ಮಂಗಳೂರು : ಅಖಿಲ ಭಾರತ ಮುದ್ರಣಕಾರರ ಒಕ್ಕೂಟವು ರಾಷ್ಟ್ರ ಮಟ್ಟದ ಸದಸ್ಯತ್ವ ಹೊಂದಿರುವ ಸಂಸ್ಥೆಯಾಗಿದ್ದು ತನ್ನ ಗೌರ್ನಿಂಗ್ ಸಭೆಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ನಡೆಸುವುದು ರೂಢಿಯಾಗಿದೆ. 267 ನೇ ಜಿ.ಸಿ ಸಭೆ ಗೋವಾದಲ್ಲಿ ದಿನಾಂಕ 13.12.2024 ರಂದು ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಕುಮಾರ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.14 ರಂದು ಅಖಿಲ ಭಾರತ ಮುದ್ರಣ ಒಕ್ಕೂಟ ಸಂಘದಿಂದ 2 ನೇ ಅಂತರಾಷ್ಟ್ರೀಯ MSME ಟೆಕ್ ಸಮ್ಮಿಟ್ ನ್ನು ಓಷಿಯನ್ ಪರ್ಲ್ ನಲ್ಲಿ ಆಯೋಜಿಸಲಾಗಿದೆ. ಇಲ್ಲಿ ದೇಶದ ವಿವಿಧ ರಾಜ್ಯಗಳಿಂದ ಫೆಡೆರೇಶನ್ ಜಿ.ಸಿ ಸದಸ್ಯರುಗಳು ಪ್ರಿಂಟಿಂಗ್ ,ಪಬ್ಲಿಷಿಂಗ್, ಪ್ಯಾಕೆಜಿಂಗ್ ಕುರಿತ ವಿಷಯಗಳ ಬಗ್ಗೆ ಚರ್ಚಿಸಿ ಮುದ್ರಣ ಕ್ಷೇತ್ರದ ಮುಂದಿನ ಹಾದಿ ಹೇಗೆ ಸಾಗಬೇಕು ಎಂಬುದರ ಬಗ್ಗೆ ಸವಿರವಾಗಿ ಚರ್ಚೆ ನಡೆಯಲಿದೆ. ಇದಲ್ಲದೆ ಮುದ್ರಣ ಕ್ಷೇತ್ರದ ಕ್ಷೀಪ್ರ ಬೆಳವಣಿಗೆಗಳು, ಬದಲಾವಣೆಗಳು, ಕಚ್ಚಾ ವಸ್ತುಗಳ ಸಮಸ್ಯೆ, ವಿಭಾಗೀಯ ಸಮಸ್ಯೆಗಳು ಸರಕಾರದ ನೀತಿಗಳು, ಸದಸ್ಯರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತದೆ ಎಂದರು.
ಈ ಸಮಾರಂಭವನ್ನು ದ.ಕ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರೀಜೇಶ್ ಚೌಟರವರು ಉದ್ಘಾಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಎಂ.ಜಿ ಬಾಲಕೃಷ್ಣ ರವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಸಭೆಯು ಅಂತರಾಷ್ಟ್ರೀಯ ಸ್ವರೂಪವಾಗಿದ್ದು ಮುದ್ರಣ ಕ್ಷೇತ್ರದಲ್ಲಿ ಪ್ರತಿಭಾವಂತ ಉದ್ಯಮಿಗಳು ,ದೇಶ ವಿದೇಶಗಳಿಂದ ಮುದ್ರಣ ಕ್ಷೇತ್ರದ ತಂತ್ರಜ್ಙರು ಹಾಗೂ ಅಂತರಾಷ್ಟ್ರೀಯ ಮಟ್ಟದ ಮುದ್ರಣ ಕ್ಷೇತ್ರದ ಸಂಬಧಿಸಿದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಿ.ಎರ್ ಜನಾರ್ಧನ್, ಸತೀಶ್ ಮಲ್ಹೋತ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.