image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನ ಫಳೀರ್‌ನಲ್ಲಿ ಬೊಲೆರೊ ವಾಹನಕ್ಕೆ ಬೆಂಕಿ: ಅಪಾಯ ಇಲ್ಲದೆ ಪಾರಾದ ಪ್ರಯಾಣಿಕರು

ಮಂಗಳೂರಿನ ಫಳೀರ್‌ನಲ್ಲಿ ಬೊಲೆರೊ ವಾಹನಕ್ಕೆ ಬೆಂಕಿ: ಅಪಾಯ ಇಲ್ಲದೆ ಪಾರಾದ ಪ್ರಯಾಣಿಕರು

ಮಂಗಳೂರು: ನಗರದ ಫಳೀರ್‌ನಲ್ಲಿ ಬೊಲೆರೊ ವಾಹನಕ್ಕೆ ಬುಧವಾರ ರಾತ್ರಿ ಬೆಂಕಿ ತಗುಲಿದ್ದು, ಪಾಂಡೇಶ್ವರದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದರು. ವಾಹನವು ಸುಟ್ಟು ಕರಕಲಾಗಿದೆ.

'ಫನ್ನೀರ್‌ನ ಅಥೆನಾ ಆಸ್ಪತ್ರೆ ಬಳಿ ಸಾಗುತ್ತಿದ್ದಾಗ ಬೊಲೆರೊ ವಾಹನದ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ವಾಹನವನ್ನು ನಿಲ್ಲಿಸಿದ ಚಾಲಕ ಅದರಲ್ಲಿದ್ದ ಆರು ಮಂದಿ ಪ್ರಯಾಣಿಕರನ್ನೂ ಕೆಳಗಿಳಿಸಿದ್ದ. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ವಾಹನವನ್ನು ಆವರಿಸಿಕೊಂಡಿತು. ಸ್ಥಳೀಯರು ತಕ್ಷಣವೇ ಪಾಂಡೇಶ್ವರದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅವರು ಬಂದು ಬೆಂಕಿ ನಂದಿಸಿದರಾದರೂ ವಾಹನ ಸುಟ್ಟು ಕರಕಲಾಗಿದೆ.

'2015ನೇ ಸಾಲಿನಲ್ಲಿ ನೋಂದಣಿಯಾಗಿರುವ ಈ ವಾಹನವು ಬಾವುಟಗುಡ್ಡೆಯಲ್ಲಿರುವ ಜಾಸ್ ಆಲುಕ್ಕಾಸ್ ಜ್ಯುವೆಲ್ಲರಿ ಮಳಿಗೆಗೆ ಸೇರಿದ್ದಾಗಿದ್ದು, ಮಳಿಗೆಯ ಸಿಬ್ಬಂದಿಯನ್ನು ಕರೆದೊಯ್ಯುವಾಗ ಈ ಅವಘಡ ಸಂಭವಿಸಿದೆ' ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

Category
ಕರಾವಳಿ ತರಂಗಿಣಿ