image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿ.17 ಕ್ಕೆ ಯಕ್ಷ ಪ್ರತಿಭೆ ಮಂಗಳೂರು ಇದರ 16ನೇ ವರ್ಷದ ಸಂಭ್ರಮ

ಡಿ.17 ಕ್ಕೆ ಯಕ್ಷ ಪ್ರತಿಭೆ ಮಂಗಳೂರು ಇದರ 16ನೇ ವರ್ಷದ ಸಂಭ್ರಮ

ಮಂಗಳೂರು: ಯಕ್ಷ ಪ್ರತಿಭೆ ಮಂಗಳೂರು ಇದರ 16ನೇ ವರ್ಷದ ಸಂಭ್ರಮ, ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣೆ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಕಾರ್ಯಕ್ರಮ ಡಿ.17ರಂದು ಸಂಜೆ 5:45ರಿಂದ ನಗರದ ಮಂಗಳಾದೇವಿ ದೇವಸ್ಥಾನದ ಮುಂಭಾಗ ನಡೆಯಲಿದೆ ಎಂದು ಸಂಘಟನೆ ಅಧ್ಯಕ್ಷ ಸಂಜಯ್ ಕುಮಾರ್ ಶೆಟ್ಟಿ   ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ವರ್ಷದ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ ಇವರಿಗೆ ನೀಡಲಾಗುವುದು. ಅಸ್ರಣ್ಣ ಗೌರವ ಸನ್ಮಾನವನ್ನು ಖ್ಯಾತ ಹೃದಯ ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಇವರಿಗೆ ಯಕ್ಷ ಸನ್ಮಾನ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಖ್ಯಾತ ಮೃದಂಗ ವಾದಕರು ಹಾಗೂ ಜನಾರ್ದನ ಅಮ್ಮುಂಜೆ ಸಂಘಟಕರು ಹಾಗೂ ಖ್ಯಾತ ನಿರೂಪಕರಿಗೆ ನೀಡಲಾಗುವುದು ಎಂದರು. 

ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ ಶುಭ ಹಾರೈಸಲಿದ್ದು ನಳಿನ್ ಕುಮಾರ್ ಕಟೀಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್, ಮೇಯರ್ ಮನೋಜ್ ಕುಮಾರ್, ಅರುಣ್ ಐತಾಳ್ ಪಾಲ್ಗೊಳ್ಳಲಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಗೌರವ ಸಲಹೆಗಾರ ಅಗರಿ ರಾಘವೇಂದ್ರ ರಾವ್, ಸುಜಾತ ಶೆಟ್ಟಿ, ಮೋಹನ್ ದಾಸ್ ರೈ ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ