್ಕ Rs.20 ನಿಗದಿ ಪಡಿಸಲಾಗಿದ್ದು, ಬೆಳಿಗ್ಗೆ 7.15ಕ್ಕೆ ಮಂಗಳಾ ಕ್ರೀಡಾಂಗಣದಿಂದ ರ್ಯಾಲಿ ಪ್ರಾರಂಭವಾಗಲಿದ್ದು, ಮಂಗಳಾ ಕ್ರೀಡಾಂಗಣ - ಶ್ರೀ ನಾರಾಯಣ ಗುರು ವೃತ್ತ - ಲಾಲ್ ಬಾಗ್ - ಜೈಲು ರಸ್ತೆ - ಕರಂಗಲ್ ಪಾಡಿ ಮಾರ್ಕೆಟ್ - ಪಿವಿಎಸ್-ಬಲ್ಲಾಳ್ ಭಾಗ್ ಫೈಟರ್ ಶೆಟ್ಟಿ ವೃತ್ತ - ಮಣ್ಣಗುಡ್ಡ ಗುರ್ಜಿ - ಬರ್ಕೆ ಪೊಲೀಸ್ ಠಾಣೆ - ಮಹಾತ್ಮ ಗಾಂಧಿ ಉದ್ಯಾನ - ಉರ್ವ ಮಾರ್ಕೆಟ್ - ಅಮೃತ ವಿದ್ಯಾಲಯ (ಮಾರ್ಗ ನಕ್ಷೆ ಲಗತ್ತಿಸಲಾಗಿದೆ) ರ್ಯಾಲಿಯು  ಅಮೃತ ವಿದ್ಯಾಲಯ ಶಾಲಾ ಮೈದಾನ, ಬೋಳೂರು ಇಲ್ಲಿ ಮುಕ್ತಾಯಗೊಳ್ಳುತ್ತದೆ.

 ಬೆಳಿಗ್ಗೆ 8.30ಸವಾರಿ ಮುಗಿದ ನಂತರದ ಕಶರ್ಪ್ ಫಿಟ್‌ನೆಸ್‌ನಿಂದ, ತಾಲೀಮು ಆಯೋಜಿಸಲಾಗಿದ್ದು ತದನಂತರ ಎಲ್ಲರಿಗೂ ಲಘು ಉಪಹಾರ ವಿತರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ನೋಂದಾಯಿತ ಸಾರ್ವಜನಿಕರಿಗೆ, ಸೈಕಲ್‌ಗಳನ್ನು ಗೆಲ್ಲುವ ಅವಕಾಶಕ್ಕಾಗಿ ಲಕ್ಕಿ ಡ್ರಾ ಕೂಡ ಇರುತ್ತದೆ. ರಾಜ್ಯ ಮಟ್ಟದಲ್ಲಿ, ಸೈಕ್ಲಿಂಗ್ ನಲ್ಲಿ ವಿಶೇಷ ಸಾಧನೆ ಮಾಡಿದ ಆಟಗಾರರ ಸನ್ಮಾನ ಕಾರ್ಯಕ್ರಮ ಕೂಡ ಇರಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಮ್ ಪ್ರಸಾದ್ ನಾಯಕ್, ಅಶೋಕ್ ಲೋಬೋ, ಅಶ್ವಥ್,  ಹರ್ನಿಷ್ ರಾಜ್ ಮತ್ತು ಮುಬಿನ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ