ಮಂಗಳೂರು: ಮೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಜಯಕುಮಾರ್ ಆರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಕೆಪಿಟಿಸಿಎಲ್ ನಿರ್ದೇಶಕ (ಪ್ರಸರಣ) ರಾಗಿದ್ದ ಜಯಕುಮಾರ್ ಅವರು ಮಂಗಳವಾರ ಮೆಸ್ಕಾಂ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
ಕೆಪಿಟಿಸಿಎಲ್‌ನಲ್ಲಿ ಸಹಾಯಕ ಇಂಜಿನಿಯರ್ ಆಗಿ ನೇಮಕಗೊಂಡ ಅವರು ರಾಜ್ಯದ ವಿವಿದೆಡೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ತಾಂತ್ರಿಕ ನಿರ್ದೇಶಕರಾಗಿ,
ಕೆಪಿಟಿಸಿಎಲ್‌ನಲ್ಲಿ ನಿರ್ದೇಶಕರು (ಪ್ರಸರಣ) ಆಗಿ ಸೇವೆ ಸಲ್ಲಿಸಿದ ಜಯಕುಮಾರ್ ಅವರು ಪದೋನ್ನತಿಯೊಂದಿಗೆ ಮೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿತರಾಗಿದ್ದಾರೆ. ಅವರು ಮೂಲತ ಕೋಲಾರ ಜಿಲ್ಲೆಯವರು.