image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ನ.26ರಿಂದ 30ರ ವರೆಗೆ 5 ದಿನಗಳ ಕಾಲ ಲಕ್ಷದೀಪೋತ್ಸವ ಮತ್ತು ಡಿ.1ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಪೂಜೆ

ಧರ್ಮಸ್ಥಳದಲ್ಲಿ ನ.26ರಿಂದ 30ರ ವರೆಗೆ 5 ದಿನಗಳ ಕಾಲ ಲಕ್ಷದೀಪೋತ್ಸವ ಮತ್ತು ಡಿ.1ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಪೂಜೆ

ದಕ್ಷಿಣ ಕನ್ನಡ : ಕಾರ್ತಿಕ ಮಾಸದ ಮಂಗಳ ಬಹುಳ ಏಕಾದಶಿಯಿಂದ ಅಮಾವಾಸ್ಯೆಯವರೆಗಿನ ಮಂಗಳಪರ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ನಡೆಯಲಿದೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವು ನ.26ರಿಂದ 30ರ ವರೆಗೆ ಜರುಗಲಿದ್ದು, ಡಿ.1ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಇರಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಲಲಿತಕಲಾ ಗೋಷ್ಠಿ - ನ. 28ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5-30 ರಿಂದ ನಾಗಸ್ವರ ವಾದನ, 7ರಿಂದ ಸಾತ್ವಿಕ ಸಂಗೀತ, 8ರಿಂದ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನಡೆಯಲಿದೆ.

ನ.29ರಂದು ಸಂಜೆ 5ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಉದ್ಘಾಟಿಸುವರು. ಬೆಂಗಳೂರಿನ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಂಶೋಧಕ ಡಾ.ಜಿ.ಬಿ.ಹರೀಶ, ನಿವೃತ್ತ ಉಪನ್ಯಾಸಕ ಡಾ.ಜೋಸೆಫ್ ಎನ್.ಎಂ., ಶಿಕ್ಷಕ ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ ಅವರಿಂದ ಉಪನ್ಯಾಸ ನಡೆಯಲಿದೆ. ರಾತ್ರಿ 8-30 ರಿಂದ ಭರತನಾಟ್ಯ ಕಾರ್ಯಕ್ರಮ ಇರಲಿದೆ.

ನ.30ರಂದು ಸಂಜೆ 5 ಗಂಟೆಯಿಂದ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನವನ್ನು ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನನೀ ಡಾ.ರಾ.ಗಣೇಶ ಉದ್ಘಾಟಿಸುವರು. ಲೇಖಕ, ಸಂಶೋಧಕ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆ ವಹಿಸುವರು. ಬಳಿಕ ಡಾ. ಪ್ರಮೀಳಾ ಮಾಧವ, ಡಾ. ಬಿ.ವಿ.ವಸಂತ ಕುಮಾರ್ ಮೈಸೂರು, ಪ್ರೊ. ಮೊರಬದ ಮಲ್ಲಿಕಾರ್ಜುನ ಅವರಿಂದ ಉಪನ್ಯಾಸ ನಡೆಯಲಿದೆ. ಬಳಿಕ ರಾತ್ರಿ 8-30ರಿಂದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮವಿದೆ. ನಿತ್ಯ ಸಂಜೆ 6-30 ರಿಂದ ರಾತ್ರಿ 11ರ ವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ - ಸಂಗೀತ ಹಬ್ಬವೇ ನಡೆಯಲಿದೆ.

Category
ಕರಾವಳಿ ತರಂಗಿಣಿ