ಮಂಗಳೂರು: ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್‌ನ ಉದ್ಘಾಟನಾ ಕಾರ್ಯಕ್ರಮ ಹಾಗೂ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳು ಆಯೋಜಿಸುವ ಆವಿಷ್ಕಾರ್ 2024, ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇದೇ ಬರುವ ನವೆಂಬರ್ 30 ಹಾಗೂ ಡಿಸೆಂಬರ್ 01 ರಂದು ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದು ರೆವೆಂಡರ್ ಫಾದರ್ ಮೈಕಲ್ ಸಂತುಮಯರ್ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್‌ನ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ ಅವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಗ್ರ ಆರೋಗ್ಯ ವಿಜ್ಞಾನದ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾದ ಪ್ರೊ. ಯು. ಟಿ ಇಫ್ತಿಕಾರ್ ಫರೀದ್, ಫಾದರ್ ಮುಲ್ಲರ್ಸ್ ಚಾರಿಟೇಬಲ್ ಇನ್ಸಿಟ್ಯುಷನ್ಸ್‌ನ ನಿರ್ದೇಶಕರಾದ ರೆ. ಫಾ. ರಿಚರ್ಡ್ ಕುವೆಲ್ಲೊ, ಫಾದರ್ ಮುಲ್ಲರ್ಸ್ ಚಾರಿಟೇಬಲ್ ಇನ್ಸಿಟ್ಯುಷನ್ಸ್ ನ ನಿಯೋಜಿತ ನಿರ್ದೇಶಕರಾದ ರೆ. ಫಾ. ಫವೊಸ್ತಿನ್ ಲೋಬೊ, ಆಡಳಿತ ಮಂಡಳಿಯ ಸದಸ್ಯರಾದ ಅಜಿತ್ ಲೋಬೊ, ಮ್ಯಾಕ್ಸಿಂ ಮೊಂತೆರೊ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿರುವರು.
ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳು ಆಯೋಜಿಸುವ ಆವಿಷ್ಕಾರ್ 2024, ಸಾಂಸ್ಕೃತಿಕ ಕಾರ್ಯಕ್ರಮವು ನವೆಂಬರ್ 30 ನೇ ತಾರೀಕಿನಿಂದ ಆರಂಭಗೊಂಡು ಡಿಸೆಂಬರ್ 01ರ ತನಕ ಬೆಳಗ್ಗೆ 9.00 ರಿಂದ ರಾತ್ರಿ 8.00 ಗಂಟೆಯ ವರೆಗೆ ಎರಡು ದಿನಗಳ ಕಾಲ ನಿರಂತರ ಸಾಂಸ್ಕೃತಿಕ ವೈಭವದೊಂದಿಗೆ ವಿವಿಧ ಆಟಗಳು ಸಂಗೀತ ರಸಮಂಜರಿ, ನೃತ್ಯ ಸ್ಪರ್ಧೆ ಹಾಗೂ ವೈವಿದ್ಯಮಯ ಖಾದ್ಯಗಳ ರುಚಿಯನ್ನು ಕೂಡ ಸವಿಯಬಹುದು. ವಿಶೇಷ ಆಕರ್ಷಣೆಯಾಗಿ ಹೌಸಿ ಹೌಸಿ, ಕ್ರಿಸ್ಮಸ್ ಸ್ಟಾರ್ ಸ್ಪರ್ದೆ ಹಾಗೂ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಸ್ಪರ್ದೆಯನ್ನು ಹಮ್ಮಿಕೊಳ್ಳಲಾಗಿದೆ.
ಆವಿಷ್ಕಾರ್ 2024, ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನವಾದ ಭಾನುವಾರ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಮುಕ್ತ ಕಬಡ್ಡಿ ಪಂದ್ಯಾಟವು ನಡೆಯಲಿದೆ. ಮಿಲಾಗ್ರಿಸ್‌ನ ನೂತನ ನರ್ಸಿಂಗ್ ಕಾಲೇಜ್ ಹಾಗೂ ಆವಿಷ್ಕಾರ್ - 2024 ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಮಿಲಾಗ್ರಿಸ್ ನ ನೂತನ ನರ್ಸಿಂಗ್ ಕಾಲೇಜಿನ ಉದ್ಘಾಟನೆ ಹಾಗೂ ಆವಿಷ್ಕಾರ್ -2024 ಸಾಂಸ್ಕೃತಿಕ ಹಬ್ಬವು ನವೆಂಬರ್ 30ರಂದು ಶನಿವಾರ ಬೆಳಗ್ಗೆ, 11 ಗಂಟೆಯಿಂದ ರಾತ್ರಿ 9 ರವರೆಗೆ ಹಾಗೂ ಡಿಸೆಂಬರ್ 1 ಭಾನುವಾರ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಮಗ್ರ ಆರೋಗ್ಯ ವಿಜ್ಞಾನ ವಿಭಾಗ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾದ ಪ್ರೊ. ಯು. ಟಿ ಇಫಿಕಾರ್ ಫರೀದ್ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರೆ. ಫಾ. ರಿಚರ್ಡ್ ಕುವೆಲೊ, ರೆ. ಫಾ ಫವೊಸ್ಟಿನ್, ಅಜಿತ್ ಲೋಬೋ, ಮಾಕ್ಸಿಮ್ ಮೊಂತೆರೋ, ಡಾ. ಜಿವಿತಾ ಎಂ ಡಿ, ಡಾ. ಸುಜಯ್, ಸಿ ಎ ನಿತಿನ್ ಜೆ ಶೆಟ್ಟಿ ಸಿಸ್ಟರ್ ಮಸ್ಕರೇನಸ್, ಜೆಸಿಂತಾ ಫರ್ನಾಂಡಿಸ್, ಸಂಗೀತ ಫೆರ್ನಾಂಡಿಸ್, ಡಾ. ವೀಣಾ ಜಿ ತಾವೋ, ಡಾ. ಡಯಾನಾ ಲೋಬೋ, ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿರುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೆಲ್ವಿನ್ ವಾಸ್, ಮಮತಾ ಎಮ್, ಪ್ರೊ. ಡೆಂಜಿಲ್ ಡಿ ಕೊಸ್ತಾ ಉಪಸ್ಥಿತರಿದ್ದರು.