image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಳಂತಾಜೆ ಆಂಜನೇಯ ಸ್ವಾಮಿ ದೈವ ನರ್ತಕ ಶೀನ ಅಜಿಲ ನಿಧನ

ಇಳಂತಾಜೆ ಆಂಜನೇಯ ಸ್ವಾಮಿ ದೈವ ನರ್ತಕ ಶೀನ ಅಜಿಲ ನಿಧನ

ಪುತ್ತೂರು: ಕೆಯ್ಯೂರು ಗ್ರಾಮದ ಕಣಿಯಾರು ನಿವಾಸಿ ಪ್ರಸಿದ್ಧ ಆಂಜನೇಯ ಸ್ವಾಮಿಯ ದೈವ ನರ್ತಕ ಶೀನ ಅಜಿಲ ಕಣಿಯಾರು (84) ಅಸೌಖ್ಯದಿಂದ ನ.22ರಂದು  ತಮ್ಮ ಸ್ವಗೃಹದಲ್ಲಿ ನಿಧನರಾದರು.

ಇವರು ಕೆಯ್ಯೂರು ಗ್ರಾಮದ ಇಳಾಂತಜೆಯಲ್ಲಿ ಸುಮಾರು 15 ವರ್ಷಗಳಿಂದ  ಶ್ರೀ ಆಂಜನೇಯ ಸ್ವಾಮಿಯ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ಆಂಜನೇಯ ದೈವ ನರ್ತನ ಸೇವೆಯ ನಂತರ "ಬರುವ ವರ್ಷ ಸ್ವಾಮಿಯ ಸೇವೆ ಮಾಡಲು ನಾನು ಇರುವುದಿಲ್ಲ.  ನನಗೆ ಸ್ವಾಮಿ ಕಾಣಿಸಿಕೊಂಡಿದ್ದಾರೆ" ಎಂದು ಆತ್ಮೀಯರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಇಳಂತಾಜೆಯಲ್ಲಿ ಈ ವರ್ಷದ ಆಂಜನೇಯ ಸ್ವಾಮಿಯ ಸೇವೆ ಡಿಸೆಂಬರ್ 7 ಮತ್ತು 8ಕ್ಕೆ ನಿಗದಿಯಾಗಿದೆ. ಆದರೆ ಅದಕ್ಕೆ ಮೊದಲೇ ಇವರು ಇಹಲೋಕ ತ್ಯಜಿಸಿದ್ದಾರೆ.

 ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿರಿ ಚಾವಡಿ ತಮ್ಮನ ಪುರಸ್ಕಾರ, ತುಳುವೆರಾ ಕೂಟ ಪುತ್ತೂರು, ಮತ್ತು ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಮತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಮೃತರು ಪುತ್ರ ಕಿಟ್ಟ ಅಜಿಲ ಕಣಿಯಾರು, ಪುತ್ರಿ ಲೀಲಾವತಿ, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.

Category
ಕರಾವಳಿ ತರಂಗಿಣಿ