image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಡುಪಿ ಕೊಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನ ಮೊದಲ ರಫ್ತು ಹಡಗು ನಾರ್ವೆಯ ವಿಲ್ಸನ್ ಎಎಸ್‌ಎಗೆ

ಉಡುಪಿ ಕೊಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನ ಮೊದಲ ರಫ್ತು ಹಡಗು ನಾರ್ವೆಯ ವಿಲ್ಸನ್ ಎಎಸ್‌ಎಗೆ

ಉಡುಪಿ : ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆ ಆದ ಕೊಚಿನ್ ಶಿಪ್ ಯಾರ್ಡ್ ಲಿಮಿಟೆಡ್ (ಸಿ ಎಸ್ ಎಲ್) ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್, ಇಂದು ನಾರ್ವೆಯ ವಿಲ್ಸನ್ ಎಎಸ್ ಎ ಸಂಸ್ಥೆ ಗಾಗಿ ನಿರ್ಮಿಸಲಾಗುತ್ತಿರುವ ಆರು 3800 TDW ಸಾಮರ್ಥ್ಯದ ಸಾಮಾನ್ಯ ಸರಕು ಹಡಗುಗಳ (ಜನರಲ್ ಕಾರ್ಗೋ) ಸರಣಿಯ ಮೊದಲ ಹಡಗನ್ನು ಅನಾವರಣ ಮಾಡಿತು. ಈ ಉದ್ಘಾಟನೆ ಮೂಲಕ ಸಿ ಎಸ್ ಎಲ್ ಸಂಸ್ಥೆಯು ಭಾರತ ಸರಕಾರದ ಆತ್ಮ ನಿರ್ಭರ ಉಪಕ್ರಮಕ್ಕೆ, ಅದೇ ರೀತಿ 'ಮೇಕ್ ಇನ್ ಇಂಡಿಯಾ" ಮತ್ತು "ಮೇಕ್ ಫಾರ್ ದಿ ವರ್ಲ್ಡ್" ಕಾರ್ಯಕ್ರಮಕ್ಕೆ ತನ್ನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಕೊಚಿನ್ ಶಿಪ್ ಯಾರ್ಡ್ ನ ತಾಂತ್ರಿಕ ನಿರ್ದೇಶಕರಾದ ಶ್ರೀ ಬಿಜೋಯ್ ಭಾಸ್ಕರ್ ಹೇಳಿದರು. ನಾರ್ವೆಯ ಬರ್ಗೆನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಲ್ಸನ್ ಎ ಎಸ್ ಎ ಸಂಸ್ಥೆಯು, ಯುರೋಪ್‌ನಲ್ಲಿ ಪ್ರಮುಖ ಕಿರು ಸಮುದ್ರ ನೌಕಾಪಡೆ ನಿರ್ವಾಹಕ ಸಂಸ್ಥೆಯಾಗಿ ಮತ್ತು ಯುರೋಪಿನಾದ್ಯಂತ ಸುಮಾರು 15 ಮಿಲಿಯನ್ ಟನ್ ಒಣ ಸರಕುಗಳನ್ನು ಸಾಗಿಸುತ್ತದೆ. ಕಂಪನಿಯು 1500 ರಿಂದ 8500 DWT ವರೆಗಿನ ಸಾಮರ್ಥ್ಯ ಹೊಂದಿರುವ ಸುಮಾರು 130 ಹಡಗುಗಳ ನೌಕಾಪಡೆಯನ್ನು ನಿರ್ವಹಿಸುತ್ತದೆ.

ಇದಲ್ಲದೆ, ವಿಲ್ಸನ್ ಎ ಎಸ್ ಎ ಸಂಸ್ಥೆಯು ಜೂನ್ 2024 ರಲ್ಲಿ ನಾಲ್ಕು, 6300 TDW ಒಣಸರಕು ಹಡಗುಗಳು ಹಾಗು ಸೆಪ್ಟೆಂಬರ್ 2024 ರಲ್ಲಿ ನಾಲ್ಕು 6300 TDW ಒಣಸರಕು ಹಡಗುಗಳಂತೆ ಒಟ್ಟು ಎಂಟು 6300 TDW ಒಣಸರಕು ಹಡಗುಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದನ್ನೊಳಗೊಂದು ಒಟ್ಟಾರೆಯಾಗಿ 14 ಹಡಗುಗಳ ಒಪ್ಪಂದಕ್ಕೆ ಉಡುಪಿ ಕೊಚಿನ್ ಶಿಪ್ ಯಾರ್ಡ್ (UCSL) ಸಂಸ್ಥೆಯೊಂದಿಗೆ ಸಹಿ ಹಾಕಲಾಗಿದೆ. ಈ ಎಲ್ಲಾ ಯೋಜನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ.

ಉಡುಪಿ ಕೊಚಿನ್ ಶಿಪ್ ಯಾರ್ಡ್ (UCSL), ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (CSL) ಸಂಸ್ಥೆಯ ಸ್ವಾದಿನಕ್ಕೆ ಬಂದ ಬಳಿಕ ಎರಡು 627 ಬೊಲ್ಲಾರ್ಡ್ ಪುಲ್ ಟಗ್ (62 Bollard pull Tug) ಗಳನ್ನು ಅದಾನಿ ಹರ್ಬರ್ ಸರ್ವಿಸಸ್ ಲಿಮಿಟೆಡ್ ಕಂಪನಿಯ ಓಷನ್ ಸ್ಪಾರ್ಕಲ್ ಲಿಮಿಟೆಡ್ ಗೆ ಯಶಸ್ವಿಯಾಗಿ ಹಸ್ತಾಂತರಿಸಲಾಗಿದ್ದು, ಒಂದು 701 ಬೊಲ್ಲಾರ್ಡ್ ಪುಲ್ ಟಗ್ (70T Bollard pull Tug) ಅನ್ನು ಪೋಲ್ಕಾರ್ ಮರಿಟೈಮ್ ಲಿಮಿಟೆಡ್ ಗೆ ಹಸ್ತಾಂತರಿಸಲಾಗಿದೆ. ಇದಲ್ಲದೆ UCSL ಕೇಂದ್ರವು ಓಷನ್ ಸ್ಪಾರ್ಕಲ್ ಲಿಮಿಟೆಡ್ ಗೆ (ಮೂರು) ಮತ್ತು ಪೋಲ್ಲ್ಯಾರ್ ಮರಿಟೈಮ್ ಲಿಮಿಟೆಡ್ ಗೆ (ಒಂದು) ಪುನರಾವರ್ತಿತ ಆದೇಶಗಳಂತೆ ಒಟ್ಟು ನಾಲ್ಕು 701 ಬೊಲ್ಲಾರ್ಡ್ ಪುಲ್ ಟಗ್ (70T Bollard pull Tug) ಗಳ ಹೆಚ್ಚಿನ ಒಪ್ಪಂದಗಳನ್ನು ಸಹ ಪಡೆದುಕೊಂಡಿದೆ.

ಈ ಹಡಗು 89.43 ಉದ್ದ, 13.2 ಮೀಟರ್ ಅಗಲ, ಮತ್ತು 4.2 ಮೀಟರ್ ಡ್ರಾಫ್ಟ್ ಹೊಂದಿದ್ದು, ಹಡಗುಗಳನ್ನು ನೆದರ್ಲ್ಯಾಂಡ್ಸ್ ನ ಕೆನೋಷಿಪ್ ಇಂಟರ್ನ್ಯಾಷನಲ್ ಸಂಸ್ಥೆ ವಿನ್ಯಾಸಗೊಳಿಸುತ್ತಿದೆ. ಯುರೋಪ್ ಕರಾವಳಿಯ ಜಲಮಾರ್ಗದಲ್ಲಿ ಸಾಮಾನ್ಯ ಸರಕು ಸಾಗಣೆಗಾಗಿ ಪರಿಸರ ಸ್ನೇಹಿ ಡೀಸೆಲ್ ಎಲೆಕ್ಟ್ರಿಕ್ ಹಡಗಿನಂತೆ ನಿರ್ಮಿಸಲಾಗಿದೆ.

ಉಡುಪಿ-ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (UCSL) ಸಂಸ್ಥೆಯು ಕೊನೊಷಿಪ್ ಇಂಟರ್ನ್ಯಾಷನಲ್ ಸಂಸ್ಥೆ ಸಹಯೋಗದೊಂದಿಗೆ ಈ ಅತ್ಯುತ್ತಮ ನೌಕೆಯನ್ನು ನಿರ್ಮಿಸುವ ಮೂಲಕ ಅಂತರಾಷ್ಟ್ರೀಯ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿದೆ. ಕೊಚ್ಚಿ ನ್ ಶಿಪ್ ಯಾರ್ಡ್ ಲಿಮಿಟೆಡ್ ಮತ್ತು ಅದರ ಅಂಗ ಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಎರಡು ಕೂಡ ಪಾಶ್ಚಾತ್ಯ ಯುರೋಪಿಯನ್ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಹಡಗುಗಳನ್ನು ನಿರ್ಮಿಸಲು ತಮ್ಮ ಅಚಲವಾದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಉಡುಪಿ CSL ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಬರುತ್ತಿರುವ ಮರು ಒಪ್ಪಂದಗಳು ಯಾರ್ಡ್ ಸಾಮರ್ಥ್ಯ ಮತ್ತು ಉತ್ಕೃಷ್ಟತೆಯ ಮೇಲೆ ಗ್ರಾಹಕರು ಇರಿಸಿರುವ ನಂಬಿಕೆ ಮತ್ತು ವಿಶ್ವಾಸವನ್ನು ಒತ್ತಿ ಹೇಳುತ್ತವೆ' ಎಂದು ಸಿಎಸ್ಎಲ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಧು ನಾಯ‌ರ್ ಹೇಳಿದರು.

ಈ ಹಿಂದೆ ಟೆಸ್ಮಾ ಶಿಪ್ ಯಾರ್ಡ್ ಲಿಮಿಟೆಡ್ ಆಗಿದ್ದ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಸಂಸ್ಥೆಯನ್ನು ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ 2020 ರಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. ಈ ಸಂಸ್ಥೆಯನ್ನು 3 ವರ್ಷಗಳ ಕಿರು ಅವಧಿಯಲ್ಲಿಯೇ ಲಾಭಗಳಿಸುವ ಸಂಸ್ಥೆಯನ್ನಾಗಿ ಪರಿವರ್ತಿಸಲಾಯಿತು. ಉಡುಪಿ -ಸಿ ಎಸ್ ಎಲ್ ಇಂದು 1500 ಕೋಟಿ ರೂಗಳಿಗಿಂತ ಹೆಚ್ಚು ಮೌಲ್ಯದ ಗ್ರಾಹಕರ ಮಾರಾಟ ಒಪ್ಪಂದವನ್ನು (Order Book) ಹೊಂದಿದೆ ಎಂದು ಕೊಚ್ಚಿನ್ ಶಿಪ್ ಯಾರ್ಡ್  ಎಂದು ಹೇಳಿದರು.

ರಾಯಲ್ ನಾರ್ವೆ ರಾಯಭಾರ ಕಚೇರಿಯ ಸಚಿವರ ಸಲಹೆಗಾರರು ಮತ್ತು ಯೋಜನೆಯ ಉಪಮುಖ್ಯಸ್ಮರಾದ Ms. ಮಾರ್ಟಿನ್ ಆಮ್ಯಾಲ್ ಭೋಥೀಮ್ ಅವರು ವಿಲ್ಸನ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ Mr. ಐನಾರ್ ಟೊರ್ನೇಸ್ ಅವರೊಂದಿಗೆ,  ಕೊಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಧು ಎಸ್ ನಾಯರ್,  ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಹರಿಕುಮಾರ್ ಎ. ಮತ್ತು ಶಿಪ್ ಯಾರ್ಡ್ ನ ಇತರ ಹಿರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ