image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ.25ರಿಂದ ಡಿ. 12ರ ತನಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಧಾನ ಸೇವೆಗಳು ನೆರವೇರುವುದಿಲ್ಲ

ನ.25ರಿಂದ ಡಿ. 12ರ ತನಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಧಾನ ಸೇವೆಗಳು ನೆರವೇರುವುದಿಲ್ಲ

ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನ.27ರಿಂದ ಡಿ.12ರ ತನಕ ನೆರವೇರಲಿದ್ದು, ಜಾತ್ರೋತ್ಸವದ ನಿಮಿತ್ತ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರವು ನ.25ರಿಂದ ಡಿ.12ರ ತನಕ ನೆರವೇರುವುದಿಲ್ಲ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವು ಸೇವೆಗಳು ನೆರವೇರುವುದಿಲ್ಲ. ಉಳಿದಂತೆ ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ ಎಂದು ದೇಗುಲದ ಪ್ರಕಟನೆಯಲ್ಲಿ ತಿಳಿಸಿದೆ.   

ಲಕ್ಷ ದೀಪೋತ್ಸವ (ನ.30), ಚೌತಿ (ಡಿ.5), ಪಂಚಮಿ (ಡಿ.6) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.7) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ.‌ ನ.30, ಡಿ.5, ಡಿ.6, ಡಿ. 7 ಮತ್ತು ಡಿ.12ರಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ. ನ.27ರಿಂದ ಡಿ.12ರ ತನಕ ಸಾಯಂಕಾಲದ ಆಶ್ಲೇಷಾ ಬಲಿ ಸೇವೆ ನೆರವೇರುವುದಿಲ್ಲ ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ