image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ ಕರ್ನಾಟಕದಲ್ಲಿ ಜಲ ಸಾಹಸ ಕ್ರೀಡೆಗೆ ವಿಫುಲ ಅವಕಾಶ-ಮೇಜರ್ ಜನರಲ್ ದೇವಯ್ಯ

ಕರಾವಳಿ ಕರ್ನಾಟಕದಲ್ಲಿ ಜಲ ಸಾಹಸ ಕ್ರೀಡೆಗೆ ವಿಫುಲ ಅವಕಾಶ-ಮೇಜರ್ ಜನರಲ್ ದೇವಯ್ಯ

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಜಲ ಸಾಹಸ ಕ್ರೀಡೆಗೆ ವಿಫುಲ ಅವಕಾಶಗಳಿವೆ ಎಂದು ಕೋಸ್ಟಲ್ ಕರ್ನಾಟಕ ಸೈಲಿಂಗ್ ಕ್ಲಬ್ ನ ಅಧ್ಯಕ್ಷ ಮೇಜರ್ ಜನರಲ್ ದೇವಯ್ಯ ತಿಳಿಸಿದ್ದಾರೆ. ಅವರು ನಗರದ ಕ್ರೆಡೈ ಮಂಗಳೂರು ಘಟಕದ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡ ಕೋಸ್ಟಲ್ ಕರ್ನಾಟಕ ಸೈಲಿಂಗ್ ಕ್ಲಬ್ ನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಜಲ ಕ್ರೀಡೆಯ  ಜೊತೆಗೆ ಪ್ರಾದೇಶಿಕ ನೌಕಾಯಾನ ಕ್ರೀಡೆಯ ಅವಕಾಶಗಳನ್ನು ಪಟ್ಟಿ ಮಾಡಲಾಯಿತು. "ಸೇಲಿಂಗ್ ಎಕ್ಸಲೆನ್ಸ್" ಎಂಬ ಧೈಯ ವಾಕ್ಯದೊಂದಿಗೆ, ಕೋಸ್ಟಲ್ ಕರ್ನಾಟಕ ಸೈಲಿಂಗ್ ಕ್ಲಬ್ ಅಂತರರಾಷ್ಟ್ರೀಯ ಪ್ರಮಾಣಿತ ಸಂಸ್ಥೆ ಯಾಗಿದೆ.ಈ  ತರಬೇತಿ ಯಲ್ಲಿ ತೊಡಗಿಸಿ ಕೊಳ್ಳುವುದರ ಮೂಲಕ ಜಲ ಸಾಹಸ ಪ್ರಯಾಣ, ಪರ್ಯಟನೆ,ಜೀವನ ಕೌಶಲಗಳನ್ನು ತಿಳಿಸುವ ಶಿಕ್ಷಣದ  ಜೊತೆಗೆ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದ ಬಹುದು.2025 ಜನವರಿ 15ರಂದು ಮಂಗಳೂರಿನಲ್ಲಿ ನಡೆಯಲಿರುವ "ಮಂಗಳೂರು ರೆಗಾಟಾ" ಜೊತೆಗೆ ಮುಂಬರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದವರು ಹೇಳಿದರು.

ಕರ್ನಾಟಕವನ್ನು ನೌಕಾಯಾನ ಕ್ರೀಡೆಯ ದೃಷ್ಟಿಯಿಂದ ಪ್ರಮುಖ ಸ್ಥಾನಕ್ಕೆ ತರುವಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳ ಬೆಂಬಲ ನೀಡಲು ಆಸಕ್ತರು ಯಾವಾಗ ಬೇಕಾದರೂ ಕ್ಲಬ್‌ಗೆ ಸಂಪರ್ಕಿಸಬಹುದು ಎಂದವರು ತಿಳಿಸಿದ್ದಾರೆ.

ಸಮಾರಂಭದಲ್ಲಿ ಮಹೇಶ್ ಕಾಮತ್, ಹೆನ್ರಿ ಬ್ರಿಟೊ, ರಾಮೇಶ್ ರಾವ್ ಅವರಂತಹ ಹಿರಿಯ ನೌಕಾಯಾನಿಗರು ಭಾಗವಹಿಸಿದ್ದರು. ಈ ಹಿರಿಯರು ಕರಾವಳಿಯಲ್ಲಿ ನೌಕಾಯಾನ ಕ್ರೀಡೆಗೆ ಬಹುಕಾಲದಿಂದ ಪ್ರೇರಣೆಯಾಗಿರುತ್ತಾರೆ. ಅವರು ಹೊಸ ನೌಕಾಯಾನಿಗರ ತಂಡಕ್ಕೆ ಮಾರ್ಗದರ್ಶನ ಮತ್ತು ಬೆಂಬಲ ನೀಡಲು ಕೋರಲಾಯಿತು. ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ ವಿನೋದ್ ಪಿಂಟೊ,ಅತಿಥಿಗಳಾಗಿ ಹರೀಶ್ ಶೆಣೈ, ಗೌರವ ಹೆಗ್ಡೆ ಮತ್ತು ಕೋಸ್ಟಲ್ ಕರ್ನಾಟಕ ಸೈಲಿಂಗ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ