image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಕೆಯ್ಯೂರಿನ ಆನೆಗಳ ಅಲೆದಾಟ : ಕೃಷಿಕರ ಬೆಳೆ ನಾಶ

ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಕೆಯ್ಯೂರಿನ ಆನೆಗಳ ಅಲೆದಾಟ : ಕೃಷಿಕರ ಬೆಳೆ ನಾಶ

ಪುತ್ತೂರು: ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಕ್ಕ ಪಕ್ಕ ಕಾಡಾನೆಯೊಂದು ಓಡಾಡಿ ಜನರಲ್ಲಿ ಆತಂಕ ಮೂಡಿಸಿದ್ದಲ್ಲದೆ, ಬಾರಿ ಸುದ್ದಿ ಮಾಡಿತ್ತು. ಈಗ  ಕೇರಳ ಭಾಗದಿಂದ ಕರ್ನಾಟಕಕ್ಕೆ ಬಂದಿದೆ ಎನ್ನಲಾದ ಕಾಡಾನೆಯ ಹಿಂಡೊಂದು ಪುತ್ತೂರಿನ ಕೆಯ್ಯೂರು ಗ್ರಾಮದ ದೇರ್ಲದಲ್ಲಿ ಡಿ. 3 ರಂದು ರಾತ್ರಿ ಕಾಣಿಸಿಕೊಂಡಿದೆ.  ಚಾಕೋಟೆ ಭಾಗದಲ್ಲಿ ಕೃಷಿ ಹಾನಿ ಮಾಡಿದ್ದ ಆನೆಗಳು ಅಲ್ಲಿ ಸಾರ್ವಜನಿಕರು ಗರ್ನಾಲ್ (ಪಟಾಕಿ) ಸಿಡಿಸಿ  ಓಡಿಸಲು ಪ್ರಯತ್ನಿಸಿದ್ದರು.

ಅಲ್ಲಿಂದ ನೇರವಾಗಿ ದೇರ್ಲದ ಕಡೆಗೆ ಹೆಜ್ಜೆ ಹಾಕಿದ್ದ ಆನೆಯ ಹಿಂಡು ದೇರ್ಲದ ಗೋಪಾಲಕೃಷ್ಣ ಭಟ್ ಎಂಬವರ ತೋಟಕ್ಕೆ ಲಗ್ಗೆ ಇಟ್ಟು,  ತೆಂಗಿನ ಗಿಡಗಳು ಸೇರಿದಂತೆ ಕೃಷಿಗೆ ಹಾನಿ ಮಾಡಿದೆ. ಮಾಡೂರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿರುವ ರಬ್ಬ‌ರ್ ನಿಗಮಕ್ಕೆ ಸೇರಿದ ರಬ್ಬರ್ ತೋಟಕ್ಕೆ ನುಗ್ಗಿದ ಕಾಡಾನೆಗಳು ರಬ್ಬರ್ ಟಾಪಿಂಗ್  ಶೆಡ್ ಗೆ ನುಗ್ಗಿ ರಬ್ಬರ್ ಪಾತ್ರೆಗಳಿಗೆ ಹಾನಿ ಮಾಡಿದೆ.

ಇದಲ್ಲದೆ ಅಮ್ಮಿನಡ್ಕ, ಮಳಿ, ಅಂಕೊತ್ತಿಮಾ‌ರ್, ನೂಜಿಬೈಲು, ಕನಕಮಜಲು, ದೇಲಂಪಾಡಿ ಮತ್ತು ಪೆರ್ಲಂಪಾಡಿ ಆಸುಪಾಸಿನಲ್ಲಿ ಹಾಗೆ ಕಾವು ಚಾಕೋಟೆಯಲ್ಲಿ ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ. ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ. ಪ್ರತ್ಯಕ್ಷದರ್ಶಿಗಳಾದ ರಬ್ಬರ್ ಟ್ಯಾಪಿಂಗ್ ಕೆಲಸಗಾರರ ಪ್ರಕಾರ ಒಂದು ಮರಿ ಆನೆ ಸಮೇತ ಐದು ಆನೆಗಳ ಹಿಂಡು ಇತ್ತೆನ್ನಲಾಗಿದೆ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಎರಡು ಆನೆ ಮಾತ್ರ ಓಡಾಡಿದೆ ಎಂದು ದೃಡಪಡಿಸಿದ್ದಾರೆ.

ಇದರ ಜೊತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜೀಪ್ ನಲ್ಲಿ ಸೈರನ್ ಮೊಳಗಿಸಿ, ಸಾರ್ವಜನಿಕರು ಸಂಜೆ ಮೂರು ಗಂಟೆಯ ನಂತರ ಒಂಟಿಯಾಗಿ ಓಡಾಡದಂತೆ ಎಚ್ಚರಿಕೆ ಕೊಡುತ್ತಿದ್ದಾರೆ.

Category
ಕರಾವಳಿ ತರಂಗಿಣಿ