image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೋಸ್ಮೊ ಪೊಲಿಟನ್‌ ಕ್ಲಬ್ ವತಿಯಿಂದ ಅಂತ‌ರ್ ಜಿಲ್ಲಾ ಬ್ರಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್ 2024

ಕೋಸ್ಮೊ ಪೊಲಿಟನ್‌ ಕ್ಲಬ್ ವತಿಯಿಂದ ಅಂತ‌ರ್ ಜಿಲ್ಲಾ ಬ್ರಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್ 2024

ಬೆಂಗಳೂರು: ಕೋಸ್ಮೊ ಪೊಲಿಟನ್ ಕ್ಲಬ್ ವತಿಯಿಂದ ತಾರೀಕು 07.12.2024 ಮತ್ತು 08.12.2024ರಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಕೋಸ್ಮೊ ಪೊಲಿಟನ್ ಕ್ಲಬ್‌ ಒಳಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಆಹ್ವಾನಿತ ಅಂತ‌ರ್ ಜಿಲ್ಲಾ ಬ್ರಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್ 2024 ನಡೆಸುವ ಬಗ್ಗೆ ತೀರ್ಮಾನಿಸಿರುತ್ತೇವೆ. ಇಂತಹ ಸ್ಪರ್ಧೆಯು ಜಿಲ್ಲಾ ಮಟ್ಟದಲ್ಲಿ ನಡೆಯುವುದು ಅತೀ ವಿರಳವಾಗಿದೆ. ಈ ಸ್ಪರ್ಧೆಯಲ್ಲಿ ಪ್ರತಿಷ್ಠಿತ 10 ಕ್ಲಬ್‌ನ ಸದಸ್ಯರು ಭಾಗವಹಿಸುತ್ತಾರೆ. ಈ ಸ್ಪರ್ಧೆಗೆ ಆಕರ್ಷಕವಾದ ಬಹುಮಾನಗಳನ್ನು ನಾವು ಇಟ್ಟಿದ್ದೇವೆ ಎಂದು ಎಂದು ಟೂರ್ನ್‌ಮೆಂಟ್ ಚೇರ್‌ಮೆನ್ ಶ್ರೀಯುತ ರಾಜಗೋಪಾಲ ರೈ ತಿಳಿಸಿದರು. ಅವರು‌ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,

ನಮ್ಮ ಕ್ಲಬ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹಳೆಯ ಕ್ಲಬ್‌ಗಳಲ್ಲಿ ಒಂದು. 1901ರಲ್ಲಿ ನಮ್ಮ ಕ್ಲಬ್ ಅಸ್ತಿತ್ವಗೊಂಡಿತು. ನಮ್ಮ ಕ್ಲಬ್ ಅನೇಕ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸುಧಾರಣೆ, ಕ್ರೀಡೆ ಇತ್ಯಾದಿ ಉದ್ದೇಶಗಳಿಗೆ ಸಹಾಯ ಮಾಡುತ್ತಾ ಬಂದಿದೆ. ಇದಲ್ಲದೆ ಬೆಂಕಿ, ನೆರೆ, ಬಿರುಗಾಳಿ ಇತ್ಯಾದಿ ಪ್ರಾಕೃತಿಕ ವಿಕೋಪಗಳಿಗೆ ಪೀಡಿತರಾದವರಿಗೂ ಸಹಾಯಧನ ನೀಡುತ್ತಿದೆ. ನಮ್ಮ ಕ್ಲಬ್‌ನ ವತಿಯಿಂದ 'ಕಾರ್ಗಿಲ್ ನಿಧಿ'ಗೆ ಉದಾರ ಸಹಾಯಧನವನ್ನಿತ್ತು ರಾಷ್ಟ್ರೀಯ ಸಮಗ್ರತೆ ಮತ್ತು ಐಕ್ಯಮತವನ್ನು ಕಾಪಾಡಲು ಶ್ರಮಪಟ್ಟಿದೆ. ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ಸಮಯದಲ್ಲಿ ಪ್ರೋತ್ಸಾಹವನ್ನು ನೀಡಿ ಅತ್ಯುತ್ತಮ ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಹೊರತಂದ ಕೀರ್ತಿ ನಮ್ಮ ಕ್ಲಬ್‌ಗಿದೆ

ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ರೋಗನಿವಾರಕ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕ್ಲಬ್‌ನ ಪರವಾಗಿ ಸಿಹಿತಿಂಡಿ, ಹಣ್ಣುಹಂಪಲುಗಳನ್ನು ಹಂಚುತ್ತಾ ಬಂದಿರುತ್ತೇವೆ. ನಮ್ಮ ಕ್ಲಬ್‌ನಲ್ಲಿ ಬ್ರಿಲಿಯರ್ಡ್ಸ್ ಟೇಬಲ್, ಗ್ರಂಥಾಲಯ, ಟೇಬಲ್ ಟೆನಿಸ್, ಚೆಸ್, ಬ್ರಿಲಿಯರ್ಡ್ಸ್, ಕೇರಂ, ಕ್ರಿಕೆಟ್, ಬ್ಯಾಡ್‌ಮಿಂಟನ್ ಮುಂತಾದ ಕ್ರೀಡೆಗಳನ್ನು ನಡೆಸುವರೆ ಪ್ರಾಮುಖ್ಯತೆಯನ್ನು ಕೊಟ್ಟಿರುತ್ತೇವೆ.

ಕೋಸ್ಮೊ ಪೊಲಿಟನ್ ಕ್ಲಬ್ ವತಿಯಿಂದ ನಡೆಯುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಆಹ್ವಾನಿತ ಅಂತರ್ ಜಿಲ್ಲಾ ಬ್ರಿಲಿಯರ್ಡ್ಸ್ ಮತ್ತು ಸ್ಪೂಕರ್ ಚಾಂಪಿಯನ್ ಶಿಪ್ - 2024 ನ್ನು 07.12.2024  9.30 ಗೆ ದ.ಕ. ಜಿಲ್ಲಾಧಿಕಾರಿಯವರಾದ ಮಾನ್ಯ ಮುಲ್ಲೈ ಮುಗಿಲನ್ ಎಂ.ಪಿ.  ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಎ. ಸದಾನಂದ ಶೆಟ್ಟಿಯವರು ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಕಾರ್ಯದರ್ಶಿಗಳಾದ ಎಂ.ಸಿ. ಶೆಟ್ಟಿ, ಕ್ರೀಡಾ ಕಾರ್ಯದಶಿಗಳಾದ ಶ್ರೀ ಯೋಗೀಶ್ ಕುಮಾರ್, ಕೋಶಾಧಿಕಾರಿಗಳಾದ ಶ್ರೀ ದೇವಿಚರಣ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶ್ರೀ ಮನೋಜ್ ಕುಮಾರ್, ಶ್ರೀ ಪುಷ್ಪರಾಜ್ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ