ಮಂಗಳೂರು: ಸಂಗೀತ ಪರಿಷತ್ ಮಂಗಳೂರು(ರಿ), ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠ ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಇದೇ ನವಂಬರ 29 ರಿಂದ ಡಿಸೆಂಬರ್ 1ರವರೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳ ಮಂಗಳೂರು ಸಂಗೀತೋತ್ಸವ-2024 ನಡೆಯಲಿವೆ ಎಂದು ಸಂಗೀತ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಎಮ್.ವಿ.ಪ್ರದೀಪ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಂಗಳೂರಿನ ಸಂಗೀತ ಕಲೋಪಾಸಕರು ಪ್ರತೀ ವರ್ಷ ಎದುರು ನೋಡುತ್ತಿರುವ ಈ ಸಂಗೀತೋತ್ಸವವನ್ನು ನವೆಂಬರ್ 29 ರಂದು ಸಂಜೆ 5.00 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಿತಕಾಮಾನಂದಜೀ ಅವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಉದ್ಘಾಟಿಸಲಿದ್ದಾರೆ. ಇವರೊಂದಿಗೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಾಜೇಶ್, ಜಿ. ಶ್ರೀಮತಿ ಡಿ. ಪದ್ಮಾವತಿ, ಕಾರ್ಯನಿರ್ವಾಹಕ ನಿರ್ದೇಶಕರು, ಮೆಸ್ಕಾಂ, ಡಾ.ಸಿ.ಆರ್. ಬಲ್ಲಾಳ್, ಗೌರವಾಧ್ಯಕ್ಷರು, ಸಂಗೀತ ಪರಿಷತ್, ಮತ್ತು ಶ್ರೀ ಎಮ್.ವಿ. ಪ್ರದೀಪ್, ಅಧ್ಯಕ್ಷರು, ಸಂಗೀತ ಪರಿಷತ್, ಮಂಗಳೂರು, ಇವರುಗಳು ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ನಂತರ ಸಂಜೆ 5.15 ರಿಂದ ಚರ್ತಲ ಶ್ರೀ ರಂಗನಾಥ ಶರ್ಮ ಅವರು ಹಾಡುಗಾರಿಕೆಯನ್ನು ನಡೆಸಿಕೊಡಲಿದ್ದಾರೆ.
ದಿನಾಂಕ ನವಂಬರ್ 30 ರ ಸಂಜೆ 5.00 ಗಂಟೆಗೆ ಡಾ. (ಶ್ರೀಮತಿ) ಎನ್.ಜೆ.ನಂದಿನಿ ಅವರ ಹಾಡುಗಾರಿಕೆ ನಡೆಯಲಿದೆ. ದಶಂಬರ್ 1 ರಂದು ಸಂಗೀತ ಕಾರ್ಯಕ್ರಮಗಳು ಬೆಳಿಗ್ಗೆ 10.00 ಗಂಟೆಗೆ ಆರಂಭಗೊಳ್ಳಲಿವೆ. ಚೆನ್ನೈ ಜನಪ್ರಿಯ ಕಲಾವಿದರಾದ ಶ್ರೀ ಕುನ್ನಕ್ಕುಡಿ ಬಾಲಮುರಳಿಕೃಷ್ಣ ಅವರು ಹಾಡುಗಾರಿಕೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಕು.ಪ್ರಾಥನಾ ಬಂಗಾರಡ್ಕ ಅವರ ಹಾಡುಗಾರಿಕೆ ನಡೆಯಲಿದೆ ಮತ್ತು ನಮಾರೋಪ ಸಭೆಯ ನಂತರ ಸಂಜೆ 5.15 ಕ್ಕೆ ಚೆನ್ನೆಯ ಪ್ರಸಿದ್ಧ ಕೊಳಲುವಾದಕ ಶ್ರೀ ಜೆ.ಎ.ಜಯಂತ್ ಅವರು ವಣುವಾದನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಂಗಳೂರು ಸಂಗೀತೋತ್ಸವ 2024ರ ಸಮಾರೋಪ ಸಮಾರಂಭವು ದಶಂಬರ 1ರಂದು ಸಂಜೆ 4.00 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಿತಕಾಮಾನಂದರ್ಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಸಂಗೀತ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಎಮ್.ವಿ.ಪ್ರದೀಪ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀ ವಿನಯ ಭಟ್ ಪಿ.ಜಿ. ಮಹಾ ಪ್ರಭಂದಕರು, ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಶ್ರೀ ಕೃಷ್ಣ ಹೆಗ್ಡೆ, ಮಹಾ ಪ್ರಭಂದಕರು, ONGC-MRPL, ಶ್ರೀಮತಿ ರೇಣು ಕೆ. ನಾಯರ್, ಮಹಾ ಪಭಂದಕರು ಮತ್ತು ವಲಯ ಮುಖ್ಯಸ್ಥರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಶ್ರೀ ಬಿ. ಸುಧಾಕರ ಕೊಟಾರಿ, ಮಹಾ ಪ್ರಭಂದಕರು, ಕೆನರಾ ಬ್ಯಾಂಕ್, ಮಂಗಳೂರು, ಶ್ರೀ ರಾಜೇಶ್ ಮುಧೋಳ್, ಹಿರಿಯ ವಿಭಾಗೀಯ ವ್ಯವಸ್ಥಾಪಕ, ಭಾರತೀಯ ಜೀವ ವಿಮಾ ನಿಗಮ, ಉಡುಪಿ, ಶ್ರೀ ಗೋಪಾಲಕೃಷ್ಣ ಭಟ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು, SCDCC ಬ್ಯಾಂಕ್, ಮಂಗಳೂರು, ಶ್ರೀ ನಾಗೇಶ್ ಎ ಬಪ್ಪನಾಡು, ನಾಗಸ್ವರ ವಿದ್ಯಾನ್, ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ಮೃದಂಗ ಗುರುಗಳಾದ ಶ್ರೀ ಸೂರಳಿ ಆರ್. ಗಣೇಶ್ ಮೂರ್ತಿ, ಹರಿಹರಪುರ ಇವರನ್ನು ಅವರ ಕಲಾಸೇವೆಗಾಗಿ ಗೌರವಿಸಲಾಗುವುದು. ದತ್ತಿ ನಿಧಿಯ ವಿಜೇತ ಯುವ ಪ್ರತಿಭೆಗಳಾದ ಶ್ರೀ ಸುಮುಖ ಕಾರಂತ್ ಮತ್ತು ಶ್ರೀ ಪಿ.ಜಿ ಗೌತಮ ಭಟ್ ಅವರಿಗೆ ಯುವ ಪ್ರತಿಭಾ ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರತೀ ವರ್ಷದಂತೆ ಸಂಗೀತೋತ್ಸವದ ಪ್ರಯುಕ್ತ ನಡೆಸಲಾದ ಜೂನಿಯರ್ ಮತ್ತು ಸೀನಿಯರ್ ಸಂಗೀತ ಸ್ಪರ್ಧೆಯ ವಿಜೇತರನ್ನು ಬಹುಮಾನಿಸಲಾಗುವುದು. ಸಂಗೀತೋತ್ಸವದಲ್ಲಿ ಹೆಸರಾಂತ ಹಾಗು ಪ್ರತಿಭಾವಂತ ಯುವ ಕಲಾವಿದರ ಕಚೇರಿಗಳನ್ನು ಏರ್ಪಡಿಸಲಾಗಿದ್ದು ಸಂಗೀತಾಸಕ್ತರಿಗೆ ಮುಕ್ತ ಪ್ರವೇಶವಿರುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರು, ಕಾರ್ಯದರ್ಶಿ ಶ್ರೀ ಎ.ಮೋಹನದಾಸ್, ಶ್ರೀ ಸುಬ್ರಹ್ಮಣ್ಯ ಉಡುಪ, ಖಜಾಂಚಿ, ಸದಸ್ಯರಾದ ಶ್ರೀ ಎ. ರಂಗನಾಥ್, ಶ್ರೀ ಹರೀಶ್ ಕೋಟೆಕಾರ್, ಶ್ರೀ ಪ್ರಕಾಶ್ ಕೋಟೆಕಾರ್, ವಿಶಾಲಾಕ್ಷಿ, ಉಪಸ್ಥಿತರಿದ್ದರು.