image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏರ್‌ಟೆಲ್ AI-ಚಾಲಿತ ನೆಟ್‌ವರ್ಕ್, ಕರ್ನಾಟಕದ ಗ್ರಾಹಕರಿಗೆ ಬರುವ ಸ್ಪ್ಯಾಮ್ ಕರೆಗಳು ಮತ್ತು SMS ನ್ನು ತಡೆಯುವಲ್ಲಿ ಸಹಕಾರಿ

ಏರ್‌ಟೆಲ್ AI-ಚಾಲಿತ ನೆಟ್‌ವರ್ಕ್, ಕರ್ನಾಟಕದ ಗ್ರಾಹಕರಿಗೆ ಬರುವ ಸ್ಪ್ಯಾಮ್ ಕರೆಗಳು ಮತ್ತು SMS ನ್ನು ತಡೆಯುವಲ್ಲಿ ಸಹಕಾರಿ

ಮಂಗಳೂರು: ಭಾರ್ತಿ ಏರ್‌ಟೆಲ್‌ನ ಹೊಸ AI ಚಾಲಿತ ಸ್ಪ್ಯಾಮ್ ಪತ್ತೆ ಮಾಡುವ ವ್ಯವಸ್ಥೆಯು ಕರ್ನಾಟಕದ ಗ್ರಾಹಕರಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸಿದೆ. ಪ್ರಾರಂಭವಾದ 63 ದಿನಗಳಲ್ಲಿ, ಈ ಪ್ರವರ್ತಕ ಟೆಲಿಕಾಂ ಪರಿಹಾರವು ಕರ್ನಾಟಕದಲ್ಲಿ 682 ಮಿಲಿಯನ್ ಸಂಭಾವ್ಯ ಸ್ಪ್ಯಾಮ್ ಕರೆಗಳು ಮತ್ತು 46 ಮಿಲಿಯನ್ ಸ್ಪ್ಯಾಮ್ SMS ಸಂದೇಶಗಳನ್ನು ಯಶಸ್ವಿಯಾಗಿ ಗುರುತಿಸಿದೆ ಎಂದು ರಜನೀಶ್ ವರ್ಮ ಹೇಳಿದರು. ಅವರು ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿ,

ಕರ್ನಾಟಕದಲ್ಲಿನ ಎಲ್ಲಾ ಏರ್‌ಟೆಲ್ ಮೊಬೈಲ್ ಗ್ರಾಹಕರು ಈಗ ಸೇವೆಯನ್ನು ವಿನಂತಿಸುವ ಅಥವಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳದೆಯೇ ಉಚಿತ ಪರಿಹಾರಕ್ಕೆ ಸ್ವಯಂಚಾಲಿತ ಪ್ರವೇಶವನ್ನು ಹೊಂದಿದ್ದಾರೆ.

 ಗ್ರಾಹಕರು ಹೆಚ್ಚು ಹೆಚ್ಚು ತಂತ್ರಜ್ಞಾನವನ್ನು ಅವಲಂಬಿಸುತ್ತಿರುವುದರಿಂದ ಮತ್ತು ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದರಿಂದ, ಹಲವಾರು ಆನ್‌ಲೈನ್ ವಂಚನೆಗೆ ಕಾರಣವಾದ ಹಗರಣಗಳು ಮತ್ತು ಹಾನಿಕಾರಕ ಸಂವಹನಗಳಿಗೆ ಒಡ್ಡಿಕೊಳ್ಳುವ ಅಪಾಯವನ್ನು ಅವರು ಎದುರಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಶಂಕಿತ ಸ್ಕ್ಯಾಮ್ ಕರೆಗಳು ಮತ್ತು ಸಂದೇಶಗಳನ್ನು ಪೂರ್ವಭಾವಿಯಾಗಿ ಗುರುತಿಸಲು ವಿನ್ಯಾಸಗೊಳಿಸಲಾಗಿರುವ ಅತ್ಯಾಧುನಿಕ, AI- ಚಾಲಿತ ಪರಿಹಾರವನ್ನು ಪ್ರಾರಂಭಿಸಲು ಏರ್‌ಟೆಲ್ ಹೆಮ್ಮೆಪಡುತ್ತದೆ. ಸುಧಾರಿತ ಆಂತರಿಕ AI ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಎರ್‌ಟೆಲ್. ಕರ್ನಾಟಕದಲ್ಲಿರುವ ತನ್ನ 50 ಮಿಲಿಯನ್ ಗ್ರಾಹಕರಿಗೆ ಸುರಕ್ಷಿತ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುತ್ತಿದೆ. ಅವರು ಸ್ವೀಕರಿಸುವ ಕರೆಗಳು ಮತ್ತು ಸಂದೇಶಗಳ ಮೇಲೆ ಹೆಚ್ಚಿನ ಅರಿವು ಮತ್ತು ನಿಯಂತ್ರಣವನ್ನು ನೀಡುವ ಮೂಲಕ ಅವರಿಗೆ ಸಹಾಯ ಮಾಡುತ್ತಿದೆ.

ಏರ್‌ಟೆಲ್‌ನ ಡೇಟಾ ವಿಜ್ಞಾನಿಗಳಿಂದ ಆಂತರಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, Al-ಚಾಲಿತ ಪರಿಹಾರವು ಕರೆಗಳು ಮತ್ತು SMS ಗಳನ್ನು "ಶಂಕಿತ ಸ್ಪ್ಯಾಮ್” ಎಂದು ಗುರುತಿಸಲು ಹಾಗೂ ವರ್ಗೀಕರಿಸಲು ಸ್ವಾಮ್ಯತೆಯ ಅಲ್ಲಾರಿದಮ್ ಅನ್ನು ಬಳಸಿಕೊಳ್ಳುತ್ತದೆ ಎಂದರು.

Category
ಕರಾವಳಿ ತರಂಗಿಣಿ